ಸಂಸತ್ತಿನಲ್ಲಿ ಕನ್ನಡಿಗರ ಪರವಾಗಿ ನನ್ನ ಧ್ವನಿ: ಪಿ.ಸಿ.ಮೋಹನ್

ಸಂಸತ್ತಿನಲ್ಲಿ ಕನ್ನಡಿಗರ ಪರವಾಗಿ ನನ್ನ ಧ್ವನಿ

ಕಳೆದ 15 ವರ್ಷಗಳಿಂದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದನಾಗಿ ಅವಿರತವಾಗಿ ಶ್ರಮಿಸಿರುವ ನಾನು, ಸಂಸತ್ತಿನಲ್ಲಿ ಕನ್ನಡಿಗರ ಪರ ಗಟ್ಟಿ ಧ್ವನಿಯಾಗಿ ಗುರುತಿಸಿಕೊಂಡಿರುವವನು. ನಾಡಿನ ಜ್ವಲಂತ ಸಮಸ್ಯೆಗಳನ್ನು ಕೇಂದ್ರದ ಗಮನಕ್ಕೆ ತರುವಲ್ಲಿ ಸರ್ವ ಪ್ರಯತ್ನಗಳನ್ನೂ ಮಾಡಿದ್ದೇನೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್ ಹೇಳಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಗೆಲುವು ಸಾಧಿಸುವ ಭರವಸೆ ವ್ಯಕ್ತಪಡಿಸಿ, ಮಾತನಾಡಿದ ಅವರು, ಕಳೆದ ಮೂರು ಅವಧಿಯಲ್ಲಿ ನಾನು ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳೇ ನನ್ನನ್ನು ಜನರು ಮತ್ತೆ ಆಯ್ಕೆ ಮಾಡುತ್ತಾರೆಂಬ ವಿಶ್ವಾಸ ಮೂಡಿಸಿದೆ ಎಂದಿದ್ದಾರೆ. ಅಲ್ಲದೇ, ಕರ್ನಾಟಕದಲ್ಲಿ ಇರುವಂತ ಸಮಸ್ಯೆಗಳನ್ನು ಕೇಂದ್ರದ ಗಮನಕ್ಕೆ ತರುವ ಸರ್ವ ಪ್ರಯತ್ನಗಳನ್ನೂ ನಾನು ಮಾಡಿದ್ದೇನೆ. ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಹೂಡಿಕೆ ವಿಚಾರವಾಗಿಯೂ ಕೇಂದ್ರದ ಗಮನ ಸೆಳೆಯುವ ಕೆಲಸಗಳು ನನ್ನಿಂದಾಗಿವೆ, ಕ್ಷೇತ್ರದ ಜನತೆಗೆ ನನ್ನ ಮೇಲೆ ನಂಬಿಕೆ ಇದೆ.

ಕೇಂದ್ರದ ಎಷ್ಟೋ ಯೋಜನೆಗಳನ್ನು ನನ್ನ ಕ್ಷೇತ್ರದ ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸಗಳನ್ನು ಮಾಡಿದ್ದೇನೆ. ಅಭಿವೃದ್ಧಿಯ ಪಥದಲ್ಲಿ ಬೆಂಗಳೂರನ್ನು ಕೊಂಡೊಯ್ಯಲು ನಾನು ಸಲ್ಲಿಸಿರುವ ಸೇವೆ ಈ ಬಾರಿಯೂ ನನಗೆ ಗೆಲುವು ತಂದು ಕೊಡಲಿದೆ. ನನ್ನ ಕ್ಷೇತ್ರದ ಜನರು ನನ್ನ ಜೊತೆಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ 4ನೇ ಬಾರಿಯ ಅವಕಾಶವನ್ನೂ ಸದುಪಯೋಗ ಪಡಿಸಿಕೊಂಡು ಕೇಂದ್ರದಲ್ಲಿ ಹಾಗೂ ಸಂಸತ್ತಿನಲ್ಲಿ ಕನ್ನಡಿಗರ ಪರ ಗಟ್ಟಿ ಧ್ವನಿಯಾಗಿ ನಾನು ನಿಲ್ಲಲ್ಲಿದ್ದೇನೆ ಎಂದಿದ್ದಾರೆ.

Leave a Comment