ಈರುಳ್ಳಿ ಮೇಲೆ ಹೀಗೆ ಸ್ವಲ್ಪ ಪೇಸ್ಟ್ ಹಾಕಿ ಸಾಕು ಅಮೇಲೆ ನೋಡಿ ಮ್ಯಾಜಿಕ್!

ಈರುಳ್ಳಿ ಮೇಲೆ ಚೂರು ಟೂತ್ ಪೇಸ್ಟ್ ಅನ್ನು ಹಾಕಿದರೆ ನಿಮ್ಮ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ. ಇದನ್ನು ಹೀಗೂ ಬಳಸಬಹುದು ಅಂತ ತಿಳಿದೇ ಇರಲಿಲ್ಲ. ಈರುಳ್ಳಿ ಇಂದ ಕೆಲವೊಂದು ಟಿಪ್ಸ್ ಮಾಡುವುದನ್ನು ತಿಳಿಸಿಕೊಡುತ್ತೀವಿ.

ಅರ್ಧ ಈರುಳ್ಳಿ ಕಟ್ ಮಾಡಿ ಅದರ ಮೇಲೆ ಟೂತ್ ಪೇಸ್ಟ್ ಹಾಕಿಕೊಳ್ಳಿ. ಕೆಲವೊಂದು ಬಾರಿ ದೋಸೆ ಹಚ್ಚಿನಲ್ಲಿ ದೋಸೆ ಮಾಡಿದರೆ ದೋಸೆ ಎದ್ದೇಳುವುದಿಲ್ಲ. ಇಲ್ಲವಾದರೆ ಅಂಬ್ಲೆಟ್ ಮಾಡಿದ ನಂತರ ದೋಸೆ ಮಾಡಿದರೆ ಅಂಬ್ಲೆಟ್ ಸ್ಮೆಲ್ ಬರುತ್ತಿರುತ್ತದೆ. ಆಗ ನೀವು ಅರ್ಧ ಈರುಳ್ಳಿ ಗೆ ಸ್ವಲ್ಪ ಟೂತ್ ಪೇಸ್ಟ್ ಹಾಕಿ ಹಾಗು ಹಚ್ಚಿಗೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಉಜ್ಜಬೇಕು. ಅಮೇಲೆ ಬರಿ ನೀರಿನಿಂದ ತೊಳೆಯಿರಿ. ಈ ರೀತಿ ಮಾಡಿದರೆ ಮೊಟ್ಟೆ ಸ್ಮೆಲ್ ಕೂಡ ಇರುವುದಿಲ್ಲ. ದೋಸೆ ಕೂಡ ಚೆನ್ನಾಗಿ ಬರುತ್ತದೆ.

ಇನ್ನು ಚಾಕು ಕೂಡ ತುಕ್ಕು ಇಡಿಯುವುದು ಅಥವಾ ಎಣ್ಣೆ ಜಿಡ್ಡು ಇರುತ್ತದೆ. ಆಗ ಅರ್ಧ ಈರುಳ್ಳಿಗೆ ಟೂತ್ ಪೇಸ್ಟ್ ಹಚ್ಚಿಕೊಂಡು ಚೆನ್ನಾಗಿ ಉಜ್ಜಬೇಕು.ಹೀಗೆ ಮಾಡಿದರೆ ಚಾಕು ಹೊಸದರಂತೆ ಆಗುತ್ತದೆ ಮತ್ತು ಒಳ್ಳೆಯ ಶೈನ್ ಕೂಡ ಬರುತ್ತದೆ.

ಇನ್ನು ಈ ರೀತಿ ಬಳಸಿದ ಈರುಳ್ಳಿಯನ್ನು ಎಸೆಯಬೇಡಿ ಸಣ್ಣದಾಗಿ ಕಟ್ ಮಾಡಿ ಮತ್ತು ನೀರು ಹಾಕಿ ಚೆನ್ನಾಗಿ ಕುದಿಸಬೇಕು. ಇದು ತುಂಬಾನೇ ಉಪಯೋಗಕ್ಕೆ ಬರುತ್ತದೆ. ಇನ್ನು ಒಂದು ಬೌಲ್ ಗೆ ಅಡುಗೆ ಸೋಡಾ ಮತ್ತು ಒಂದು ಚಮಚ ಸೋಪ್ ಪೌಡರ್ ಹಾಗು ಕುದಿಸಿದ ಈರುಳ್ಳಿ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಇದನ್ನು ಜಿರಳೆ ನೋಣ ಇರುವೆ ಜಾಗಕ್ಕೆ ಹಾಕಬಹುದು. ಈ ರೀತಿ ಮಾಡಿದರೆ ಈರುಳ್ಳಿ ಕಾಟ ಇರುವುದಿಲ್ಲ.

ಇನ್ನು ಪ್ರತಿದಿನ ಕಟ್ ಮಾಡಿದ ಈರುಳ್ಳಿಯಿಂದ ನಿಮ್ಮ ಕಿಚನ್ ಸಿಂಕ್ ಅನ್ನು ಕ್ಲೀನ್ ಆಗಿ ಉಜ್ಜಿ ತೊಳೆದರೆ ಜಿರಳೆ ಕಾಟ ಇರುವುದಿಲ್ಲ. ಏಕೆಂದರೆ ಈರುಳ್ಳಿ ಸ್ಮೆಲ್ ಗೆ ಜಿರಳೆಗಳು ಬರುವುದಿಲ್ಲ.

Leave a Comment