ಅಭಿಷೇಕ ಮಾಡಿದ ನೀರನ್ನು ಎನ್ ಮಾಡ್ಬೇಕ್.?

ಪ್ರತಿಯೊಬ್ಬರಿಗೂ ಕೂಡ ದೇವರಿಗೆ ದೂಪಾ ದೀಪ ಆರಾಧನೆ ಮೂಲಕ ದೇವರನ್ನ ಪೂಜೆ ಮಾಡುತ್ತಾರೆ ಹಾಗೆ ಅಭಿಷೇಕವನ್ನ ಸಹ ಮಾಡುತ್ತಾರೆ.  ಅಭಿಷೇಕವನ್ನ ಮಾಡಿದ ನೀರನ್ನು ಏನು ಮಾಡಬೇಕು ಎಂಬುದನ್ನು ತಿಳಿದೇ ಇರುವುದಿಲ್ಲ. ಈ ರೀತಿ ನಾವು ಮಾಡುವ ತಪ್ಪುಗಳು ನಮಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಭಿಷೇಕ ಮಾಡಿದ ನೀರನ್ನು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ. ಮನೆಯಲ್ಲಿ ದೇವರ ವಿಗ್ರಹಗಳು ಅಥವಾ ದೈವಿಕ ವಸ್ತುಗಳು ಇದ್ದೇ ಇರುತ್ತವೆ.

ಇಂತಹ ದೇವರ ವಿಗ್ರಹ ಅಥವಾ ದೈವಿಕ ವಸ್ತುಗಳಿಗೆ ಅದರದೇ ಆದ ದಿನದಲ್ಲಿ ಅಭಿಷೇಕವನ್ನು ಅರ್ಪಿಸಬೇಕು. ಈ ಅಭಿಷೇಕದಿಂದ ತುಂಬಾ ಒಳ್ಳೆಯ ಶುಭಫಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಅಭಿಷೇಕವನ್ನ ಮಾಡಿ ಮತ್ತೆ ಪುನರ್ಪ್ರತಿಷ್ಠಾಪನೆಯ ರೀತಿ ಮಾಡುವುದರಿಂದ ತುಂಬಾ ಒಳಿತಾಗುತ್ತದೆ. ವರಹಿ ತಾಯಿಯಾದರೆ ಪಂಚಮಿ ತಿಥಿಯ ದಿನದಂದು, ಸುಬ್ರಹ್ಮಣ್ಯ ಸ್ವಾಮಿ ವಿಗ್ರಹಕ್ಕೆ  ಫಷ್ಟಿಯ ದಿನ,ಗೋಮತಿ ಚಕ್ರ, ಸಾಲಿಗ್ರಾಮ, ಬಲಮುರಿ ಶಂಕು, ಮಹಾಲಕ್ಷ್ಮಿ ಕವಡೆಗಳಿಗೆ  ಪ್ರತಿ ಶುಕ್ರವಾರದಂದು ಇಂತಹ ವಸ್ತುಗಳಿಗೆ ಅಭಿಷೇಕವನ್ನ ಮಾಡಲೇಬೇಕು. ವಿಶೇಷವಾಗಿಯೂ ಕೂಡ ಮಾಡಬಹುದು ಪ್ರತಿ ಶುಕ್ರವಾರ ಹೆಚ್ಚಾಗಿ ಮಾಡಲೇಬೇಕು.

ಮಹಾ ವಿಷ್ಣುವಿಗೆ ಅತ್ಯಂತ ಪ್ರಿಯವಾದ ಏಕಾದಶಿಯ ದಿನದಂದು ಮಾಡಿದರೆ ತುಂಬಾ ವಿಶೇಷವಾದ ಫಲವನ್ನ ಪಡೆದುಕೊಳ್ಳಬಹುದು ಮತ್ತು ಸಾಕಷ್ಟು ಒಳ್ಳೆಯ ಶುಭಫಲವನ್ನ ಪಡೆದುಕೊಳ್ಳಲು ಸಾಧ್ಯ.  ಶಿವಲಿಂಗ ಅಥವಾ ಸಾಲಿಗ್ರಾಮ ಮತ್ತು ನಂದಿಲಿಂಗನಿಗೆ  ಮಹಾಪ್ರದೋಷದ ದಿನ ಅಥವಾ ಮಾಸಶಿವರಾತ್ರಿಯ ದಿನ ಮಾಡಿ ಅಭಿಷೇಕವನ್ನು ಮಾಡಿದರೆ ತುಂಬಾ ವಿಶೇಷವಾಗಿರುತ್ತದೆ ಮತ್ತು ಹೆಚ್ಚು ಪುಣ್ಯದ ಫಲವನ್ನ ಪಡೆದುಕೊಳ್ಳಲು ಸಾಧ್ಯ. ಅರಿಶಿಣದ ನೀರು, ಪನ್ನೀರಿನ ಅಭಿಷೇಕ, ಕುಂಕುಮದ ಅಭಿಷೇಕ ಮತ್ತು ಹಾಲಿನ ಅಭಿಷೇಕ ಈ ರೀತಿ ಎಲ್ಲಾ ದೇವಾನು ವಿಗ್ರಹಗಳಿಗೂ ಅಭಿಷೇಕವನ್ನ ಮಾಡಿದ ನಂತರ ಆ ವಿಗ್ರಹಕ್ಕೆ ನಾವು ಅಭಿಷೇಕ ಮಾಡಿದ ನೀರನ್ನು ಆ ನೀರನ್ನ ಹೂವಿನಿಂದ ನಮ್ಮ ತಲೆಗೆ ಹಾಕಿಕೊಳ್ಳಬೇಕು.

ಮನೆಯಲ್ಲಿ ಎಲ್ಲಾ ಸದ್ಯಸರಿಗೂ ಸಹ ಸಿಂಪಡಿಸಬೇಕು. ಹೂವನ್ನ ನೀವು ತೆಗೆದುಕೊಳ್ಳಬೇಕು ಅಭಿಷೇಕ ಮಾಡಿದ ನೀರನ್ನು ಯಾರು ತುಳಿಯದೇ ಇರುವ ಜಾಗದಲ್ಲಿ ಹಸಿರು ಗಿಡದ ಮೇಲೆ ಹಾಕಿದರೆ ತುಂಬಾ ಶುಭವಾಗುತ್ತದೆ ಮತ್ತು ಒಳ್ಳೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯ. ನಡೆಯುವಂತಹ ಪ್ರದೇಶದಲ್ಲಿ ಅಥವಾ ನಡೆಯುವಂತ ಜಾಗದಲ್ಲಿ ಎಂದಿಗೂ ಸಹ ಆ ನೀರನ್ನ ಹಾಕಬಾರದು ಒಂದು ವೇಳೆ ಹಾಕಿದ್ರೆ ಅದರಿಂದ ದೋಷಗಳು ಬರುವ ಸಾಧ್ಯತೆ ಇದೆ ಇದನ್ನ ಹಸಿರು ಗಿಡದ ಮೇಲೆ ಯಾರು ಓಡಾಡದ ಸ್ಥಳದಲ್ಲಿ ಹಾಕುವುದರಿಂದ ತುಂಬಾ ಒಳ್ಳೆಯ ಫಲವನ್ನು ಪಡೆದುಕೊಳ್ಳಲು ಸಾಧ್ಯ.

Leave a Comment