ದೇಹದಲ್ಲಿರುವ ತಾಪವನ್ನು 5 ನಿಮಿಷದಲ್ಲಿ ಕಡಿಮೆ ಮಾಡುವ ಅದ್ಬುತ ಮನೆಮದ್ದುಗಳು!

ಕೆಲವರಿಗೆ ಬೇಗನೆ ದೇಹದಲ್ಲಿ ಉಷ್ಣತೆ ಹೆಚ್ಚು ಆಗುತ್ತದೆ. ಸಾಮಾನ್ಯವಾಗಿ ಹುಳಿ ಉಪ್ಪು ಖಾರ ಹೆಚ್ಚು ತಿನ್ನುವುದರಿಂದ ಮೈ ಉಷ್ಣತೆ ಹೆಚ್ಚಿಸುವಂತೆ ಆಗುತ್ತದೆ. ಇದರಿಂದ ದೇಹದ ಉಷ್ಣತೆ ಜಾಸ್ತಿಯಾಗಿ ಹೊಟ್ಟೆ ನೋವು ಮೈಯೆಲ್ಲಾ ಬೊಬ್ಬೆ ಬರುವುದು ಚರ್ಮ ಪುಡಿ ಪುಡಿ ಆಗುವುದು ಮತ್ತು ಉರಿ ಮೂತ್ರ ಸಮಸ್ಸೆ ಕಾಡುವ ಸಾಧ್ಯತೆ ಇರುತ್ತದೆ. ಮುಖ್ಯವಾಗಿ ವಾತಾವರಣದಲ್ಲಿ ಏರು ಪೆರು ಆಗುವುದರಿಂದ ಚರ್ಮದ ಮೇಲೆ ಹಾಗು ದೇಹದ ಮೇಲೆ ಉಷ್ಣತೆಯ ಪ್ರಭಾವ ಹೆಚ್ಚಾಗಿ ಇರುತ್ತದೆ.

ಇನ್ನು ಕೆಲವು ಬಗೆಯ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಈ ಮನೆಮದ್ದು ಗಳನ್ನು ಉಪಯೋಗ ಮಾಡಿಕೊಂಡು ನಾವು ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಮನೆಯಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ಸಿಗುವ ಮೆಂತೆ ಕಾಳಿನಿಂದ ನಾವು ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ದೇಹದಲ್ಲಿ ಉಷ್ಣತೆ ಜಾಸ್ತಿಯಾದಾಗ ಸ್ವಲ್ಪ ಜಾಸ್ತಿ ಮೆಂತೆ ಕಾಳಿನಿಂದ ಗಂಜಿ ಮಾಡಿಕೊಂಡು ಕುಡಿಯುವುದರಿಂದ ದೇಹದ ಉಷ್ಣಂಶವನ್ನು ಕಡಿಮೆ ಮಾಡಿಕೊಳ್ಳಬಹುದು.

ಅಷ್ಟೇ ಅಲ್ಲದೆ ನಿಂಬೆ ಹಣ್ಣಿನ ಪಾನಕವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಇನ್ನು ಹೊಟ್ಟೆ ನೋವು ಜಾಸ್ತಿಯಾದರೆ ತಕ್ಷಣ ಎಳೆನೀರು ಕುಡಿಯುವುದರಿಂದ ಹೊಟ್ಟೆ ನೋವು ಕಡಿಮೆ ಆಗುತ್ತದೆ. ಇನ್ನು ಮನೆಯಲ್ಲಿ ಸಿಗುವ ಹಣ್ಣಿನಲ್ಲಿ ಕೂಡ ತಂಪಿನ ಅಂಶ ಕೂಡ ಸಿಗುತ್ತದೆ. ಮೊಸಂಬಿ ದಾಳಿಂಬೆ ಸೇವನೆ ಕೂಡ ತುಂಬಾ ಒಳ್ಳೆಯದು.

ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ದೇಹದ ಉಷ್ಣತೆ ಕಡಿಮೆ ಆಗುತ್ತದೆ ಹಾಗು ಮೂಲಂಗಿ ಪುದಿನ ರಸವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಪರಿಣಾಮಕರಿಯಾಗಿ ಕಡಿಮೆ ಆಗುತ್ತದೆ. ಇದರ ಜೊತೆ ಸೌತೆಕಾಯಿ ಪ್ರತಿದಿನ ಸೇವನೆ ಮಾಡಿದರೆ ದೇಹದ ತಂಪನ್ನು ಇದು ಕಾಪಾಡುತ್ತದೆ.

Leave a Comment