ನಿಮ್ಮ ಉಗುರಿನ ಮೇಲಿರುವ ಅರ್ಧ ಚಂದ್ರನ ಬಗ್ಗೆ ನಿಮಗೆ ಗೊತ್ತಾ!

ದೇಹದಲ್ಲಿರುವ ಪ್ರತಿಯೊಂದು ಅಂಗವೂ ಆರೋಗ್ಯವನ್ನು ಸೂಚಿಸುತ್ತದೆ.ಉದಾಹರಣೆಗೆ ಕಣ್ಣುಗಳು ಮತ್ತು ನಾಲಿಗೆಯನ್ನು ನೋಡಿ ವೈದ್ಯರು ಯಾವ ರೋಗ ಇದೆ ಎಂದು ತಿಳಿಸುತ್ತಾರೆ. ಇಷ್ಟೇ ಅಲ್ಲದೆ ವೈದ್ಯರು ಕೈಬೆರಳುಗಳನ್ನು ನೋಡಿಕೊಂಡು ದೇಹದಲ್ಲಿ ರಕ್ತ ಇದೆ ಅಥವಾ ಇಲ್ಲ ಎಂದು ಕೂಡ ಪತ್ತೆ ಹಚ್ಚುತ್ತಾರೆ.

ದೇಹದಲ್ಲಿ ಏನಾದರೂ ಏರುಪೇರು ಆದಾಗ ದೇಹವೇ ಮೊದಲೆ ಹಲವಾರು ಮುನ್ಸೂಚನೆಯನ್ನು ನೀಡುತ್ತದೆ ಎಂದು ವೈದ್ಯರು ತಿಳಿಸುತ್ತಾರೆ. ಅದೇ ರೀತಿ ಈ ಶರೀರದಲ್ಲಿ ಬದಲಾವಣೆ ಸೂಚಿಸುವ ಕೆಲವು ವಿಷಯಗಳು ಗೋಚರಿಸಿದರೂ ಕೂಡ ಅದರ ಅರ್ಥ ಯಾರಿಗೂ ಗೊತ್ತಿರುವುದಿಲ್ಲ.ಹೀಗಾಗಿ ಉಗುರುಗಳು ದೇಹದ ಬಗ್ಗೆ ಹಲವಾರು ಸೂಚನೆಯನ್ನು ನೀಡುತ್ತವೆ.

ಉಗುರುನಲ್ಲಿರುವ ಅರ್ಧ ಚಂದ್ರನ ಆಕೃತಿ ದೊಡ್ಡದಾಗಿ ಇದ್ದಾರೆ ಆರೋಗ್ಯ ತುಂಬಾ ಚೆನ್ನಾಗಿ ಇರುತ್ತದೆ ಎಂದು ಅರ್ಥ.ಚಂದ್ರ ಚಿಕ್ಕದಾಗಿ ಇದ್ದಾರೆ ರೋಗನಿರೋಧಕ ಶಕ್ತಿ ಕಡಿಮೆ ಇದೆ ಎಂದು ಅರ್ಥ. ಈ ರೀತಿ ಇದ್ದರೆ ಪಚನಕ್ರಿಯೆ ನಿಧಾನವಾಗಿ ಇರುತ್ತದೆ. ಒಂದು ವೇಳೆ ಚಂದ್ರ ಕಾರದ ಮಚ್ಚೆ ನಿಮ್ಮ ಉಗುರಿನಲ್ಲಿ ಇಲ್ಲದಿದ್ದರೆ ಥೈರಾಯ್ಡ್ ಗ್ರಂಥಿಗಳು ದುರ್ಬಲವಾಗಿದ್ದು ದಪ್ಪ ಆಗುವುದು ಮತ್ತು ಕೂದಲು ಉದುರುವುದು ಸಹಜವಾಗಿರುತ್ತದೆ.

ಇರುವ ಹತ್ತು ಬೆರಳುಗಳಲ್ಲಿ ಕನಿಷ್ಠ ಎಂಟು ಉಗುರಿನಲ್ಲಿ ಚಂದ್ರನ ಗುರುತು ಇರಬೇಕು. ಇಲ್ಲವಾದರೆ ವಿಟಮಿನ್ ಎ ಮತ್ತು ಅಗತ್ಯ ಇರುವ ಪೌಷ್ಟಿಕಾಂಶದ ಕೊರತೆ ಇದೆ ಎಂದು ಅರ್ಥ.ಉಗುರಿನಲ್ಲಿ ಒಮೊಮ್ಮೆ ಬಿಳಿ ಮಚ್ಚೆ ಕಾಣಿಸುತ್ತದೆ ಮತ್ತು ಮಾಯವಾಗುತ್ತದೆ ಇಂತಹ ಸಮಸ್ಸೆ ಹೊಂದಿರುವವರು ದೇಹ ಹೇಳುವಷ್ಟು ಆಹಾರ ಸೇವನೆ ಮಾಡುತ್ತಿಲ್ಲ ಎಂದು ಪರಿಗಣಿಸಲಾಗುತ್ತದೆ.ಉಗುರು ಅರಿಶಿಣ ಬಣ್ಣಕ್ಕೆ ತಿರುಗಿದರೆ ಲಿವರ್ ಅಥವಾ ಕಾಮಾಲೆ ರೋಗದ ಲಕ್ಷಣವೂ ಕೂಡ ಆಗಿರಬಹುದು. ಉಗುರುಗಳು ಜಾಸ್ತಿ ಬಿಳಿಯಾಗಿದ್ದರೆ ದೇಹದಲ್ಲಿ ರಕ್ತ ಕಡಿಮೆ ಇದೆ ಎಂದು ಸೂಚಿಸುತ್ತದೆ.

Leave a Comment