ರೇಷ್ಮೆ ಸೀರೆ ಬ್ಲೌಸ್ ನಲ್ಲಿ ಆಗಿರುವ ಬೆವರಿನ ಕಲೆ ಹಾಗು ವಾಸನೆಗೆ ಪರಿಹಾರ!

ರೇಷ್ಮೆ ಸೀರೆ ಎಂದರೆ ಸಿರಿ, ಹಬ್ಬ, ಸಂತೋಷ. ರೇಷ್ಮೆ ಸೀರೆಗೂ ಹೆಣ್ಣು ಮಕ್ಕಳಿಗೂ ಅವಿನಾಭಾವ ನಂಟು. ಅವರು ಎಷ್ಟೇ ಮಾರ್ಡ್ರನ್‌ ಆಗಿದ್ದರೂ, ರೇಷ್ಮೆ ಸೀರೆ ಎಂದರೆ ಮಾತ್ರ ಮನಸ್ಸು ಆ ಕಡೆಯೇ ವಾಲುತ್ತದೆ. ಸಾಮಾನ್ಯ ರೇಷ್ಮೇ ಸೀರೆಗಳನ್ನು ಖರೀದಿಸುವುದು ಮದುವೆ, ಗೃಹಪ್ರವೇಶ, ನಾಮಕರಣ, ಸೀಮಂತ ಸೇರಿದಂತೆ ಯಾವುದೇ ಶುಭ ಸಮಾರಂಭಗಳಿಗೆ ರೇಷ್ಮೆ ಸೀರೆಯೇ ಅತ್ಯಂತ ಶುಭ.

ಸಾವಿರಾರು ರುಪಾಯಿ ಕೊಟ್ಟು ಖರೀದಿಸುವ ರೇಷ್ಮೆ ಸೀರೆಗಳು ಹೆಣ್ಣು ಮಕ್ಕಳಿಗೆ ಸಾಕಷ್ಟು ನೆನಪುಗಳನ್ನು ಸಹ ಕಟ್ಟಿಕೊಡುವ ನೆನಪಿನ ಬುತ್ತಿ ಎಂದರೆ ತಪ್ಪಾಗಲಾರದು. ಇಂಥಾ ರೇಷ್ಮೆ ಸೀರೆಗಳು ಅಪ್ಪಿತಪ್ಪಿ ನಮ್ಮ ಲಕ್ಷ್ಯ ಮೀರಿ ಕಿಂಚಿತ್‌ ಕಲೆಯಾದರೂ ಆಗುವ ನೋವು ಅಷ್ಟಿಷ್ಟಲ್ಲ. ಮತ್ತೆ ಸೀರೆ ಹಾಳಾಗಬಹುದು ಎಂದು ಹೆದರಿ ಅದನ್ನು ನಾವೇ ಸ್ವತಃ ಮನೆಯಲ್ಲೇ ಒಗೆಯಲು ಸಹ ಪ್ರಯತ್ನಿಸುವುದಿಲ್ಲ, ಬದಲಾಗಿ ಆ ಕಲೆಯನ್ನು ತೆಗೆಯಲು ನೂರಾರು ರುಪಾಯಿ ಕೊಟ್ಟು ಡ್ರೈಕ್ಲೀನಿಂಗ್‌ ಕೊಡುತ್ತೇವೆ.

ಆದರೆ, ನೆಚ್ಚಿನ ರೇಷ್ಮೆ ಸೀರೆ ಕೊಳೆಯಾಗಿದ್ದರೆ ಡ್ರೈಕ್ಲೀನ್‌ ರೀತಿಯಲ್ಲೇ ಮನೆಯಲ್ಲೇ ಹೇಗೆ ಸ್ವಚ್ಛಗೊಳಿಸಬಹುದು, ಅದರ ಕಲೆಯನ್ನು ಹೇಗೆ ನಿವಾರಿಸಬಹುದು ಎಂಬುದನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ:

ಮನೆಯಲ್ಲಿ ರೇಷ್ಮೆ ಸೀರೆಗಳನ್ನು ಹೇಗೆ ತೊಳೆಯುವುದು

  1. ತಣ್ಣೀರಿನಿಂದ ತೊಳೆಯಿರಿ, ರಾಸಾಯನಿಕ ಇಲ್ಲದ

ಯಾವಾಗಲೂ ನಿಮ್ಮ ಪಟ್ಟು ಸೀರೆ ಅಥವಾ ರೇಷ್ಮೆ ಸೀರೆಗಳನ್ನು ತಣ್ಣೀರಿನಿಂದಲೇ ತೊಳೆಯಿರಿ. ಸೀರೆಯನನ್ಉ ಮೊದಲ ಬಾರಿಗೆ ನೀರಿನಲ್ಲಿ ಹಾಕುವಾಗ ಒಂದು ಬಕೆಟ್ ತಣ್ಣೀರನ್ನು ಬಳಸಿ ಮತ್ತು ನೀರಿನಲ್ಲಿ ಕೆಲವು ಹನಿ ಸೋಪ್‌ ಅನ್ನು ಸೇರಿಸಿ ಕೇವಲ ಒಂದರಿಂದ 2 ನಿಮಿಷ ನೆನಸಿ.

  1. ನಯವಾದ ಮಾರ್ಜಕ ಬಳಸಿ

ಹೆಚ್ಚು ರಾಸಾಯನಿಕಗಳಿರುವ ಮಾರ್ಜಕಗಳು ಸೀರೆಯನ್ನು ಹಾನಿಗೊಳಿಸುವುದರಿಂದ ತುಂಬಾ ಸೌಮ್ಯವಾದ ಮಾರ್ಜಕಗಳನ್ನೇ ಕಡ್ಡಾಯವಾಗಿ ಬಳಸಿ. ಅತಿ ಕಡಿಮೆ ರಾಸಾಯನಿಕ ಎಂದರೆ, ಉದಾಹರಣೆಗೆ ಬೇಬಿ ಶಾಂಪೂ ಯಾವುದೇ ಕಠಿಣ ರಾಸಾಯನಿಕಗಳು ಇಲ್ಲದೇ ಇರುವುದರಿಂದ ಅದನ್ನೂ ಸಹ ಬಳಸಬಹುದು.

  1. ಮಾರ್ಜಕಗಳಿಗೆ ಪರ್ಯಾಯ ನೈಸರ್ಗಿಕ ಸೋಪ್‌ಗಳು

ಮಾರ್ಜಕಗಳನ್ನು ಬಳಸದೇ ನೈಸರ್ಗಿಕವಾಗಿಯೇ ಸೀರೆಯನ್ನು ಸ್ವಚ್ಛಗೊಳಿಸಲು ಸೋಪ್ ಹಣ್ಣುಗಳು, ಸಾಬೂನಿನ ಬೀಜಗಳು, ರೀಥಾ ಅಥವಾ ಕುಂಕುಡುಕೈ ರೇಷ್ಮೆ ಸೀರೆಗಳನ್ನು ತೊಳೆಯಲು ಡಿಟರ್ಜೆಂಟ್ ಬಳಸುವುದಕ್ಕೆ ಉತ್ತಮ ನೈಸರ್ಗಿಕ ಪರ್ಯಾಯಗಳಾಗಿವೆ.

10 ರಿಂದ 15 ರೀಥಾ ಸೋಪ್ ಕಾಯಿಗಳನ್ನು ರಾತ್ರಿಯಿಡೀ ನೆನೆಸಿಡಿ. ಸೋಪ್‌ನ ಸಿಪ್ಪೆ ತೆಗೆದು ಅದರ ಒಳಗಿನ ಬೀಜಗಳನ್ನು ಪುಡಿ ಮಾಡಿ ದ್ರಾವಣವನ್ನು ಫಿಲ್ಟರ್ ಮಾಡಿ ಮತ್ತು ಅದನ್ನು ತಣ್ಣೀರಿನಲ್ಲಿ ಹಾಕಿ ದುರ್ಬಲಗೊಳಿಸಿ. ನಂತರ ರೇಷ್ಮೆ ಸೀರೆಯನ್ನು ದ್ರಾವಣದಲ್ಲಿ ನೆನೆಸಿ ತೊಳೆಯಿರಿ.

  1. ಗಟ್ಟಿಯಾಗಿ ಉಜ್ಜಬೇಡಿ

ರೇಷ್‌ಮೆ ಸೀರೆಗಳನ್ನು ತೊಳೆಯುವಾಗ ತುಂಬಾ ಗಟ್ಟಿಯಾಗಿ ಉಜ್ಜಲೇಬೇಡಿ. ಸೌಮ್ಯ, ನಯವಾಗಿ ತೊಳೆಯಬೇಕು. ಅಲ್ಲದೆ, ತೊಳೆಯುವ ನಂತರ ಸೀರೆಯಲ್ಲಿ ಯಾವುದೇ ಸಾಬೂನು ಗುಳ್ಳೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಮತ್ತು ತೊಳೆದ ನಂತರ ಯಾವುದೇ ಕಾರಣಕ್ಕೂ ಸೀರೆಯನ್ನು ಎತ್ತಿ ಒಗೆಯುವ ಪ್ರಯತ್ನ ಕೈಹಾಕಬೇಡಿ, ಇದರಿಂದ ಸೀರೆಗಳಲ್ಲಿ ಶಾಶ್ವತ ಸುಕ್ಕುಗಳು ಉಳಿಯಬಹುದು.

  1. ನೀವು ವಾಷಿಂಗ್ ಮೆಷಿನ್‌ನಲ್ಲಿ ರೇಷ್ಮೆ ಸೀರೆಗಳನ್ನು ತೊಳೆಯಬಹುದೇ?

ವಾಷಿಂಗ್‌ ಮೆಷಿನ್‌ನಲ್ಲಿ ರೇಷ್ಮೆ ಸೀರೆಗಳನ್ನು ತೊಳೆಯಬಹುದೇ ಎಂಬುದು ಬಹುತೇಕರ ಪ್ರಶ್ನೆಯಾಗಿರುತ್ತದೆ. ಹೌದು ಎಂದಾರೆ ನೀವು ಆಶ್ಚರ್ಯಪಡಬೇಕಿಲ್ಲ. ಆದರೆ ನೆನಪಿಡಿ ನಿಮ್ಮ ವಾಷಿಂಗ್‌ ಮೆಷಿನ್‌ನಲ್ಲಿ ಸೌಮ್ಯವಾದ ಸೈಕಲ್ ಅಥವಾ ಡೆಲಿಕೇಟ್‌ (ಹ್ಯಾಂಡ್‌ ವಾಷ್‌) ಆಯ್ಕೆಯನ್ನು ಹೊಂದಿದ್ದರೆ ನೀವು ರೇಷ್ಮೆ ಸೀರೆಯನ್ನು ಸಹ ವಾಚಿಂಗ್‌ ಮೆಷಿನ್‌ಗೆ ಹಾಕಬಹುದು.

ಆದರೆ ರೇಷ್ಮೆ ತುಂಬಾ ಮೃದುವಾದ ಮತ್ತು ಸೂಕ್ಷ್ಮವಾದ ಬಟ್ಟೆಯಾಗಿರುವುದರಿಂದ ಸೂಕ್ಷ್ಮ ಮೋಡ್‌ನಲ್ಲಿ ಮಾತ್ರ ಹಾಕಿ. ನಿಮ್ಮ ವಾಷಿಂಗ್‌ ಮೆಷಿನ್‌ ರೇಷ್ಮೆ / ಸೂಕ್ಷ್ಮ ಮೋಡ್ ಹೊಂದಿದ್ದರೆ ಮೋಡ್ ಅನ್ನು ಆಯ್ಕೆ ಮಾಡಿ ರೇಷ್ಮೆ ಸೀರೆಗಳನ್ನು ತೊಳೆಯಬಹುದು. ರೇಷ್ಮೆ ಸೀರೆಗಳನ್ನು ಡ್ರೈಯರ್‌ಗೆ ನಲ್ಲಿ ಇಡಬೇಡಿ. ನೀವು ಅವುಗಳನ್ನು ನೈಸರ್ಗಿಕವಾಗಿಯೇ ಹೆಚ್ಚು ಬಿಸಿಲು ಇರದ ವೇಳೆ ಗಾಳಿಯಲ್ಲಿ ಒಣಗಲು ಬಿಡಿ.

ಮೆಷಿನ್‌ನಲ್ಲಿ ರೇಷ್ಮೆ ಸೀರೆಯನ್ನು ಹಾಕುವಾಗ ಇದರ ಜತೆ ಇತರೆ ಬಟ್ಟೆಗಳನ್ನು ಅಥವಾ ಎರಡು ರೇಷ್ಮೆ ಸೀರೆಗಳನ್ನು ಹಾಕಬೇಡಿ, ಒಂದೊಂದೆ ಸೀರೆಗಳನ್ನು ಪ್ರತ್ಯೇಕವಾಗಿ ಹಾಕಿ ತೊಳೆಯಿರಿ.

  1. ರೇಷ್ಮೆ ಸೀರೆಗೆ ಅಂಟಿರುವ ಕಲೆ ನಿವಾರಣೆ ಹೇಗೆ

ರೇಷ್ಮೆ ಸೀರೆಗಳಿಂದ ಚಹಾ ಮತ್ತು ಕಾಫಿ ಕಲೆಗಳು ಅಟಿದ್ದರೆ ಅದನ್ನು ತೆಗೆದುಹಾಕುವಲ್ಲಿ ವಿನೆಗರ್ ಪರಿಣಾಮಕಾರಿಯಾಗಿದೆ. ಅರ್ಧ ಕಪ್ ಬಿಳಿ ಬಟ್ಟಿ ಇಳಿಸಿದ ವಿನೆಗರ್ ಅನ್ನು ಅರ್ಧ ಕಪ್ ನೀರಿನೊಂದಿಗೆ ಬೆರೆಸಿ. ಸೀರೆಯನ್ನು ಸಮವಾಗಿ ಇರಿಸಿ ಮತ್ತು ವಿನೆಗರ್ ಮಿಶ್ರಣವನ್ನು ಸ್ಪಂಜು ಅಥವಾ ಸ್ವಚ್ಛವಾದ ಬಟ್ಟೆಯಿಂದ ಕಲೆ ಇರುವ ಸ್ಥಳದಲ್ಲಿ ಹಚ್ಚಿ ನಯವಾಗಿ ಕೆಲವು ಸಮಯ ಉಜ್ಜಿರಿ, ಕೆಲ ನಿಧಾನವಾಗಿ ಮಾಯವಾಗುತ್ತದೆ.

  1. ರೇಷ್ಮೆ ಸೀರೆಯಲ್ಲಿ ಬೆವರಿನ ಕಲೆ ನಿವಾರಣೆ

ರೇಷ್ಮೆ ಸೀರೆಗಳಲ್ಲಿ ಮತ್ತೊಂದು ದೊಡ್ಡ ಹಾಗೂ ಸಾಮಾನ್ಯ ಸಮಸ್ಯೆ ಎಂದರೆ ಬೆವರಿನ ಕಲೆ. ಅದ್ಕಕೆ ಅತ್ಯುತ್ತಮ ಪರಿಹಾರೋಪಾಯ ಎಂದರೆ, ಯಾವುದೇ ಕಾರ್ಯಕ್ರಮ ಮುಗಿಸಿ ಮನೆಗೆ ಬಂದ ಕೂಡಲೇ ಬೆವರು ಕಲೆ ಇರುವ ಸ್ಥಳಗಳಲ್ಲಿ ಪೇಪರ್ ಟವೆಲ್ ಬಳಸಿ ನಿಧಾನವಾರಿ ಒರೆಸಿರಿ. ನಂತರ ಬೇಬಿ ಶಾಂಪೂ ಬಳಸಿ ತಣ್ಣೀರಿನಿಂದ ತೊಳೆಯಿರಿ.

  1. ಸೀರೆಗೆ ಎಣ್ಣೆ ಕಲೆ ಅಂಟಿದ್ದರೆ

ಯಾವುದೇ ಆಹಾರ ಪದಾರ್ಥದ ಅಥವಾ ಮುಖ್ಯವಾಗಿ ಎಣ್ಣೆಯ ಕಲೆ ಅಂಟಿದ್ದರೆ ಅದನ್ನು ತೆಗೆಯಲು ಹರಸಾಹಸ ಪಡಬೇಕಾಗುತ್ತದೆ. ಹಲವು ಬಾರಿ ಡ್ರೈಕ್ಲೀನ್‌ಗೆ ಕೊಟ್ಟರೂ ಪೂರ್ಣ ಕಲೆ ಹೋಗುವುದಿಲ್ಲ. ಇಂಥ ಸಂದರ್ಭಗಳಲ್ಲಿ ಕಲೆಯ ಮೇಲೆ ಟಾಲ್ಕಮ್ ಪುಡಿ ಮತ್ತು ಬೇಕಿಂಗ್‌ ಸೋಡಾವನ್ನು ಬಳಸಬಹುದು. ನಂತರ ನೀವು ದ್ರವ ಮಾರ್ಜಕದಲ್ಲಿ ಒಂದು ಸ್ಪಂಜನ್ನು ಹಾಕಿ ಸ್ಟೇನ್ ಮೇಲೆ ಉಜ್ಜಿಕೊಂಡು ತೊಳೆಯಿರಿ. ಈ ಪ್ರಕ್ರಿಯೆ ತಡವಾದರೂ ಉತ್ತಮ ಫಲಿತಾಂಶ ಸಿಗುತ್ತದೆ.

  1. ಬ್ಲೀಚ್ ಬಳಸಲೇಬೇಡಿ

ಯಾವುದೇ ರೀತಿಯ ಕಲೆಗಳನ್ನು ತೆಗೆದುಹಾಕಲು ರೇಷ್ಮೆ ಸೀರೆಗಳಿಗೆ ಬ್ಲೀಚ್ ಅನ್ನು ಎಂದಿಗೂ ಬಳಸಬೇಡಿ. ಬ್ಲೀಚ್ ರೇಷ್ಮೆ ಸೀರೆಗಳ ಶತ್ರುವಿನಂತೆ ಮತ್ತು ಇದು ಬಟ್ಟೆಯನ್ನು ಹಾನಿಗೊಳಿಸುತ್ತದೆ. ಅಷ್ಟೇ ಅಲ್ಲ, ಇದು ಸೀರೆಗೆ ಮಂದ ನೋಟವನ್ನು ನೀಡುತ್ತದೆ ಮತ್ತು ಶೀಘ್ರದಲ್ಲೇ ಬಟ್ಟೆಯ ಬಣ್ಣ ಸಹ ಬದಲು ಮಾಡುತ್ತದೆ ಮತ್ತು ಬಟ್ಟೆಯನ್ನು ಹರಿದುಹಾಕುವ ಸಾಧ್ಯತೆಯೂ ಇದೆ.

Leave a Comment