ಬೆಳ್ಳಗೆ ಆಗಲು ಈ ಕ್ರೀಮ್ ಬಳಸಿದರೆ ರಿಸಲ್ಟ್ ಸಿಗುತ್ತ? ಈ ಕ್ರೀಮ್ ನಲ್ಲಿ ಕೆಮಿಕಲ್ ಇದೆಯಾ…?

ಕ್ರೀಮ್ ಅನ್ನು ಮುಖದ ಅರೈಕೆಗೆ ಬಳಸಲಾಗುತ್ತದೆ. ಇವಾಗ್ ಅಂತು ಮಾರುಕಟ್ಟೆಯಲ್ಲಿ ಚರ್ಮದ ತೊಂದರೆಗೆ ಹಾಗು ಸ್ಕಿನ್ ಟೈಪ್ ಅನುಗುಣವಾಗಿ ಹಲವಾರು ಕ್ರೀಮ್ ಗಳು ಲಭ್ಯವಿದೆ. ಅದರಲ್ಲಿ ಮುಖ್ಯವಾಗಿ ಭಾರತದಲ್ಲಿ ಅಧಿಕವಾಗಿ ಮಾರಾಟ ಆಗುತ್ತಿರುವುದು ಸ್ಕಿನ್ ವೈಟ್ನಿಂಗ್ ಕ್ರೀಮ್ ಗಳು. ಈ ಕ್ರೀಮ್ ಗಳನ್ನು ಬಳಸಿ 7 ದಿನದಲ್ಲಿ ಬೆಳ್ಳಗೆ ಆಗಿ 10 ದಿನದಲ್ಲಿ ಬೆಳ್ಳಗೆ ಆಗಿ ಎಂದು ಮಾರಾಟ ಮಾಡುತ್ತಿರುವ ಹಲವರು ಕ್ರೀಮ್ ಗಳಲ್ಲಿ ಇರುವುದು ಹಾನಿಕಾರಕ ಕೆಮಿಕಲ್ ಗಳು.

ಅದರಲ್ಲಿ ಹೆಚ್ಚು ಬಳಕೆ ಮಾಡುವ ಕ್ರೀಮ್ ಎಂದರೆ ಗೊರೀ (Goree ) ಕ್ರೀಮ್. ಆನ್ಲೈನ್ ಮತ್ತು ಶಾಪ್ ನಲ್ಲಿ ಸಿಗುವ ಈ ಕ್ರೀಮ್ ಅನ್ನು ಹಲವಾರು ಜನರು ಬಳಸುತ್ತಿದ್ದಾರೆ. ಈ ಕ್ರೀಮ್ ಬಳಸಿದರೆ ಮುಖದ ಸೌಂದರ್ಯ ಹಾಳಾಗುವುದರ ಜೊತೆ ನಿಮ್ಮ ಅರೋಗ್ಯಕ್ಕೂ ತೊಂದರೆ ಉಂಟಾಗುತ್ತದೆ. ಇದರಲ್ಲಿ ಹೆಚ್ಚು ಪಾದರಸ ಬಳಕೆ ಮಾಡಲಾಗಿದೆ. ಇನ್ನು ಇದನ್ನು FDA ಬ್ಯಾನ್ ಕೂಡ ಮಾಡಿದರು ಕೂಡ ಇದು ಹೆಚ್ಚಾಗಿ ಮಾರಾಟ ಆಗುತ್ತಿದೆ.

ಈ ಕ್ರೀಮ್ ಬಳಸುವುದರಿಂದ ತುಟಿಯ ಸುತ್ತ ಕಪ್ಪಾಗುತ್ತದೆ, ಮೊಡವೆ ಉಂಟಾಗುತ್ತದೆ, ಸ್ಕಿನ್ ಅಲರ್ಜಿ, ತಲೆ ನೋವು, ತುರಿಕೆ, ಕ್ಯಾನ್ಸರ್ ಸಮಸ್ಸೆ ಕೂಡ ಬರುವ ಸಾದ್ಯತೆ ಇದೆ. ಹಾಗಾಗಿ ಈ ರೀತಿಯ ಕ್ರೀಮ್ ಅನ್ನು ಯಾವುದೇ ಕಾರಣಕ್ಕೂ ಬಳಸಬೇಡಿ.

Leave a Comment