Health

ಖಾಲಿ ಹೊಟ್ಟೆಗೆ ಒಂದು ಚಮಚ ತುಪ್ಪ ಸೇವಿಸಿ ನೋಡಿ!

ತುಪ್ಪ ಎನ್ನುವುದು ಭಾರತೀಯರ ಅಡುಗೆ ಮನೆಯಲ್ಲೇ ತಪ್ಪದೆ ಇರುವಂತಹ ಸಾಮಗ್ರಿ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹಿಂದಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆಯುರ್ವೇದದಲ್ಲಿ ಕೂಡ ಇದನ್ನು ಔಷಧಿಯಾಗಿಯೂ ಬಳಕೆ ಮಾಡಲಾಗುತ್ತದೆ.

ತುಪ್ಪದ ಬಗ್ಗೆ ಕೆಲವರಲ್ಲಿ ತಪ್ಪು ಅಭಿಪ್ರಾಯವಿದ್ದು, ತುಪ್ಪ ಸೇವನೆ ಮಾಡಿದರೆ, ಅದರಿಂದ ದೇಹದಲ್ಲಿ ಕೊಬ್ಬು ಬೆಳೆಯುವುದು ಎಂದು ಹೇಳುವರು. ಆದರೆ ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ, ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುವುದು ಎಂದು ಹೇಳಲಾಗುತ್ತದೆ.

​ದನದ ಹಾಲಿನಿಂದ ತಯಾರಿಸಿದ ತುಪ್ಪ

ದನದ ಹಾಲಿನಿಂದ ತಯಾರಿಸಿದ ತುಪ್ಪದಲ್ಲಿ ಆಂಟಿಆಕ್ಸಿಡೆಂಟ್ ಮಟ್ಟವು ಉತ್ತಮ ಪ್ರಮಾಣದಲ್ಲಿದ್ದು, ಇದು ಫ್ರೀ ರ್ಯಾಡಿಕಲ್ ನ್ನು ದೂರ ಮಾಡುವುದು.ತುಪ್ಪವು ಸಣ್ಣ ಕರುಳಿನಲ್ಲಿ ಸರಿಯಾಗಿ ಹೀರಿಕೊಂಡು ಆಮ್ಲೀಯ ಪಿಎಚ್ ಮಟ್ಟವನ್ನು ಕಡಿಮೆ ಮಾಡುವುದು. ಆಯುರ್ವೇದದ ಪ್ರಕಾರ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವನೆ ಮಾಡಿದರೆ, ಅದು ದೇಹದಲ್ಲಿ ಪ್ರಮುಖ ಪೋಷಕಾಂಶಗಳನ್ನು ನೀಡುವಂತಹ ರಸವಾಗಿ ಕೆಲಸ ಮಾಡುವುದು ಎಂದು ಹೇಳಲಾಗಿದೆ.

​ಆಯುರ್ವೇದದ ಪ್ರಕಾರ

ಆಯುರ್ವೇದದ ಪ್ರಕಾರ ತುಪ್ಪವು ಅಂಗಾಂಶಗಳನ್ನು ಪುನಶ್ಚೇತಗೊಳಿಸುವುದು ಮತ್ತು ದೇಹಕ್ಕೆ ಶಮನ ನೀಡುವುದು. ಅದೇ ರೀತಿಯಾಗಿ ಇದು ತೂಕ ಇಳಿಸಲು ಸಹಕಾರಿ.ಬ್ಯುಟರಿಕ್ ಆಮ್ಲ ಮತ್ತು ಮಧ್ಯಮ ಪ್ರಮಾಣದ ಟ್ರೈಗ್ಲೈರೈಡ್ ತುಪ್ಪದಲ್ಲಿದ್ದು, ಇದು ಹಠಮಾರಿ ಕೊಬ್ಬಿನಲ್ಲಿ ಚಲನಶೀಲತೆ ಉಂಟು ಮಾಉಡವುದು ಮತ್ತು ದೇಹದಿಂದ ಇದನ್ನು ಹೊರಹಾಕಿ, ಒಳ್ಳೆಯ ಕೊಲೆಸ್ಟ್ರಾಲ್ ನ್ನು ಹೆಚ್ಚಿಸುವುದು. ಆದರೆ ಇದನ್ನು ಅತಿಯಾಗಿ ಸೇವನೆ ಮಾಡಬೇಡಿ.

​ಬೆಳಗ್ಗೆ ಹೇಗೆ ತುಪ್ಪವನ್ನು ಸೇವನೆ ಮಾಡಬೇಕು?

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪವನ್ನು ಬಿಸಿ ನೀರಿಗೆ ಹಾಕಿ ಕುಡಿಯಿರಿ.ಒಂದು ಚಮಚ ತುಪ್ಪವನ್ನು ಹಸಿ ಅರಿಶಿನದೊಂದಿಗೆ ಕುದಿಸಬಹುದು. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ, ಅದರಿಂದ ಪ್ರತಿರೋಧಕ ವ್ಯವಸ್ಥೆಯು ಸುಧಾರಣೆ ಆಗುವುದು ಮತ್ತು ಒಣ ಕೆಮ್ಮು ಕಡಿಮೆ ಆಗುವುದು.ಹಸಿ ಅರಶಿನ ಮತ್ತು ಒಂದು ಚಮಚ ತುಪ್ಪವನ್ನು ಜತೆಗೆ ಸೇರಿಸಿಕೊಂಡು ಮಿಶ್ರಣ ಮಾಡಿ ಸೇವಿಸಬಹುದು.

​ತುಪ್ಪದ ಪ್ರಯೋಜನಗಳು

ತುಪ್ಪದಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎಂದು ಆಯುರ್ವೇದವು ಹೇಳಿದೆ. ಇದು ನೆನೆಪಿನ ಶಕ್ತಿ ಸುಧಾರಣೆ ಮಾಡುವುದು. ಪ್ರಮುಖ ಕೊಬ್ಬಿನಾಮ್ಲಗಳನ್ನು ದೇಹಕ್ಕೆ ಒದಿಸುವುದು, ವಯಸ್ಸಾಗುವ ಲಕ್ಷಣ ನಿಧಾನವಾಗಿಸುವುದು, ಪ್ರತಿರೋಧಕ ಶಕ್ತಿ ವೃದ್ಧಿಸುವುದು.ದಿನಕ್ಕೆ ಒಂದು ಚಮಚ ತುಪ್ಪ ಸೇವನೆ ಮಾಡಿದರೆ, ಅದು ತುಂಬಾ ಲಾಭಕಾರಿ. ಆದರೆ ದೇಹದ ತೂಕ ಮತ್ತು ಚಟುವಟಿಕೆಗೆ ಅನುಗುಣವಾಗಿ ಇದನ್ನು ಹೆಚ್ಚಿಸಬಹುದು.

​ಖಾಲಿ ಹೊಟ್ಟೆಯಲ್ಲಿ ತುಪ್ಪದ ಸೇವನೆ

ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವನೆ ಮಾಡಿದರೆ, ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎಂದು ಅಧ್ಯಯನಗಳು ಹೇಳಿವೆ. ಅಂತಹ ಲಾಭಗಳು ಏನು ಎಂದು ತಿಳಿಯೋಣ.ಇದು ಗಂಟುಗಳಿಗೆ ನೈಸರ್ಗಿಕ ಲ್ಯೂಬ್ರಿಕೆಂಟ್ಸ್ ಆಗಿ ಕೆಲಸ ಮಾಡುವುದು ಮತ್ತು ಮೂಳೆಯ ಗಂಟುಗಳಲ್ಲಿ ಲ್ಯೂಬ್ರಿಕೆಂಟ್ಸ್ ನ್ನು ನಿರ್ಮಿಸುವುದು.ಇದು ನೈಸರ್ಗಿಕ ಮೊಶ್ಚಿರೈಸರ್ ಆಗಿ ಕೆಲಸ ಮಾಡುವುದು ಮತ್ತು ಚರ್ಮಕ್ಕೆ ಕಾಂತಿ ಒದಗಿಸುವುದು.

ತುಪ್ಪದಲ್ಲಿ ಪ್ರಮುಖ ಕೊಬ್ಬಿನಾಮ್ಲಗಳಿದ್ದು, ಇದು ಹೊಟ್ಟೆಯ ಕೊಬ್ಬು ಕರಗಿಸುವುದು. ಒಮೆಗಾ-3 ಮತ್ತು ಒಮೆಗಾ-6 ಆಮ್ಲವು ದೇಹದ ಕೊಬ್ಬು ಕರಗಿಸಲು ಸಹಕಾರಿ.ಒತ್ತಡ ಮತ್ತು ನಿದ್ರಾಹೀನತೆಯಿಂದಾಗಿ ಕಣ್ಣಿನ ಸುತ್ತಲು ಕಪ್ಪು ಕಲೆಗಳು ಮೂಡಬಹುದು. ತುಪ್ಪವು ಇದಕ್ಕೆ ಒಳ್ಳೆಯ ಮನೆಮದ್ದು. ಇದನ್ನು ರಾತ್ರಿ ಮಲಗುವ ಮೊದಲು ಕಣ್ಣಿನ ಸುತ್ತಲು ಹಚ್ಚಿಕೊಳ್ಳಿ.ತುಪ್ಪದಲ್ಲಿ ಅತ್ಯಧಿಕ ಪ್ರಮಾಣದ ಕೊಬ್ಬಿನಾಮ್ಲಗಳು ಮತ್ತು ಆಂಟಿಆಕ್ಸಿಡೆಂಟ್ ಗಳು ಇವೆ. ಇದು ಒಣ ಮತ್ತು ಬಿಡಿಬಿಡಿಯಾಗಿರುವ ಕೂದಲಿಗೆ ಒಳ್ಳೆಯ ಕಂಡೀಷನರ್ ಆಗಿ ಕೆಲಸ ಮಾಡುವುದು.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago