ಯಾವ ರಾಶಿಯವರು ಯಾವ ರುದ್ರಾಕ್ಷಿ ಧರಿಸಿದರೆ ಒಳ್ಳೆಯದು ಗೊತ್ತಾ?

ಶಿವನ ಆಶೀರ್ವಾದವನ್ನು ಪಡೆಯಲು, ಅವನಿಗೆ ಅನೇಕ ವಸ್ತುಗಳನ್ನು ಅರ್ಪಿಸಲಾಗುತ್ತದೆ. ಆದರೆ ಅವುಗಳಲ್ಲಿ ರುದ್ರಾಕ್ಷಿಗಿಂತ ಮುಖ್ಯ ಏನೂ ಇಲ್ಲ ಎಂಬುದು ನಿಮಗೆ ತಿಳಿದಿದೆಯೇ..? ಆದ್ದರಿಂದ, ನಿಮ್ಮ ಮನಸ್ಸಿಗೆ ಅನುಗುಣವಾಗಿ ನಿಮ್ಮ ಜೀವನವು ನಡೆಯಬೇಕೆಂದರೆ ಈ ಮಹಾಶಿವರಾತ್ರಿಯಂದು ನೀವು ಶಿವನ ರುದ್ರಾಕ್ಷಿ ಮಣಿಯನ್ನು ಧರಿಸಬೇಕು. ರುದ್ರಾಕ್ಷಿಯನ್ನು ಧರಿಸುವುದರಿಂದ ವ್ಯಕ್ತಿಯ ಎಲ್ಲಾ ರೋಗಗಳು, ದುಃಖಗಳು ಮತ್ತು ಭಯಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ರುದ್ರಾಕ್ಷಿಯನ್ನು ಧರಿಸುವುದರಿಂದ ಒಬ್ಬ ವ್ಯಕ್ತಿಯು ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಪಡೆಯುತ್ತಾನೆ. ಶಿವನ ಕಣ್ಣೀರಿನಿಂದ ಹುಟ್ಟಿಕೊಂಡ ರುದ್ರಾಕ್ಷಿಯು ಸಹ ವ್ಯಕ್ತಿಯ ದುರಾದೃಷ್ಟವನ್ನು ಅದೃಷ್ಟವನ್ನಾಗಿ ಪರಿವರ್ತಿಸುವ ಶಕ್ತಿಯನ್ನು ಹೊಂದಿದೆ ಎನ್ನುವ ನಂಬಿಕೆಯಿದೆ.

ಯಾವ ರಾಶಿಯವರು ಯಾವ ರುದ್ರಾಕ್ಷಿಯನ್ನು ಧರಿಸಬೇಕು ತಿಳಿಯೋಣ..

ಮೇಷ ರಾಶಿಯವರಿಗೆ ರುದ್ರಾಕ್ಷಿ:ಮೇಷ ರಾಶಿಯವರು ಒಂದು ಮುಖಿ, ಮೂರು ಮುಖಿ ಅಥವಾ ಐದು ಮುಖಿ ರುದ್ರಾಕ್ಷಿಯನ್ನು ಧರಿಸಬೇಕು.

ವೃಷಭ ರಾಶಿಯವರಿಗೆ ರುದ್ರಾಕ್ಷಿ:ವೃಷಭ ರಾಶಿಯವರು ನಾಲ್ಕು ಮುಖದ, ಆರು ಮುಖದ ಅಥವಾ ಹದಿನಾಲ್ಕು ಮುಖದ ರುದ್ರಾಕ್ಷಿಯನ್ನು ಧರಿಸಬೇಕು.

ಮಿಥುನ ರಾಶಿಯವರಿಗೆ ರುದ್ರಾಕ್ಷಿ:ನಾಲ್ಕು ಮುಖಿ, ಐದು ಮುಖಿ ಮತ್ತು ಹದಿಮೂರು ಮುಖಿ ರುದ್ರಾಕ್ಷಿಯನ್ನು ಈ ರಾಶಿಯವರು ಧರಿಸಬಹುದು.

ಕರ್ಕಾಟಕ ರಾಶಿಯವರಿಗೆ ರುದ್ರಾಕ್ಷಿ:ಕರ್ಕಾಟಕ ರಾಶಿಯವರು ಮೂರು ಮುಖಿ, ಐದು ಮುಖಿ ಅಥವಾ ಗೌರಿ-ಶಂಕರ ರುದ್ರಾಕ್ಷಿಯನ್ನು ಧರಿಸಬಹುದು.

ಸಿಂಹ ರಾಶಿಯವರಿಗೆ ರುದ್ರಾಕ್ಷಿ:ಒಂದು ಮುಖಿ, ಮೂರು ಮುಖಿ ಮತ್ತು ಐದು ಮುಖಿ ರುದ್ರಾಕ್ಷಿಯನ್ನು ಸಿಂಹ ರಾಶಿಯವರು ಧರಿಸಬಹುದು.

ಕನ್ಯಾ ರಾಶಿಯವರಿಗೆ ರುದ್ರಾಕ್ಷಿ:ಕನ್ಯಾ ರಾಶಿಯಲ್ಲಿ ಜನಿಸಿದವರು ನಾಲ್ಕು ಮುಖಿ, ಐದು ಮುಖಿ ಮತ್ತು ಹದಿಮೂರು ಮುಖಿ ರುದ್ರಾಕ್ಷಿಯನ್ನು ಧರಿಸಬಹುದು.

ತುಲಾ ರಾಶಿಯವರಿಗೆ ರುದ್ರಾಕ್ಷಿ:ನಾಲ್ಕು ಮುಖಿ, ಆರು ಮುಖಿ ಅಥವಾ ಹದಿನಾಲ್ಕು ಮುಖಿ ರುದ್ರಾಕ್ಷಿಯನ್ನು ನೀವು ಧರಿಸಬಹುದಾಗಿದೆ.

ವೃಶ್ಚಿಕ ರಾಶಿಯವರಿಗೆ ರುದ್ರಾಕ್ಷಿ:ವೃಶ್ಚಿಕ ರಾಶಿಯವರು ಮೂರು ಮುಖ, ಐದು ಮುಖ ಅಥವಾ ಗೌರಿ-ಶಂಕರ ರುದ್ರಾಕ್ಷಿಯನ್ನು ಧರಿಸಬಹುದು.

ಧನು ರಾಶಿಯವರಿಗೆ ರುದ್ರಾಕ್ಷಿ:ಧನು ರಾಶಿಯವರು ಒಂದು ಮುಖಿ, ಮೂರು ಮುಖಿ ಅಥವಾ ಐದು ಮುಖಿ ರುದ್ರಾಕ್ಷಿಯನ್ನು ಧರಿಸಿಕೊಳ್ಳಬಹುದು.

ಮಕರ ರಾಶಿಯವರಿಗೆ ರುದ್ರಾಕ್ಷಿ:ನಾಲ್ಕು ಮುಖಿ, ಆರು ಮುಖಿ ಅಥವಾ ಹದಿನಾಲ್ಕು ಮುಖಿ ರುದ್ರಾಕ್ಷಿಯನ್ನು ಈ ರಾಶಿಯವರು ಧರಿಸಿದರೆ ಉತ್ತಮ.

ಕುಂಭ ರಾಶಿಯವರಿಗೆ ರುದ್ರಾಕ್ಷಿ:ನಾಲ್ಕು ಮುಖಿ, ಆರು ಮುಖಿ ಅಥವಾ ಹದಿನಾಲ್ಕು ಮುಖಿ ರುದ್ರಾಕ್ಷಿಯನ್ನು ಈ ರಾಶಿಯವರು ಧರಿಸಬೇಕು.

ಮೀನ ರಾಶಿಯವರಿಗೆ ರುದ್ರಾಕ್ಷಿ:ಮೂರು ಮುಖಿ, ಐದು ಮುಖಿ ಅಥವಾ ಗೌರಿ-ಶಂಕರ ರುದ್ರಾಕ್ಷಿಯನ್ನು ಮೀನ ರಾಶಿಯವರು ಧರಿಸಿದರೆ ಶುಭ.

ಈ ಮೇಲಿನಂತೆ ರಾಶಿಗನುಗುಣವಾಗಿ ರುದ್ರಾಕ್ಷಿಯನ್ನು ಧರಿಸುವುದರಿಂದ ನಮ್ಮ ದುರಾದೃಷ್ಟಗಳು ದೂರಾಗಿ ಅದೃಷ್ಟ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಅಷ್ಟು ಮಾತ್ರವಲ್ಲ, ಇದರೊಂದಿಗೆ ನಾವು ಶಿವನ ವಿಶೇಷ ಅನುಗ್ರಹವನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

Leave a Comment