ಅಪ್ಪಿ ತಪ್ಪಿ ಈ 5 ದೇವರ ಫೋಟೋ ಮನೆಯಲ್ಲಿ ಇಟ್ಟರೆ ಅಷ್ಟೇ ಏನಾಗುತ್ತೆ ಗೊತ್ತಾ!

ಮನೆಯಲ್ಲಿ ದೇವರ ವಿಗ್ರಹ ಹಾಗೂ ಫೋಟೋ ಇಟ್ಟು ಪೂಜಿಸುವುದು ನಾವು ಪುರಾತನ ಕಾಲದಿಂದ ಆಚರಿಸಿಕೊಂಡು ಬರುತ್ತಿರುವ ಆಚಾರ.ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವು ತಪ್ಪುಗಳನ್ನು ಮನೆಯಲ್ಲಿ ಮಾಡುತ್ತೇವೆ.ವಾಸ್ತು ಶಾಸ್ತ್ರದ ಪ್ರಕಾರ ಕೆಲವು ದೇವರ ಫೋಟೋಗಳನ್ನು , ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು ಎಂದು ತಿಳಿಸುತ್ತದೆ.ಹಾಗಾದ್ರೆ ಯಾವ ಫೊಟೋಗಳನ್ನು ಮನೆಯಲ್ಲಿ ಇಡಬಾರದು ಎಂದು ತಿಳಿಯೋಣ ಬನ್ನಿ

ವಾಸ್ತುಶಾಸ್ತ್ರದ ಪ್ರಕಾರ ಯಾವುದೇ ಕಾರಣಕ್ಕೂ ಮನೆಯಲ್ಲಿ ಭೈರವ ದೇವರ ಫೋಟೋವನ್ನು ಇಡಲೇಬಾರದು.
ಭೈರವ ದೇವರು ಶಿವನ ರೂಪ ಆದರೂ ಸಹ ಭೈರವನನ್ನು ಮಾಟ ಮಂತ್ರ ಮಾಡಿ ಒಲಿಸಿಕೊಳ್ಳಬೇಕು ಹಾಗಾಗಿ ಭೈರವನ ಫೋಟೋವನ್ನು ಮನೆಯಲ್ಲಿ ಇಟ್ಟರೆ ಕಷ್ಟಗಳೇ ಹೆಚ್ಚಾಗುತ್ತವೆ.ಪರಮ ಶಿವನ ಮತ್ತೊಂದು ರೂಪ ಅಂದ್ರೆ ಅದು ನಟರಾಜ ದೇವರು.ನಟರಾಜನ ಫೋಟೋವನ್ನು ಸಹ ಮನೆಯಲ್ಲಿ ಇಡಬಾರದು ಕಾರಣ ನಟರಾಜನ ರೂಪದಲ್ಲಿರುವ ಶಿವ ತಾಂಡವ ಮಾಡುತ್ತಿರುತ್ತಾನೆ ಹಾಗಾಗಿ ನಟರಾಜನ ಫೋಟೋ ಮನೆಯಲ್ಲಿ ಇದ್ದರೆ ಆಂತರಿಕ ಕಲಹಗಳು ಜಾಸ್ತಿಯಾಗುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

ಯಾವುದೇ ಕಾರಣಕ್ಕೂ ಮನೆಯಲ್ಲಿ ಶನಿದೇವರ ಫೋಟೋ ಹಾಗೂ ರಾಹು ಕೇತು ಫೋಟೋಗಳನ್ನು ಇಡಬಾರದು. ರಾಹು ಮತ್ತು ಕೇತು ಪಾಪಗ್ರಹಗಳು ಹಾಗಾಗಿ ಅವರನ್ನು ಮನೆಯಲ್ಲಿ ಇಟ್ಟರೆ ಕಷ್ಟಗಳು ಎದುರಾಗುತ್ತವೆ.ಉಗ್ರ ರೂಪದಲ್ಲಿರುವ ದುರ್ಗಾ ಮಾತೆಯ ಫೋಟೋ ಕೂಡ ಮನೆಯಲ್ಲಿ ಇಡದೆ ಇರುವುದು ಒಳ್ಳೆಯದು.ಮನೆಯಲ್ಲಿ ವಿನಾಯಕನ ಫೋಟೋಗಳನ್ನು ಎಲ್ಲರೂ ಇಡುತ್ತಾರೆ ಆದರೆ ಮನೆಯಲ್ಲಿ ಯಾವುದೇ ಕಾರಣಕ್ಕೂ 3 ವಿನಾಯಕನ ಫೋಟೋ ಅಥವಾ 3 ವಿನಾಯಕನ ವಿಗ್ರಹಗಳು ಇಡಬಾರದು.

ಒಂದೇ ಮನೆಯಲ್ಲಿ ಎರಡು ಶಂಖು ಇರಬಾರದು.ಒಂದೇ ಶಂಖ ಇದ್ದರೆ ಒಳ್ಳೆಯದು.ಹೊಡೆದು ಹೋಗಿರುವ ದೇವರ ಫೋಟೋಗಳನ್ನು ಹಾಗೂ ವಿಗ್ರಹಗಳನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇರಿಸಿಕೊಳ್ಳಬಾರದು. ಹಾಗೂ ಮನೆಯಲ್ಲಿ ಎತ್ತರದ ವಿಗ್ರಹಗಳನ್ನು ಇಡಬಾರದು.ಹಾಗೆ ಪೂಜೆಗೆ ಇಡುವ ಹಣ್ಣುಗಳನ್ನು ತಪ್ಪದೇ ತೊಳೆದು ನಂತರ ದೇವರ ಮುಂದೆ ಇಡಬೇಕು. ಈ ಆಧುನಿಕ ಕಾಲದಲ್ಲಿ ಇವೆಲ್ಲ ಯಾಕೆ ನಂಬಬೇಕು ಎಂದು ಕೆಲವರು ಭಾವಿಸುತ್ತಾರೆ ಆದರೆ ಒಂದು ವಿಧಾನ,ಆಚಾರ ಹಾಗೂ ಶಾಸ್ತ್ರ ಸಾವಿರಾರು ವರ್ಷಗಳಿಂದ ಉಳಿದುಕೊಂಡು ಬಂದಿದೆ ಅಂದ್ರೆ ಅದರಲ್ಲಿ ಖಂಡಿತ ಸತ್ಯ ಮತ್ತು ಸತ್ವ ಇದೆ ಅಂತಲೇ ಅರ್ಥ ಅಲ್ಲವೇ.

Leave a Comment