ಕನಸಿನಲ್ಲಿ ನವಿಲುಗಳು ಕಂಡ್ರೆ ಅದೃಷ್ಟ ನಾ? ದುರದೃಷ್ಟ ನಾ?

ನಮ್ಮ ಹಿಂದೂ ಸಂಪ್ರದಾಯದಲ್ಲಿ ಸ್ವಪ್ನ ಶಾಸ್ತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗುತ್ತದೆ, ಸ್ವಪ್ನ ಶಾಸ್ತ್ರದ ಪ್ರಕಾರ ವ್ಯಕ್ತಿಯ ಕನಸಿನಲ್ಲಿ ಬೀಳುವಂತಹ ಅನಿರೀಕ್ಷಿತವಾದ ಘಟನೆಗಳು ವ್ಯಕ್ತಿಗೆ ಭವಿಷ್ಯದಲ್ಲಿ ಯಾವುದೋ ಒಂದು ಸೂಚನೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ಹಾಗಾಗಿ ಅನಿರೀಕ್ಷಿತವಾದ ಕನಸುಗಳು ಬಿದ್ದಾಗ ಅದು ಯಾವ ಸೂಚನೆಯನ್ನು ನೀಡುತ್ತದೆ ಎಂದು ಅವಶ್ಯಕವಾಗಿ ತಿಳಿದುಕೊಳ್ಳಲೇಬೇಕು.

ಏಕೆಂದರೆ ಕನಸಿನಲ್ಲಿ ಬೀಳುವಂತಹ ಅನಿರೀಕ್ಷಿತವಾದ ಕನಸುಗಳು ಭವಿಷ್ಯದಲ್ಲಿ ಯಾವುದಾದರೂ ಒಂದು ಸೂಚನೆಯನ್ನು ನೀಡುತ್ತದೆ, ಆದರೆ ಅದು ಎಂತಹ ಕನಸು ಎನ್ನುವ ಆಧಾರದ ಮೇಲೆ ಅದು ಕೆಟ್ಟ ಸೂಚನೆಯ ಅಥವಾ ಒಳ್ಳೆಯ ಸೂಚನೆಯ ಭವಿಷ್ಯದಲ್ಲಿ ಎಂತಹ ಘಟನೆಗಳು ನಡೆಯಬಹುದು ಇದರ ಕುರಿತು ಸಂಕ್ಷಿಪ್ತವಾಗಿ ತಿಳಿಸಲಾಗುತ್ತದೆ, ಒಂದು ವೇಳೆ ತಮಗೆ ಬೆಳೆದಿರುವಂತಹ ಕನಸುಗಳು ಕೆಟ್ಟ ಸೂಚನೆಯನ್ನು ನೀಡುತ್ತವೆ ಎಂದಾಗ ಅದಕ್ಕೆ ಸರಿಯಾದ ಸಮಯದಲ್ಲಿ ಸರಿಯಾದ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಅದರ ಪರಿಣಾಮದಿಂದ ತಪ್ಪಿಸಿಕೊಳ್ಳಬಹುದು.

ಅದೇ ರೀತಿಯಾಗಿ ಕನಸಿನಲ್ಲಿ ಏನಾದರೂ ನವಿಲುಗಳು ಈ ರೀತಿಯಾಗಿ ಕಾಣಿಸಿಕೊಂಡರೆ ಅದು ಭವಿಷ್ಯದಲ್ಲಿ ಕೆಲವು ಸೂಚನೆಯನ್ನು ನೀಡುತ್ತದೆ ಅದು ಒಳ್ಳೆಯ ಸೂಚನೆಯಾಗಿರುತ್ತದೆ ಮತ್ತು ಇನ್ನು ಕೆಲವು ಕೆಟ್ಟ ಸೂಚನೆಯಾಗಿರುತ್ತದೆ ಹಾಗಾಗಿ ಕನಸಿನಲ್ಲಿ ನವಿಲುಗಳು ಈ ರೂಪದಲ್ಲಿ ಕಾಣಿಸಿಕೊಂಡಾಗ ನಾವು ಭವಿಷ್ಯದಲ್ಲಿ ಒಳ್ಳೆಯ ಮತ್ತು ಕೆಟ್ಟ ಸೂಚನೆಯ ಬಗ್ಗೆ ತಿಳಿಯಬಹುದು, ಹಾಗಾದರೆ ಕನಸಿನಲ್ಲಿ ನವಿಲುಗಳು ಯಾವ ರೀತಿಯಾಗಿ ಕಾಣಿಸಿಕೊಂಡರೆ ಅದು ಭವಿಷ್ಯದಲ್ಲಿ ಒಳ್ಳೆಯ ಸೂಚನೆಯಾಗಿರುತ್ತದೆ ಮತ್ತು ಇನ್ನು ಕೆಲವು ಯಾವ ರೀತಿಯಾಗಿ ಕಾಣಿಸಿಕೊಂಡರೆ ಕೆಟ್ಟ ಸೂಚನೆಯಾಗಿರುತ್ತದೆ ಎಂದು ನೋಡೋಣ.

ಸಾಮಾನ್ಯವಾಗಿ ಕೆಲವು ವೃತ್ತಿಪರವಾಗಿ ನವಿಲುಗಳು ಕಾಣಿಸಿಕೊಂಡಾಗ ಅದಕ್ಕೆ ಸಂಬಂಧಿಸಿದ ಹಾಗೆ ಫಲಗಳು ಸಿಗುತ್ತದೆ, ಅಂದರೆ ರೈತರ ಕನಸಿನಲ್ಲಿ ಏನಾದರೂ ನವಿಲುಗಳು ಕಾಣಿಸಿಕೊಂಡರೆ ಅದನ್ನು ಒಳ್ಳೆಯ ಸೂಚನೆ ಎಂದು ಕರೆಯಲಾಗುತ್ತದೆ ಆದರೆ ಅದೇ ರೈತನ ಕನಸಿನಲ್ಲಿ ಏನಾದರೂ ನವಿಲು ಮರದ ಮೇಲೆ ಕುಳಿತುಕೊಂಡಿರುವ ಹಾಗೆ ಕನಸು ಬಿದ್ದರೆ ಅದನ್ನು ಅಶುಭ ಎಂದು ಕರೆಯಲಾಗುತ್ತದೆ

ಇದು ಭವಿಷ್ಯದಲ್ಲಿ ಯಾವುದಾದರೂ ಕೆಟ್ಟ ಘಟನೆ ನಡೆಯುತ್ತದೆ ಎನ್ನುವ ಸೂಚನೆಯನ್ನು ನೀಡುತ್ತದೆ.ಇನ್ನು ಯಾರಾದರೂ ತೀವ್ರವಾಗಿ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಅಂತಹವರ ಕನಸಿನಲ್ಲಿ ಏನಾದರೂ ನವಿಲು ಮರದ ಮೇಲೆ ಕುಳಿತಿರುವ ಹಾಗೆ ಅಥವಾ ನವಿಲು ಕಾಣಿಸಿಕೊಂಡರೆ ಶೀಘ್ರವಾಗಿ ಅನಾರೋಗ್ಯದ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ. ಇನ್ನು ಸಾಮಾನ್ಯವಾಗಿ ಸಾಮಾನ್ಯರಿಗೆ ಕನಸುಗಳಲ್ಲಿ ನವಿಲುಗಳು ಕುಣಿದ ಹಾಗೆ ಅಥವಾ ನವಿಲುಗಳು ಸಂತೋಷವಾಗಿ ಇರುವ ಹಾಗೆ ಕನಸು ಬಿದ್ದರೆ ಅದು ಅತ್ಯಂತ ಶುಭಸೂಚನೆ, ಇದು ಭವಿಷ್ಯದಲ್ಲಿ ಹಣಕಾಸಿನ ಅನುಕೂಲತೆಗಳು ಕಂಡು ಬರುತ್ತದೆ ಎನ್ನುವ ಸೂಚನೆಯನ್ನು ನೀಡುತ್ತದೆ. ಇನ್ನು ಕನಸಿನಲ್ಲಿ ಏನಾದರೂ ಜೋಡಿ ನವಿಲುಗಳು ಕಾಣಿಸಿಕೊಂಡರೆ ವೈವಾಹಿಕ ಜೀವನದಲ್ಲಿ ಇರುವಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ, ಮುಂದಿನ ದಿನಗಳಲ್ಲಿ ವೈವಾಹಿಕ ಜೀವನ ಉತ್ತಮವಾಗಿರುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ.

Leave a Comment