Kannada News

ಬೆನ್ನಿನ ಮೇಲೆ ಮೊಡವೆಗಳ ಸಮಸ್ಸೆ ನಿವಾರಣೆಗೆ ಈ ಮನೆಮದ್ದುಗಳಲ್ಲಿದೆ ಅದಕ್ಕೆ ಪರಿಹಾರ!

ಮೊಡವೆಗಳು ದೇಹದಲ್ಲಿ ಉಂಟಾಗುವ ಸಾಮಾನ್ಯವಾದ ಸ್ಥಿತಿ. ಇದು ಯಾವುದೇ ವಯಸ್ಸಿನಲ್ಲಿ, ಯಾವ ಸಮಯದಲ್ಲಾದರು ಸಂಭವಿಸಬಹುದು. ಮೊಡವೆಗಳು ಕೇವಲ ತ್ವಚೆಯ ಮೇಲೆಯೇ ಅಲ್ಲದೇ, ದೇಹದ ಇತರ ಭಾಗದ ಮೇಲೂ ಕಾಣಿಸಿಕೊಳ್ಳುತ್ತವೆ. ತ್ವಚೆಯನ್ನು ಹೊರತು ಪಡಿಸಿದರೆ, ಬೆನ್ನು ಸೇರಿದಂತೆ ನಿಮ್ಮ ದೇಹದ ಯಾವುದೇ ಭಾಗದಲ್ಲಿಯೂ ಕಾಣಿಸಿಕೊಳ್ಳಬಹುದು.

ಮುಖ್ಯವಾಗಿ, ಹಾರ್ಮೋನ್ ಗಳ ಬದಲಾವಣೆ, ನಿಮ್ಮ ಹಿರಿಯರಿಗೆ ಈ ರೀತಿಯ ಮೊಡವೆಗಳು ಇದ್ದರೆ, ದೇಹದಲ್ಲಿ ಉಂಟಾಗುವ ಬೆವರು ಇವೆಲ್ಲವೂ ನಿಮ್ಮ ಮೊಡವೆಗಳಿಗೆ ಕಾರಣವಾಗಬಹುದು.ಬೆನ್ನಿನ ಮೇಲೆ ಉಂಟಾಗುವ ಮೊಡವೆಗಳು ಕಿರಿಕಿರಿ ಉಂಟು ಮಾಡುತ್ತದೆ. ಔಷಧಿಗಳ ಬದಲಾಗಿ ಸಹಜವಾಗಿಯೇ ಬೆನ್ನಿನ ಮೊಡವೆಗಳನ್ನು ತೊಲಗಿಸಿಕೊಳ್ಳುವ ಮನೆಮದ್ದುಗಳು ಇಲ್ಲಿವೆ.

​೧. ಟೀ ಟ್ರೀ ಎಣ್ಣೆ–ನಿಮ್ಮ ಬೆನ್ನಿನ ಮೇಲೆ ಟೀ ಟ್ರೀ ಆಯಿಲ್ ಆಂಟಿ ಬ್ಯಾಕ್ಟೀರಿಯಲ್ ಎಂದು ನಂಬಲಾಗಿದ್ದು, ವಿವಿಧ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಈ ಎಣ್ಣೆಯು ಮೊಡವೆಗಳಿಗೆ ಸಂಬಂಧಿಸಿದ ಉರಿಯೂತ ಮತ್ತು ಉರಿಯೂತವಲ್ಲದ ಗಾಯಗಳನ್ನು ಕೂಡ ಶಮನಗೊಳಿಸುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಇದು ನಿಮ್ಮ ತ್ವಚೆಯ ಮೇಲಿನ ಮೊಡವೆಗಳಿಗೆ ಅಲ್ಲದೇ ಬೆನ್ನಿನ ಮೇಲಿರುವ ಮೊಡವೆಗಳನ್ನು ನಿವಾರಣೆ ಮಾಡಲು ಸಹಾಯಕಾರಿಯಾಗಿದೆ.

ರಾತ್ರಿ ಮಲಗುವ ಮುಂಚೆ ಮೊಡವೆಗಳಿಂದ ಕೂಡಿದ ನಿಮ್ಮ ಬೆನ್ನಿನ ಮೇಲೆ ಟೀ ಟ್ರೀ ಎಣ್ಣೆಯನ್ನು ೫ ನಿಮಿಷಗಳ ಕಾಲ ಮಸಾಜ್ ಮಾಡಿ. ತದನಂತರ ಟಿಶ್ಯೂ ಪೇಪರ್ ನಿಂದ ಸ್ವಚ್ಛಗೊಳಿಸಿ, ಮರುದಿನ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯುತ್ತಾ ಬನ್ನಿ. ಹೀಗೆ ಮಾಡುವುದರಿಂದ ನಿಮ್ಮ ಬೆನ್ನಿನ ಮೊಡವೆಗಳು ಸುಧಾರಿಸುತ್ತವೆ.

​೨. ಅಲೋವೆರಾ ಜೆಲ್–ಅಲೋವೆರಾ ಒಂದು ಅತ್ಯುತ್ತಮವಾದ ಔಷಧಿಯಾಗಿದ್ದು, ಹಲವಾರು ಚರ್ಮ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದು ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ದೇಹದ ಯಾವುದೇ ಭಾಗದಲ್ಲಿರುವ ಮೊಡವೆಗಳನ್ನು ಶಮನ ಮಾಡಲು ಸಹಾಯಕವಾಗಿದೆ. ಇದೊಂದು ಅತ್ಯುತ್ತಮವಾದ ಮಾಯಿಶ್ಚರೈಸರ್ ಆಗಿದ್ದು, ಒಣ ಚರ್ಮದವರಿಗೆ ಇದೊಂದು ಅದ್ಭುತವೆಂದೇ ಹೇಳಬಹುದು.

ಹೀಗೆ ಮಾಡಿ–ಮಾರುಕಟ್ಟೆಯಲ್ಲಿ ದೊರೆಯುವ ಅಲೋವೆರಾ ಜೆಲ್ ನ ಬದಲಾಗಿ, ತಾಜಾ ಅಲೋವೆರಾವನ್ನು ಬಳಸಿ. ಶುದ್ಧವಾದ ಜೆಲ್ ನಿಮ್ಮ ಬೆನ್ನಿನ ಚರ್ಮಕ್ಕೆ ಮಸಾಜ್ ಮಾಡಿ, ನಂತರ ಟಿಶ್ಯೂನಿಂದ ಒರೆಸಿ. ಹೀಗೆ ಮಾಡುವುದರಿಂದ ನಿಮ್ಮ ಬೆನ್ನಿನ ಮೊಡವೆಗಳು ಕಡಿಮೆಯಾಗುತ್ತಾ ಬರುತ್ತದೆ.

​೩. ತೆಂಗಿನ ಎಣ್ಣೆ–ತೆಂಗಿನ ಎಣ್ಣೆ ತನ್ನ ಅಸಮಾನ್ಯವಾದ ಉಪಯೋಗಗಳಿಂದ ಹೆಸರುವಾಸಿಯಾಗಿದೆ. ಇದು ಕೊಬ್ಬು ಸುಡುವಿಕೆ, ತ್ವರಿತ ಶಕ್ತಿ ಗಳಿಸಲು, ಚರ್ಮ ಹಾಗು ಕೂದಲಿನ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆ ಕೂಡ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಮೊಡವೆಗಳನ್ನು ಶಮನಗೊಳಿಸಲು ಸಹಕಾರಿಯಾಗಿದೆ.ಇದು ಮೊಡವೆಯಲ್ಲಿನ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವುದನ್ನು ವೇಗಗೊಳಿಸುತ್ತದೆ.

ಹೇಗೆ ಬಳಸಬೇಕು?–ಶುದ್ಧವಾದ ತೆಂಗಿನ ಎಣ್ಣೆಯನ್ನು ಮೊಡವೆ ಪೀಡಿತ ಬೆನ್ನಿಗೆ ಮಸಾಜ್ ಮಾಡಿ ಸ್ವಲ್ಪ ಸಮಯವಾದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

​೪. ಸಮತೋಲಿತ ಆಹಾರವನ್ನು ಸೇವಿಸಿ—ಕೆಲವೊಮ್ಮೆ ಮೊಡವೆಗಳು ಕಳಪೆ ಆಹಾರ ಪದ್ಧತಿಗಳಿಂದಲೂ ಕೂಡ ಸಂಭವಿಸುತ್ತವೆ. ಸಾಕಷ್ಟು ಎಣ್ಣೆಯುಕ್ತ, ಕೊಬ್ಬಿನ ಆಹಾರ, ಬೇಕರಿ ತಿನಿಸುಗಳ ಸೇವನೆ ಮೊಡವೆಗಳಿಗೆ ಕಾರಣವಾಗಬಹುದು. ಗ್ಲೈಸೆಮಿಕ್ ಇಂಡೆಕ್ಸ್ ಅಧಿಕವಾಗಿರುವ ಆಹಾರಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದಲ್ಲದೇ, ಮೊಡವೆಗಳನ್ನು ಮತ್ತಷ್ಟು ಹದಗೆಡಿಸುತ್ತದೆ. ನಿಮ್ಮ ದೇಹದ ಆರೋಗ್ಯದ ಜೊತೆ ಜೊತೆಗೆ ತ್ವಚೆ ಹಾಗು ದೇಹ ಸೌಂದರ್ಯದ ವೃದ್ಧಿಗೆ ಪೌಷ್ಟಿಕಭರಿತ ಆಹಾರ ಸೇವನೆ ಮಾಡುವುದು ಅತಿ ಮುಖ್ಯವಾದುದು. ಹಸಿ ತರಕಾರಿಗಳು, ತಾಜಾ ಹಣ್ಣುಗಳು, ಧಾನ್ಯಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.

​೫. ವ್ಯಾಯಾಮದ ನಂತರ ಸ್ನಾನ ಮಾಡಿ–ಬೆನ್ನಿನ ಮೇಲೆ ಮೊಡವೆಗಳನ್ನು ಹೊಂದಿರುವವರು ವ್ಯಾಯಾಮ ಮಾಡಿದ ನಂತರ ಸ್ನಾನ ಮಾಡುವುದು ಅತಿ ಮುಖ್ಯವಾದುದು. ವ್ಯಾಯಾಮದ ವೇಳೆ, ಸಾಕಷ್ಟು ಬೆವರು ಮತ್ತು ಕೊಳಕು ನಿಮ್ಮ ಚರ್ಮದ ಮೇಲೆ ಕುಳಿತುಕೊಂಡಿರುತ್ತದೆ. ಒಂದು ವೇಳೆ ವ್ಯಾಯಾಮ ಮಾಡಿದ ನಂತರ ಸ್ನಾನ ಮಾಡದಿದ್ದರೆ, ಬೆನ್ನಿನ ಗೊಳ್ಳೆಗಳು ಮತ್ತಷ್ಟು ಬಿಗಡಾಯಿಸಬಹುದು.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago