Health

ತೂಕ ಹೆಚ್ಚಿಸಲು ಸುಲಭ ಉಪಾಯ!

ತೂಕವನ್ನು ಹೆಚ್ಚಿಸಿಕೊಳ್ಳಲು ಅನಾರೋಗ್ಯಕರ ವಿಧಾನವನ್ನು ಪ್ರಯತ್ನಿಸುವ ಬದಲು ನೈಸರ್ಗಿಕ ವಿಧಾನಗಳನ್ನು ಅನುಸರಿಸಿ. ತೂಕ ಹೆಚ್ಚಾಗಲು ಸಮಯ ಬೇಕಾಗಬಹುದು. ಆದರೆ ನೀವು ತಾಳ್ಮೆಯಿಂದಿರಬೇಕು ಮತ್ತು ಅದನ್ನು ಸರಿಯಾಗಿ ಅಭ್ಯಾಸ ಮಾಡಬೇಕು. ನೀವು ತೆಗೆದುಕೊಳ್ಳುವ ಆಹಾರಗಳ ಜತೆ ಒತ್ತಡಮುಕ್ತ ಜೀವನಶೈಲಿ, ವ್ಯಾಯಾಮ, ಉತ್ತಮ ನಿದ್ರೆ ಕೂಡ ಮುಖ್ಯ ಎಂಬುದು ನೆನಪಿರಲಿ. ಕ್ಯಾಲೋರಿ, ಪ್ರೊಟೀನ್‌, ಕೊಬ್ಬಿನ ಅಮಶಗಳು ದೇಹದ ತೂಕ ಹೆಚ್ಚಿಸಲು ಸಹಕಾರಿ. ಆದರೆ ಅದೇ ಅಧಿಕವಾಗಿ ಇತರೇ ಸಮಸ್ಸೆಗಳಿಗೆ ಕಾರಣವಾಗದಂತೆ ನೋಡಿಕೊಳ್ಳಿ.

  1. ನಿಮ್ಮ ಆಹಾರದಲ್ಲಿ ಕ್ಯಾಲೋರಿಗಳನ್ನು ಸೇರಿಸಿ

ಆಹಾರದಲ್ಲಿ ಹೆಚ್ಚು ಕ್ಯಾಲೋರಿಗಳನ್ನು ಹೊಂದಿರುವ ಆಹಾರವನ್ನು ಸೇವಿಸಬೇಕು. ನಿಮ್ಮ ಪ್ರಸ್ತುತ ತೂಕಕ್ಕೆ ಸುಮಾರು ಅರ್ಧ ಕಿಲೋ ಹೆಚ್ಚಿಸಲು ನೀವು ದಿನಕ್ಕೆ 250 ಕ್ಕೂ ಹೆಚ್ಚು ಕ್ಯಾಲೋರಿಗಳನ್ನು ತೆಗೆದುಕೊಳ್ಳಬೇಕು. ಅದು ಬೇಳೆಕಾಳುಗಳು, ಧಾನ್ಯಗಳು, ಮಾಂಸ, ಬ್ರೆಡ್‌, ಅಕ್ಕಿ, ಒಣ ಹಣ್ಣುಗಳು ಮತ್ತು ಬೀಜಗಳಲ್ಲಿ ಸಾಕಷ್ಟು ಕ್ಯಾಲೋರಿಗಳನ್ನು ಸೇವಿಸಿ. ಅಷ್ಟೆ ಅಲ್ಲ, ಫ್ರೆಂಚ್‌ ಬೀನ್ಸ್‌, ಬ್ರಕೋಲಿ, ಎಲೆಕೋಸು, ಕ್ಯಾರೆಟ್‌, ಪಾಲಕ್‌, ಶತಾವರಿ, ಕುಂಬಳಕಾಯಿ ನಿಮ್ಮ ಆಹಾರದಲ್ಲಿ ಇರಲಿ. ಕೆಂಪು ಮಾಂಸದ ಆರೋಗ್ಯಕರ ಭಾಗವನ್ನು ಸೇರಿಸಿ. ಆದರೆ ಅದನ್ನು ಅತಿಯಾಗಿ ಸೇವಿಸಬಾರದು ನೆನಪಿನಲ್ಲಿಡಿ. ಏಕೆಂದರೆ ಕೊಲಸ್ಟ್ರಾಲ್‌ ಪ್ರಮಾಣನ್ನು ಇದು ಹೆಚ್ಚಿಸಬಾರದು. ಕ್ಯಾಲೋರಿಗಳು ಮತ್ತು ಪ್ರೊಟೀನ್‌ ಸಮೃದ್ಧವಾಗಿರುವ ಆಹಾರಗಳು ತೂಕವನ್ನು ಹೆಚ್ಚಿಸಿಕೊಳ್ಳಲು ಮತ್ತು ನಿರ್ವಹಿಸಲು ಸುಲಭವಾಗಿ ಸಹಾಯ ಮಾಡುತ್ತದೆ.

  1. ಅಧಿಕ ಆಹಾರ ಸೇವನೆ

ಕ್ಯಾಲೋರಿ ಭರಿತ ಆಹಾರ ನಿಮ್ಮ ನಿತ್ಯದ ಆಹಾರದಲ್ಲಿರಲಿ. ಮೂರು ಬಾರಿ ಊಟ ಮಾಡುವ ಬದಲು ಆರು ಬಾರಿ ಸೇವಿಸಿ. ಮೂರು ಬಾರಿ ಅಧಿಕ ಆಹಾರ ತೆಗೆದುಕೊಂಡರೆ ಉಳಿದ ಮೂರು ಸಲ ಕಡಿಮೆ ಪ್ರಮಾಣದ ಆಹಾರ ಸೇವಿಸಿ. ಊಟದ ಜತೆ ರಾಗಿ ಅಂಬಲಿ, ಬೆಣ್ಣೆ ಸವರಿದ ಬ್ರೆಡ್‌, ಮತ್ತು ಹಣ್ಣುಗಳನ್ನು ಸೇವಿಸಿ. ಬೇಯಿಸಿದ ತರಕಾರಿ, ಒಣ ಹಣ್ಣುಗಳು, ಬೀಜಗಳು ನಿಮ್ಮ ಆಹಾರದಲ್ಲಿರಲಿ.

ಕೇಕ್‌, ಪಿಜ್ಜಾಗಳು, ಬರ್ಗರ್ಸ್‌ ಸೇವಿಸಬಹುದು. ನಿಮ್ಮ ದೇಹದಲ್ಲಿ ನಿರಂತರವಾದ ಶಕ್ತಿಯ ಮಟ್ಟವನ್ನು ನಿರ್ವಹಿಸಲು ಆಗಾಗ್ಗೆ ಮೂರು ರಿಂದ ನಾಲ್ಕು ಗಂಟೆಗೊಮ್ಮೆ ಆಹಾರ ಸೇವಿಸಿ.

  1. ಹೆಚ್ಚಿನ ಪ್ರೊಟೀನ್‌ಗಳಿರಲಿ

ಕೇವಲ ಕ್ಯಾಲೋರಿಗಳು ಮಾತ್ರ ನಿಮ್ಮ ದೇಹದ ತೂಕವನ್ನು ಹೆಚ್ಚಿಸುವುದಿಲ್ಲ. ನಿಮ್ಮ ಆಹಾರದಲ್ಲಿ ಪ್ರೊಟೀನ್‌ಗಳ ಪ್ರಮಾಣವೂ ಹೆಚ್ಚಿರಲಿ. ಮೊಟ್ಟೆ, ಮಾಂಸ, ಮೀನು, ಚರ್ಮರಹಿತ ಚಿಕನ್‌, ಕಾಳುಗಳು, ಡೈರಿ ಉತ್ಪನ್ನಗಳಲ್ಲಿ ಪ್ರೊಟೀನ್‌ ಸಮೃದ್ಧವಾಗಿವೆ.

  1. ಆರೋಗ್ಯಕರ ಕೊಬ್ಬು

ಸ್ನಾಯುವಿನ ಬೆಳವಣಿಗೆ ಕೊಬ್ಬು ಅವಶ್ಯಕ. ಸ್ನಾಯುಗಳ ಬೆಳವಣಿಗೆ ಮತ್ತು ಬಲಕ್ಕೆ ಇದು ಅತ್ಯಗತ್ಯ. ಇದು ಚಯಾಪಚಯ ಕ್ರಿಯೆಯನ್ನು ಸರಾಗ ಮಾಡುತ್ತದೆ. ದೇಹವು ಕೆಟ್ಟ ಕೊಬ್ಬನ್ನು ಕಳೆದುಕೊಳ್ಳಲು ಮತ್ತು ಉತ್ತಮ ಕೊಬ್ಬುಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಅನೇಕ ಪ್ರಮುಖ ದೇಹದ ಕಾರ್ಯಗಳಿಗೆ ಕೊಬ್ಬುಗಳು ಅತ್ಯಗತ್ಯ.ಸೊಪ್ಪು, ಬೀಜಗಳು, ಓಮೆಗಾ 3 ಅಂಶವಿರುವ ಆಹಾರಗಳಲ್ಲಿ ಕೂಡ ಆರೋಗ್ಯಕರ ಕೊಬ್ಬು ಸಿಗುತ್ತದೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago