Health

ಮನೆಯಲ್ಲಿ ಇರುವ ವಸ್ತು ಸಾಕು ಬರಿ 2 ನಿಮಿಷದಲ್ಲಿ ಕುಂಕುಮ ತಯಾರು ಆಗುತ್ತೆ!

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಾಗೂ ಸಂಪ್ರದಾಯದಲ್ಲಿ ಅರಿಶಿನ ಹಾಗೂ ಕುಂಕುಮಕ್ಕೆ ಮಹತ್ವ ಜಾಸ್ತಿ. ಯಾವುದೇ ಶುಭ ಸಂದರ್ಭದಲ್ಲಿ ಅರಿಶಿನ ಹಾಗು ಕುಂಕುಮ ಬಳಕೆ ಆಗದೆ ಇರುವುದಿಲ್ಲ. ಮದುವೆ, ಗೃಹಪ್ರವೇಶ, ನಾಮಕರಣ, ಹೀಗೆ ಹತ್ತು ಹಲವಾರು ಒಳ್ಳೆಯ ಕಾರ್ಯಕ್ರಮಗಳಲ್ಲಿ ಅರಿಶಿನ-ಕುಂಕುಮ ಉಪಯೋಗಕ್ಕೆ ಬರುತ್ತದೆ. ಅಷ್ಟೇ ಅಲ್ಲದೆ ನಿಮಗೆಲ್ಲ ಗೊತ್ತಿರುವ ಹಾಗೆ ಕುಂಕುಮ ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ಸಹ ಒಳಗೊಂಡಿದೆ.

ನಿಮಗೆಲ್ಲರಿಗೂ ಆಶ್ಚರ್ಯವಾಗಬಹುದು ಮತ್ತು ತಿಳಿದುಕೊಳ್ಳುವ ಕುತೂಹಲ ಕೂಡ ಇರಬಹುದು. ಅದೇನೆಂದರೆ ಕುಂಕುಮವನ್ನು ಹೇಗೆ ತಯಾರು ಮಾಡುತ್ತಾರೆ ಮತ್ತು ಎಲ್ಲಿ ತಯಾರು ಮಾಡುತ್ತಾರೆ ಎಂದು.ನಿಜ ಹೇಳಬೇಕು ಎಂದರೆ ಕುಂಕುಮವನ್ನು ನಾವೇ ಮನೆಯಲ್ಲಿ ಆರಾಮವಾಗಿ ತಯಾರು ಮಾಡಿ ನಮ್ಮ ದಿನನಿತ್ಯದ ಪೂಜೆಯ ಬಳಕೆಗೆ ಉಪಯೋಗಿಸಿಕೊಳ್ಳಬಹುದು. ಈ ಲೇಖನದಲ್ಲಿ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇದೆ.

​ಕುಂಕುಮದಲ್ಲಿ ಏನಿರುತ್ತದೆ ಮತ್ತು ಅದು ಹೇಗೆ ಸಹಾಯ ಮಾಡುತ್ತದೆ?ಕುಂಕುಮವನ್ನು ತಯಾರು ಮಾಡುವವರು ಅಪ್ಪಟ ಅರಿಶಿನಪುಡಿ, ಬೋರಾಕ್ಸ್, ಎಳ್ಳೆಣ್ಣೆ, ನಿಂಬೆಹಣ್ಣಿನ ರಸ, ಆಲಂ ಇತ್ಯಾದಿಗಳನ್ನು ಒಟ್ಟಾರೆಯಾಗಿ ಸೇರಿಸಿ ನೈಸರ್ಗಿಕವಾದ ರೀತಿಯಲ್ಲಿ ಇದನ್ನು ತಯಾರು ಮಾಡುತ್ತಾರೆ ಮತ್ತು ಇದು ಬಳಸಲು ಕೂಡ ಸುರಕ್ಷಿತ ಎಂದು ಹೇಳಬಹುದು.

ಅಷ್ಟೇ ಅಲ್ಲದೆ ನಿಮಗೆಲ್ಲ ಗೊತ್ತಿರುವ ಹಾಗೆ ಅರಿಶಿನದಲ್ಲಿ ಆಂಟಿಸೆಪ್ಟಿಕ್ ಗುಣಲಕ್ಷಣಗಳು ಸಾಕಷ್ಟಿವೆ. ಇವು ನಮ್ಮ ದೇಹದಿಂದ ಸೋಂಕುಗಳನ್ನು ದೂರಮಾಡುವ ಜೊತೆಗೆ ನಮ್ಮ ದೇಹವನ್ನು ತಂಪಾಗಿ ಇರಿಸುವುದು ಎಂಬ ಮಾತಿದೆ. ಹೆಣ್ಣು ಮಕ್ಕಳು ಹಣೆಯ ಮಧ್ಯಭಾಗದಲ್ಲಿ ಇರಿಸುವ ಕುಂಕುಮ ದೇಹವನ್ನು ತಂಪು ಮಾಡುತ್ತದೆ ಎಂಬ ಮಾತಿದೆ.

ಇನ್ನು ಇದರಲ್ಲಿ ಬಳಕೆಮಾಡುವ ಬೋರಾಕ್ಸ್, ಆಂಟಿಸೆಪ್ಟಿಕ್ ಮತ್ತು ಆಂಟಿ ಫಂಗಲ್ ಗುಣಲಕ್ಷಣಗಳ ಜೊತೆಗೆ ಆಂಟಿ ವೈರಲ್ ಲಕ್ಷಣಗಳನ್ನು ಸಹ ಪಡೆದಿದೆ. ಮುಖ್ಯವಾಗಿ ನಾವು ಆಲಂ ಕೂಡ ಇದರಲ್ಲಿ ಬಳಕೆ ಮಾಡುತ್ತಿರುವುದರಿಂದ ಇದೊಂದು ಆಂಟಿಸೆಪ್ಟಿಕ್ ಏಜೆಂಟ್ ಆಗಿ ಕೆಲಸಮಾಡಿ ಚರ್ಮದ ಮೇಲೆ ಕಂಡುಬರುವ ಸೋಂಕುಗಳನ್ನು ದೂರಮಾಡುತ್ತದೆ.

​ನಿಂಬೆಹಣ್ಣಿನ ರಸ–ನಿಂಬೆಹಣ್ಣಿನ ರಸ ಮುಖ್ಯವಾಗಿ ತ್ವಚೆಗೆ ಹಾಗೂ ಆರೋಗ್ಯಕ್ಕೆ ಸಾಕಷ್ಟು ಅನುಕೂಲವನ್ನು ಉಂಟುಮಾಡಲಿದೆ. ಚರ್ಮದ ಮೃದುತ್ವವನ್ನು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ನೆರವಾಗುತ್ತದೆ ಎಂದು ಹೇಳುತ್ತಾರೆ.ಕುಂಕುಮದ ಬಣ್ಣ ಕೆಂಪು ಬಣ್ಣಕ್ಕೆ ಬದಲಾಗಲು ನಿಂಬೆಹಣ್ಣಿನ ರಸ ಪ್ರಮುಖ ಕಾರಣ. ಇದರ ಜೊತೆಗೆ ಬಳಕೆಮಾಡುವ ಎಳ್ಳೆಣ್ಣೆ ಚರ್ಮಕ್ಕೆ ಅತ್ಯದ್ಭುತ ಮಾಯಿಸ್ಚರೈಸರ್ ಆಗಿ ಕೆಲಸ ಮಾಡುವ ಜೊತೆಗೆ ನಿಮ್ಮ ತ್ವಚೆಯನ್ನು ಸೋಂಕುಗಳ ಹಾವಳಿಯಿಂದ ಮುಕ್ತಿ ಮಾಡುತ್ತದೆ.

​ಕುಂಕುಮವನ್ನು ನೀವೇ ಮನೆಯಲ್ಲಿ ಸ್ವತ: ಮಾಡಲು ನಿಮಗೆ ಬೇಕಾಗಿರುವ ಸಾಮಗ್ರಿಗಳು..ಸರಾಸರಿ ಒಂದು ಕೆಜಿ ಅರಿಶಿನ ಕೊಂಬು, ಇದನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಅಥವಾ ಮಿಲ್ ಗೆ ಹಾಕಿಸಿ.40 ಗ್ರಾಮ ಆಲಂ,120 ಗ್ರಾಂ ಬೋರಾಕ್ಸ್ಎ,ಲ್ಲವನ್ನು ಸೇರಿಸಿ ಚೆನ್ನಾಗಿ ಪೇಸ್ಟ್ ತಯಾರು ಮಾಡಲು ಬೇಕಾಗುವಂತೆ ನಿಂಬೆಹಣ್ಣಿನ ರಸ. ಸುಮಾರು 20 ರಿಂದ 25 ನಿಂಬೆಹಣ್ಣು ಆದರೆ ಸಾಕಾಗುತ್ತದೆ.ಎರಡು ಟೇಬಲ್ ಚಮಚ ಎಳ್ಳೆಣ್ಣೆ–​ಇದನ್ನು ತಯಾರು ಮಾಡುವ ವಿಧಾನ–ಮೊದಲಿಗೆ ಆಲಂ ಪೌಡರ್ ಮತ್ತು ಬೋರಾಕ್ಸ್ ಪೌಡರ್ ಎರಡನ್ನೂ ಒಟ್ಟಿಗೆ ಮಿಶ್ರಣ ಮಾಡಿ ಅದಕ್ಕೆ ನಿಂಬೆಹಣ್ಣಿನ ರಸ ಸೇರಿಸಿ ಪೇಸ್ಟ್ ತಯಾರು ಮಾಡಿಕೊಳ್ಳಿ.ಇದನ್ನು ಕುಟ್ಟಿ ತಯಾರು ಮಾಡಿಕೊಂಡ ಅರಿಶಿನ ಪುಡಿಯ ಜೊತೆಗೆ ಸೇರಿಸಿ ಮಿಶ್ರಣ ಮಾಡಿ ಪೇಸ್ಟ್ ತಯಾರು ಮಾಡಿಕೊಳ್ಳಿ.

ನಂತರ ಇದನ್ನು ಎರಡರಿಂದ ಮೂರು ದಿನಗಳ ಕಾಲ ನೆರಳಿನಲ್ಲಿ ಒಣಗಿಸಬೇಕು. ಈ ಸಂದರ್ಭದಲ್ಲಿ ಅರಿಶಿನ ನಿಧಾನವಾಗಿ ಕೆಂಪು ಬಣ್ಣಕ್ಕೆ ತಿರುಗಿ ಕುಂಕುಮವಾಗಿ ಬದಲಾಗುತ್ತದೆ.ಇದು ಸಂಪೂರ್ಣವಾಗಿ ಒಣಗಿದ ನಂತರ, ಕೆಲವು ಹನಿಗಳಷ್ಟು ಎಳ್ಳೆಣ್ಣೆ ತೆಗೆದುಕೊಂಡು ಕೈಗೆ ಹಚ್ಚಿಕೊಂಡು ಈ ಪುಡಿಯನ್ನು ಚೆನ್ನಾಗಿ ಉಜ್ಜಿ ಕೆಳಗೆ ಹಾಕಿ. ಎಣ್ಣೆಯ ಪ್ರಭಾವದಿಂದ ಈ ಪುಡಿ ಕೇವಲ ಸ್ವಲ್ಪ ಪ್ರಮಾಣದಲ್ಲಿ ನೆನೆಯುವಂತೆ ಮಾತ್ರ ಉಜ್ಜಿ. ಆದರೆ ಯಾವುದೇ ಕಾರಣಕ್ಕೂ ಇದನ್ನು ಪೇಸ್ಟ್ ಮಾಡಲು ಹೋಗಬೇಡಿ.ಈಗ ಇದನ್ನು ಒಂದು ಗಾಜಿನ ಅಥವಾ ಮರದ ಕಂಟೈನರ್ ನಲ್ಲಿ ಶೇಖರಣೆ ಮಾಡಿ ಇರಿಸಿ.ನಿಮಗೆ ಬೇಕೆಂದು ಸಂದರ್ಭದಲ್ಲಿ ಇದನ್ನು ಬಳಕೆ ಮಾಡಿಕೊಳ್ಳಬಹುದು.

​ಗಮನಿಸಬೇಕಾದ ಅಂಶ–ಒಂದು ವೇಳೆ ನೀವು ಅಂಗಡಿಯಲ್ಲಿ ಕುಂಕುಮವನ್ನು ತೆಗೆದುಕೊಂಡಾಗ ಅದರ ನೈಜತ್ವವನ್ನು ಪರೀಕ್ಷೆ ಮಾಡಲು, ಒಂದೆರಡು ಚಿಟಿಕೆ ಕುಂಕುಮವನ್ನು ಒಂದು ಪೇಪರ್ ಮೇಲೆ ಹಾಕಿಕೊಂಡು ಅದನ್ನು ಪೇಪರ್ ಅಂಚಿನಲ್ಲಿ ಚೆನ್ನಾಗಿ ಉಜ್ಜಬೇಕು.ಹೀಗೆ ಮಾಡಿದಾಗ ಅದರಲ್ಲಿ ಯಾವುದೇ ಬಣ್ಣಗಳು ಬಳಕೆ ಆಗದಿದ್ದರೆ ಪೇಪರ್ ಭಾಗದಲ್ಲಿ ಹಳದಿ ಬಣ್ಣ ಕಂಡು ಬರಲು ಪ್ರಾರಂಭವಾಗುತ್ತದೆ. ಆಗ ನೀವು ತೆಗೆದುಕೊಂಡಿರುವ ಕುಂಕುಮ ಅಪ್ಪಟ ಎಂದು ಹೇಳಬಹುದು.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago