Astrology

ನಾವು ಕಿವಿಗಳನ್ನು ಏಕೆ ಚುಚ್ಚುತ್ತೇವೆ!

ಓಲೆಯು ಹಾಲೆಯಲ್ಲಿ ಅಥವಾ ಕಿವಿಯ ಮತ್ತೊಂದು ಬಾಹ್ಯ ಭಾಗದಲ್ಲಿ ಚುಚ್ಚುವಿಕೆ ಮೂಲಕ ಕಿವಿಗೆ ಲಗತ್ತಿಸಲಾದ ಒಂದು ಆಭರಣ. ಓಲೆಗಳನ್ನು ಎರಡೂ ಲಿಂಗದವರು ತೊಡುತ್ತಾರೆ, ಆದರೆ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ, ಮತ್ತು ಓಲೆಗಳನ್ನು ವಿಭಿನ್ನ ಕಾಲಗಳಲ್ಲಿ ವಿಭಿನ್ನ ನಾಗರಿಕತೆಯ ಜನರು ಬಳಸಿದ್ದಾರೆ. ಕಿವಿಯ ಹಾಲೆಯನ್ನು ಹೊರತುಪಡಿಸಿ ಚುಚ್ಚುವಿಕೆಗೆ ಅನ್ಯ ಸ್ಥಳಗಳಲ್ಲಿ ರೂಕ್, ಟ್ರ್ಯಾಗಸ್, ಹೊರಗಿವಿಯ ಅಂಚಿನ ಸುತ್ತಲಿನ ಸ್ಥಳ ಸೇರಿವೆ.

ಸರಳ ಪದವಾದ “ಕಿವಿ ಚುಚ್ಚುವಿಕೆ”ಯು ಸಾಮಾನ್ಯವಾಗಿ ಹಾಲೆಯ ಚುಚ್ಚುವಿಕೆಯನ್ನು ಸೂಚಿಸುತ್ತದೆ. ಬಾಹ್ಯ ಕಿವಿಯ ಮೇಲಿನ ಭಾಗದಲ್ಲಿನ ಚುಚ್ಚುವಿಕೆಗಳನ್ನು ಹಲವುವೇಳೆ “ಮೃದ್ವಸ್ಥಿ ಚುಚ್ಚುವಿಕೆ”ಗಳೆಂದು ಸೂಚಿಸಲಾಗುತ್ತದೆ. ಮೃದ್ವಸ್ಥಿ ಚುಚ್ಚುವಿಕೆಗಳು ಹಾಲೆಯ ಚುಚ್ಚುವಿಕೆಗಳಿಗೆ ಹೋಲಿಸಿದರೆ ಕೈಗೊಳ್ಳಲು ಹೆಚ್ಚು ಸಂಕೀರ್ಣವಾಗಿರುತ್ತವೆ ಮತ್ತು ವಾಸಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ.

ಓಲೆಯ ಘಟಕಗಳನ್ನು ಅನೇಕ ಸಂಖ್ಯೆಯ ವಸ್ತುಗಳಿಂದ ತಯಾರಿಸಬಹುದು. ಇವುಗಳಲ್ಲಿ  ಲೋಹ ಪ್ಲಾಸ್ಟಿಕ್ ಗಾಜು ರತ್ನದ ಕಲ್ಲು ಮಣಿಗಳು, ಕಟ್ಟಿಗೆ ,  ಮೂಳೆ ಮತ್ತು ಇತರೆ ವಸ್ತುಗಳ ಸೇರಿವೆ. ವಿನ್ಯಾಸಗಳು ಸಣ್ಣ ಕುಣಿಕೆಗಳು ಮತ್ತು ಗುಬಟುಗಳಿಂದ ಹಿಡಿದು ದೊಡ್ಡ ತಟ್ಟೆಗಳು ಮತ್ತು ಜೋತಾಡುವ ವಸ್ತುಗಳವರೆಗೆ ವ್ಯಾಪಿಸುತ್ತವೆ. ಗಾತ್ರವು ಅಂತಿಮವಾಗಿ ಹಾಲೆಯು ಹರಿಯದೆ ಓಲೆಯನ್ನು ಹಿಡಿದಿಡುವ ಭೌತಿಕ ಸಾಮರ್ಥ್ಯದಿಂದ ಸೀಮಿತವಾಗಿರುತ್ತದೆ. ಆದರೆ, ವಿಸ್ತೃತ ಕಾಲಾವಧಿಗಳವರೆಗೆ ಧರಿಸಲಾದ ಭಾರವಾದ ಓಲೆಗಳು ಹಾಲೆ ಮತ್ತು ಚುಚ್ಚುರಂಧ್ರದ ವಿಸ್ತರಿಸುವಿಕೆಗೆ ಕಾರಣವಾಗಬಹುದು.

ಕಿವಿ ಚುಚ್ಚುವಿಕೆಯು ದೇಹದ ಮಾರ್ಪಾಡಿನ ಪರಿಚಿತವಾದ ಅತ್ಯಂತ ಹಳೆಯ ರೂಪಗಳಲ್ಲಿ ಒಂದಾಗಿದೆ. ವಿಶ್ವದ ಸುತ್ತಲಿನ ಸಂಸ್ಕೃತಿಗಳಿಂದ ಇದರ ಕಲಾತ್ಮಕ ಮತ್ತು ಲಿಖಿತ ಉಲ್ಲೇಖಗಳು ಮುಂಚಿನ ಇತಿಹಾಸದಷ್ಟು ಹಿಂದಿನ ಕಾಲಮಾನದ್ದಾಗಿವೆ.  ಚಿನ್ನ ಬೆಳ್ಳಿ ಮತ್ತು ಕಂಚಿನ ದುಂಡುಕಟ್ಟಿನ ಓಲೆಗಳು ಮಿನೋವನ್ ನಾಗರಿಕತೆಯಲ್ಲಿ ಪ್ರಚಲಿತವಾಗಿದ್ದವು ಮತ್ತು ಉದಾಹರಣೆಗಳನ್ನು ಗ್ರೀಸ್‍ನ ಏಜಿಯನ್ ದ್ವೀಪದ ಮೇಲಿನ ಹಸಿಚಿತ್ರಗಳ ಮೇಲೆ ಕಾಣಬಹುದು.

ಕಂಚಿನ ಯುಗದ ಗ್ರೀಸ್‍ನ ಮಿನೋವನ್ ಅವಧಿಯ ಪೂರ್ವಾರ್ಧ ಮತ್ತು ಮೈಸಿನೇಯನ್ ಅವಧಿಯ ಮುಂಚಿನಲ್ಲಿ ಶಂಕುವಿನಾಕಾರದ ಲೋಲಕಗಳಿರುವ ದುಂಡುಕಟ್ಟಿನ ಓಲೆಗಳ ಶೈಲಿ ರೂಢಿಯಲ್ಲಿತ್ತು. ಪುರುಷರು ಓಲೆಗಳನ್ನು ಧರಿಸುತ್ತಿದ್ದುದರ ಮುಂಚಿನ ಸಾಕ್ಷ್ಯವನ್ನು ಪ್ರಾಚೀನ ಪರ್ಷಿಯಾದಲ್ಲಿನ ಪರ್ಸೆಪೋಲಿಸ್‍ನ ಪುರಾತತ್ವ ಸಾಕ್ಷ್ಯದಲ್ಲಿ ಕಾಣಬಹುದು. ಅರಮನೆಯ ಉಳಿದುಕೊಂಡಿರುವ ಕೆಲವು ಗೋಡೆಗಳ ಮೇಲೆ ಪ್ರದರ್ಶನಗೊಂಡ ಪರ್ಷಿಯನ್ ಸಾಮ್ರಾಜ್ಯದ ಸೈನಿಕರ ಕೆತ್ತಲ್ಪಟ್ಟ ವಿಗ್ರಹಗಳು, ಓಲೆಗಳನ್ನು ಧರಿಸಿರುವುದನ್ನು ತೋರಿಸುತ್ತವೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

8 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

8 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

8 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

8 months ago