Kannada News

ಯಾವ ಬೆರಳೆನಿಂದ ಕುಂಕುಮ ಹಚ್ಚಿದರೆ ತುಂಬಾ ಶ್ರೇಷ್ಠ!

ಹಣೆಯ ಮೇಲೆ ತಿಲಕವನ್ನು ಇಟ್ಟುಕೊಳ್ಳುವುದು ಅಥವಾ ಸಿಂಧೂರವನ್ನು ಅನ್ವಯಿಸಿಕೊಳ್ಳುವುದು ಹಿಂದೂ ಧರ್ಮದಲ್ಲಿ ಒಂದು ಪವಿತ್ರವಾದ ಆಚರಣೆ. ಕೆಲವು ಧಾರ್ಮಿಕ ಹಿನ್ನೆಲೆ ಹಾಗೂ ವೈಜ್ಞಾನಿಕ ಕಾರಣಗಳಿಂದಾಗಿ ಮಹಿಳೆಯರು ಕಡ್ಡಾಯವಾಗಿ ಹಣೆಯ ಮೇಲೆ ಸಿಂಧೂರವನ್ನು ಇಟ್ಟುಕೊಳ್ಳಬೇಕು ಎನ್ನುವ ಪದ್ಧತಿಯಿದೆ. ಪುರುಷರು ಸಹ ತಿಲಕವನ್ನು ಇಟ್ಟುಕೊಳ್ಳಬೇಕು ಎನ್ನುವ ಸಂಪ್ರದಾಯವಿದೆ. ಆದರೆ ಇತ್ತೀಚಿನ ಫ್ಯಾಷನ್ ಪ್ರಪಂಚದಲ್ಲಿ ಅದನ್ನು ಮರೆತಿದ್ದಾರೆ ಅಷ್ಟೆ.

ಅದೃಷ್ಟವನ್ನು ಸೂಚಿಸುವ ತಿಲಕ—ಪುರಾಣದ ಹಿನ್ನೆಲೆಯ ಪ್ರಕಾರ ತಿಲಕವನ್ನು ಇಟ್ಟುಕೊಳ್ಳುವುದು ಅಥವಾ ಇತರರಿಗೆ ಇಡುವುದರಿಂದ ಅದೃಷ್ಟ ಮತ್ತು ಸಂತೋಷ ಸಿಗುವುದು ಎನ್ನಲಾಗುತ್ತದೆ. ಶ್ರೀಗಂಧ, ಸಿಂಧೂರ ಅಥವಾ ಭಸ್ಮವನ್ನು ತಿಲಕದ ರೂಪದಲ್ಲಿ ಅನ್ವಯಿಸಿಕೊಳ್ಳಬಹುದು. ಶಿವನ ಭಕ್ತರು ಭಸ್ಮವನ್ನು, ವಿಷ್ಣು ಭಕ್ತರು ಸಿಂಧೂರವನ್ನು ಮತ್ತು ದುರ್ಗೆಯ ಭಕ್ತರು ಸಿಂಧೂರವನ್ನು ಅನ್ವಯಿಸಿಕೊಳ್ಳುತ್ತಾರೆ ಎಂದು ಹೇಳಲಾಗುವುದು. ಎರಡು ಹುಬ್ಬುಗಳು ಕೂಡುವ ಜಾಗದಲ್ಲಿ ಉಂಗುರ ಬೆರಳಿನಿಂದ ಅನ್ವಯಿಸಿಕೊಂಡರೆ ಅತ್ಯಂತ ಶ್ರೇಷ್ಠ ಹಾಗೂ ಅದೃಷ್ಟವನ್ನು ಸೂಚಿಸುವುದು ಎನ್ನುವ ನಂಬಿಕೆಯಿದೆ. ತಿಲಕವನ್ನು ಅನ್ವಯಿಸಿಕೊಳ್ಳುವುದರಿಂದ ಉಂಟಾಗುವ ಅದೃಷ್ಟಗಳು ಯಾವವು? ಯಾವ ಬೆರಳುಗಳಿಂದ ತಿಲಕವನ್ನು ಅನ್ವಯಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಲೇಖನದ ಮುಂದಿನ ಭಾಗವನ್ನು ಪರಿಶೀಲಿಸಿ

ಮಧ್ಯ ಬೆರಳಿನಿಂದ ತಿಲಕದ ಅನ್ವಯ: ಸಮೃದ್ಧಿಯನ್ನು ಸೂಚಿಸುವುದು—ಮಧ್ಯದ ಬೆರಳನ್ನು ಬಳಸಿ ತಿಲಕವನ್ನು ಅನ್ವಯಿಸಿದರೆ ಜೀವನದಲ್ಲಿ ಅದೃಷ್ಟ ಮತ್ತು ಸಮೃದ್ಧಿಯು ಪ್ರಾಪ್ತಿಯಾಗುವುದು. ಹಿಂದೂ ಪುರಾಣದ ಪ್ರಕಾರ ಶನಿ ದೇವನು ಮಧ್ಯ ಬೆರಳಿನ ಬುಡದಲ್ಲಿ ಇರುತ್ತಾನೆ ಎಂದು ಹೇಳಲಾಗುವುದು. ಜೀವ ರಕ್ಷಕ ದೇವ ಶನಿ. ಹಾಗಾಗಿ ತಿಲಕವನ್ನು ಈ ಬೆರಳಿನಿಂದ ಅನ್ವಯಿಸಿದರೆ ಬೆರಳು ಸಕ್ರಿಯಗೊಳ್ಳುವುದು. ಇದು ಶನಿ ದೇವರ ಆಶೀರ್ವಾದ ಸಿಗುವಂತೆ ಮಾಡುವುದು. ಇದರಿಂದ ವ್ಯಕ್ತಿಯು ಸಂಪತ್ತು ಮತ್ತು ಸಮೃದ್ಧಿಯನ್ನು ಜೀವನದಲ್ಲಿ ಪಡೆದುಕೊಳ್ಳುತ್ತಾನೆ.

ಉಂಗುರ ಬೆರಳಿನಿಂದ ತಿಲಕವನ್ನು ಅನ್ವಯಿಸಿದರೆ ಶಾಂತಿ ದೊರೆಯುವುದು–ಜೀವನವು ಶಾಂತಿ ಹಾಗೂ ನೆಮ್ಮದಿಯಿಂದ ಕೂಡಿರಲಿ ಎಂದು ಎಲ್ಲರೂ ಬಯಸುವುದು ಸಹಜ. ಇಂತಹ ಒಂದು ವಿಷಯವನ್ನು ನೀವು ಬಯಸುತ್ತೀರಿ ಎಂದಾದರೆ ಉಂಗುರ ಬೆರಳಿನಿಂದ ತಿಲಕವನ್ನು ಅನ್ವಯಿಸಿ ಅಥವಾ ಇತರರಿಗೆ ತಿಲಕವನ್ನು ಇಡುವಾಗ ಉಂಗುರ ಬೆರಳನ್ನು ಬಳಸಿ. ಇದರಿಂದ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ದೊರೆಯುವುದು. ಉಂಗುರ ಬೆರಳಿನ ಬುಡದಲ್ಲಿ ಸೂರ್ಯ ದೇವನು ಇರುತ್ತಾನೆ. ಈ ಬೆರಳಿನಿಂದ ತಿಲಕವನ್ನು ಇಟ್ಟಾಗ ಸೂರ್ಯನ ಬೆರಳು ಸಕ್ರಿಯಗೊಳ್ಳುತ್ತದೆ. ಈ ಬೆರಳು ಹಣೆಯ ಮೇಲೆ ಇರುವ ಆಗ್ಯ ಚಕ್ರವನ್ನು ಜಾಗೃತಗೊಳಿಸುತ್ತದೆ. ಸೂರ್ಯ ದೇವನು ಬುದ್ಧಿಶಕ್ತಿ ಹಾಗೂ ನೆಮ್ಮದಿಯ ಜೀವನವನ್ನು ಕರುಣಿಸುವನು. ದೇವರಿಗೆ ತಿಲಕವನ್ನು ಅನ್ವಯಿಸುವಾಗ ಈ ಬೆರಳಿನ ಸಹಾಯದಿಂದ ತಿಲಕವನ್ನು ಇಟ್ಟರೆ ಜೀವನದಲ್ಲಿ ಉತ್ತಮ ಅದೃಷ್ಟ ಹಾಗೂ ಸಮೃದ್ಧಿಯು ಪ್ರಾಪ್ತಿಯಾಗುತ್ತದೆ.

ಹೆಬ್ಬೆರಳಿನಿಂದ ತಿಲಕವನ್ನು ಅನ್ವಯಿಸುವುದು : ಸಾಮರ್ಥ್ಯವನ್ನು ಹೆಚ್ಚಿಸುವುದು—ಹಿಂದೂ ಜ್ಯೋತಿಷ್ಯ ಶಾಸ್ತ್ರ ಹಾಗೂ ಪುರಾಣಗಳ ಪ್ರಕಾರ ಶುಕ್ರನು ಹೆಬ್ಬರಳಿನ ಬುಡದಲ್ಲಿ ಇರುತ್ತಾನೆ. ಹೆಬ್ಬೆರಳನ್ನು ಬಳಸಿ ತಿಲಕವನ್ನು ಇಟ್ಟುಕೊಂಡರೆ ವ್ಯಕ್ತಿಗೆ ಆರೋಗ್ಯ ಮತ್ತು ಸಂಪತ್ತು ವೃದ್ಧಿಯಾಗುವುದು.

ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರಿಗೆ ಹೆಬ್ಬೆರಳನ್ನು ಬಳಸಿ ಅವರಿಗೆ ಶ್ರೀಗಂಧದ ತಿಲಕವನ್ನು ಇಡಿ. ಶುಕ್ರನ ಉಪಸ್ಥಿತಿಯಲ್ಲಿ ಮತ್ತು ಶ್ರೀಗಂಧದ ತಂಪಾದ ಗುಣವು ಪುನರ್ಯೌವನ ನೀಡುವುದು. ರೋಗವು ಬಹುಬೇಗ ನಿವಾರಣೆಯನ್ನು ಕಾಣುವುದು.

ತೋರ ಬೆರಳಿನಿಂದ ತಿಲಕವನ್ನು ಅನ್ವಯಿಸುವುದು : ಮೋಕ್ಷವನ್ನು ನೀಡುತ್ತದೆ ಒಂದು ಹಂತದಲ್ಲಿ ವ್ಯಕ್ತಿ ತನ್ನ ಮರಣದ ಚಕ್ರದಿಂದ ದೂರ ಇರುತ್ತಾನೆ. ತೋರು ಬೆರಳು ಮೋಕ್ಷವನ್ನು ಪಡೆಯಲು ಸಹಾಯ ಮಾಡುವುದು. ಹಾಗಾಗಿ ತಿಲಕವನ್ನು ನಾವು ಇಟ್ಟುಕೊಳ್ಳುವಾಗ ಮತ್ತು ಇತರರಿಗೆ ಇಡುವಾಗ ತೋರು ಬೆರಳನ್ನು ಬಳಸಬಾರದು. ಅದು ಮರಣವನ್ನು ಹತ್ತಿರ ಮಾಡುವುದು. ಮುಕ್ತಿ ಅಥವಾ ಮೋಕ್ಷ ಎನ್ನುವುದು ವ್ಯಕ್ತಿಯ ಸಾವಿನ ನಂತರ ಸಿಗುವ ಸಂಗತಿ. ಜೀವನ ಮತ್ತು ಸಾವಿನ ಚಕ್ರವು ಸಾಕಷ್ಟು ಅಂತರದಲ್ಲಿ ಇರುತ್ತವೆ. ಅವುಗಳನ್ನು ಶೀಘ್ರವಾಗಿ ಆಮಂತ್ರಿಸಬಾರದು.

ತಲೆ ಮೇಲೆ ತಿಲಕವನ್ನು ಅನ್ವಯಿಸುವುದುಹಲವಾರು ವರ್ಷಗಳಿಂದ ಆಚರಣೆಯಲ್ಲಿರುವ ಮತ್ತು ಜನಪ್ರಿಯತೆಯನ್ನು ಪಡೆದುಕೊಂಡ ಪದ್ಧತಿ. ಹಾಗಾಗಿ ಶುಭ ಸಮಾರಂಭದಲ್ಲಿ ಅಥವಾ ಧಾರ್ಮಿಕ ಕಾರ್ಯಕ್ರಮದಲ್ಲಿ ತಿಲಕವನ್ನು ಹಣೆಯ ಮೇಲೆ ಅನ್ವಯಿಸಿಕೊಳ್ಳಲಾಗುವುದು. ತಲೆಯ ಮೇಲೆ ಅಗ್ಯ ಚಕ್ರ ಇರುವ ಸ್ಥಳದಲ್ಲಿ ತಿಲಕವನ್ನು ಇಡುವುದರಿಂದ ಅದೃಷ್ಟವು ಹೆಚ್ಚುವುದು. ಅದು ಗುರುವಿನ ಸ್ಥಾನವಾಗಿರುವುದರಿಂದ ಜೀವನದಲ್ಲಿ ಸಾಕಷ್ಟು ಉತ್ತಮ ಫಲವನ್ನು ಪಡೆದುಕೊಳ್ಳುವರು. ಗುರುವಿನ ಸಕಾರಾತ್ಮಕ ಪ್ರಭಾವ ದೊರೆಯುವುದು.

ಶುಭವನ್ನು ತರುವ ತಿಲಕ–ಯಶಸ್ಸನ್ನು ಸಾಧಿಸಲು ಹಾಗೂ ನೆಮ್ಮದಿಯ ಬದುಕನ್ನು ತಿಲಕವು ಕರುಣಿಸುವುದು. ಕೆಲವು ಪುರಾಣಗಳ ಹೇಳಿಕೆಯ ಪ್ರಕಾರ ಯಶಸ್ಸನ್ನು ಸಾಧಿಸಲು ರೋಲಿ, ಅರಿಶಿನ, ಚಂದನ ಅಥವಾ ಕುಂಕುಮವನ್ನು ತಿಲಕವನ್ನಾಗಿ ಅನ್ವಯಿಸಿಕೊಳ್ಳಬೇಕು. ಹೊಸ ಕೆಲಸಕ್ಕೆ ಹೋಗುವಾಗ ಕಪ್ಪು ಅರಿಶಿನ ತಿಲಕವನ್ನು ಅನ್ವಯಿಸಿಕೊಳ್ಳಬೇಕು. ಆಗ ನೀವು ಕೈಗೊಂಡ ಕೆಲಸವು ಉತ್ತಮ ಯಶಸ್ಸನ್ನು ಮತ್ತು ಕೀರ್ತಿಯನ್ನು ತಂದುಕೊಡುವುದು. ಹಣೆಯ ಮೇಲೆ ಇಟ್ಟುಕೊಳ್ಳುವ ತಿಲಕದ ಜೊತೆಗೆ ಅಕ್ಕಿಯನ್ನು /ಅಕ್ಷತೆಯನ್ನು ಇಟ್ಟುಕೊಳ್ಳುವ ವ್ಯಕ್ತಿಯೊಂದಿಗೆ ಲಕ್ಷ್ಮಿ ದೇವಿ ಸದಾ ಇರುತ್ತಾಳೆ ಎನ್ನಲಾಗುವುದು. ಅವರಿಗೆ ಆರ್ಥಿಕವಾಗಿ ಯಾವುದೇ ತೊಂದರೆ ಉಂಟಾಗದು ಎಂದು ಸಹ ಹೇಳುತ್ತಾರೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago