Astrology

ಮನೆಯಲ್ಲಿ ವಾಸ್ತು ಗಿಡಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು!

Kannada vastu tips :ಸಾಮಾನ್ಯವಾಗಿ ವಾಸ್ತು ಗಿಡಗಳನ್ನು ಮನೆಯಲ್ಲಿ ಬೆಳೆಸುವ ಬಗ್ಗೆ ಜನರಲ್ಲಿ ಸಾಕಷ್ಟು ನಂಬಿಕೆಗಳಿವೆ. ಇದರಿಂದ ಅಭಿವೃದ್ಧಿ , ಸುಖ,ಶಾಂತಿ , ನೆಮ್ಮದಿ ಲಭಿಸುತ್ತದೆ ಎನ್ನುವ ನಂಬಿಕೆ ಅನೇಕರಲ್ಲಿದೆ.ಹಾಗಾದರೆ ಈ ವಾಸ್ತು ಗಿಡಗಳು ಯಾವುವು ಹಾಗು ಯಾವ ದಿಕ್ಕಿನಲ್ಲಿ ಇಡಬೇಕು ಎಂದು ತಿಳಿಯಲು ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ.

1 )ತುಳಸಿ ಗಿಡ (ಬೆಸೆಲ್ )ವಾಸ್ತು ಪ್ರಕಾರ ತುಳಸಿ ಗಿಡ ಶುದ್ಧ ಹಾಗೂ ಪವಿತ್ರವಾದ ಗಿಡ.ಇದರಲ್ಲಿ ಅತಿ ಹೆಚ್ಚಿನ ಧನಾತ್ಮಕ ಶಕ್ತಿ ಅಂದ್ರೆ ಪಾಸಿಟಿವ್ ಎನರ್ಜಿ ಇರುತ್ತದೆ.ಇದನ್ನು ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಬೆಳೆಸಬೇಕು. ಇದರಿಂದ ವಾತಾವರಣದಲ್ಲಿ ಧನಾತ್ಮಕ ಶಕ್ತಿ ಹೆಚ್ಚಿ ಮನೆಯವರ ಆರೋಗ್ಯದಲ್ಲಿ ಅಭಿವೃದ್ಧಿ ಉಂಟಾಗುತ್ತದೆ.

2 )ಬ್ಯಾಂಬೂ ಪ್ಲಾಂಟ್ಅಥವಾ ಬಿದುರಿನ ಗಿಡವಾಸ್ತುವಿನಲ್ಲಿ ಈ ಗಿಡ ಅದೃಷ್ಟ ತರುವ ಗಿಡ ಹಾಗೂ ದುಷ್ಟ ಶಕ್ತಿಗಳನ್ನು ದೂರ ಮಾಡುವ ಗಿಡ ಎಂದೇ ಬಿಂಬಿತವಾಗಿದೆ.ಇದನ್ನು ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ಆರೋಗ್ಯದಲ್ಲಿ ಅಭಿವೃದ್ಧಿ ಉಂಟಾಗುತ್ತದೆ . ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ ಹಣಕಾಸಿನ ಅಭಿವೃದ್ಧಿಯಾಗುತ್ತದೆ.

3 )ಆಲೋವೆರಾ ಅಥವಾ ಲೋಳೆಸರ=ಲೋಳೆಸರ ಸಹ ವಾಸ್ತು ಗಿಡಗಳ ಪಟ್ಟಿಗೆ ಸೇರಿದೆ ಇದರ ಔಷಧಿಯುಕ್ತ ಗುಣಗಳಿಂದಾಗಿ ಮಹತ್ವವನ್ನು ಪಡೆದಿದೆ.ಆರೋಗ್ಯಕ್ಕಾಗಿ ಲೋಳೆಸರವನ್ನು ಮನೆಯಲ್ಲಿ ಬೆಳೆಯುತ್ತಾರೆ.

4 )ಮನಿ ಪ್ಲಾಂಟ್ ಅಥವಾ ದುಡ್ಡಿನ ಗಿಡ-ಇದನ್ನು ದುಡ್ಡಿನ ಗಿಡ ಅಂತಾನೇ ಕರೆದರು ಇದು ಸಂಪತ್ತನ್ನು ಮಾತ್ರ ಹೆಚ್ಚಿಸುವುದಿಲ್ಲ.ಇದು ಗಾಳಿಯನ್ನು ಶುದ್ಧೀಕರಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ.ಇದನ್ನು ಟಿವಿ , ಕಂಪ್ಯೂಟರ್ ಗಳ ಹತ್ತಿರ ಇರಿಸುವುದರಿಂದ ಇವುಗಳಿಂದ ಹೊರ ಬರುವಂತ ರೇಡಿಯೇಷನ್ ಅಥವಾ ವಿಕಿರಣಗಳನ್ನು ಹೀರಿಕೊಳ್ಳುವಂತಹ ಶಕ್ತಿಯನ್ನು ಇದು ಹೊಂದಿದೆ.ಇದು ಮನೆಯಲ್ಲಿರುವ ಒತ್ತಡದ ಪರಿಸ್ಥಿತಿಯನ್ನು ಕಡಿಮೆ ಮಾಡಿ ನಿರ್ಮಲವಾದ ವಾತಾವರಣವನ್ನು ಸೃಷ್ಟಿ ಮಾಡುತ್ತದೆ.ಇದನ್ನು ಆಗ್ನೇಯ ದಿಕ್ಕಿನಲ್ಲಿರಿಸಬೇಕು.

5 )ರಬ್ಬರ್ ಪ್ಲ್ಯಾನ್ಟ್-ಇದು ಐಶ್ವರ್ಯ ವೃದ್ದಿ ಮಾಡುತ್ತದೆ ಹಾಗೂ ಅದೃಷ್ಟವನ್ನು ತಂದು ಕೊಡುತ್ತದೆ.ಇದು ವಾತಾವರಣದಲ್ಲಿರುವ ವಿಷಕಾರಿ ಅಂಶಗಳನ್ನು ಹೀರಿಕೊಂಡು ಗಾಳಿಯನ್ನು ಶುದ್ಧೀಕರಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ.

6 )ಲಿಲ್ಲಿ ಪ್ಲ್ಯಾನ್ಟ್ ಅಥವಾ ನೆಲ ನೈದಿಲೆ.-ಇದು ಸಹ ವಾಸ್ತು ಗಿಡಗಳಲ್ಲಿ ಒಂದಾಗಿದೆ.ಋಣಾತ್ಮಕ ಅಂಶಗಳನ್ನು ತೆಗೆದುಹಾಕಿ ನಿರ್ಮಲ ವಾತಾವರಣವನ್ನು ಸೃಷ್ಟಿ ಮಾಡುವಲ್ಲಿ ಇದು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ.ಇದರಲ್ಲಿ ಅನೇಕ ವೆರೈಟಿಗಳಿವೆ ಹಾಗೂ ಅನೇಕ ಕಲರ್ಸ್ ಕೂಡ ಸಿಗಲಿದೆ.

7 )ಪಿಯೊನಿ ಪ್ಲಾಂಟ್-ಪಿಯೊನಿ ಹೂವುಗಳು ನೋಡುವುದಕ್ಕೆ ತುಂಬಾ ಸುಂದರವಾಗಿರುತ್ತವೆ.ಇದು ಸಹ ಧನಾತ್ಮಕ ವಾತಾವರಣವನ್ನು ಸೃಷ್ಟಿ ಮಾಡಿ ಆಶಾವಾದಿ ಭಾವನೆಯನ್ನು ಬೆಳೆಸುತ್ತೆ.ಮನೆಯ ಘನತೆಯಲ್ಲಿ ಹೆಚ್ಚಿಸುತ್ತೆ ಜೊತೆಗೆ ಶುದ್ಧವಾದ ಪ್ರೀತಿಯನ್ನು ಸೃಷ್ಟಿ ಮಾಡುತ್ತದೆ.ಇದು ಬೇರ್ಪಟ್ಟ ಸಂಬಂಧಗಳನ್ನು ಕೂಡಿಸುತ್ತದೆ.ಇದನ್ನು ಸಾಮಾನ್ಯವಾಗಿ ನೈಋತ್ಯ ದಿಕ್ಕಿನಲ್ಲಿ ಇಟ್ಟರೆ ಶುಭ.

8 )ಆರ್ಕಿಡ್ಸ್-ಇದನ್ನು ಮನೆಯ ಶ್ರೇಯೋಭಿವೃದ್ಧಿಗಾಗಿ ಮನೆಯಲ್ಲಿ ಬೆಳೆಸುತ್ತಾರೆ. ಇದರಲ್ಲಿ ಅನೇಕ ಬಣ್ಣಗಳನ್ನು ನಾವು ಕಾಣಬಹುದು.ಅನೇಕ ವರೈಟಿಗಳು ಕೂಡ ಇದರಲ್ಲಿ ಸಿಗುತ್ತದೆ.ನೋಡೋದಿಕ್ಕೆ ಬಹಳ ಸುಂದರವಾಗಿರುತ್ತವೆ. ಇದನ್ನ ನೈಋತ್ಯ ದಿಕ್ಕಿನಲ್ಲಿ ಇಡಬೇಕು.

9 )ಲೋಟಸ್ ಅಥವಾ ಕಮಲ-ಇದು ಲಕ್ಷ್ಮಿದೇವಿಯನ್ನು ಸೂಚಿಸುತ್ತದೆ.ಇದು ಪವಿತ್ರವಾದ ಗಿಡ.ಇದು ಸುಖ ಶಾಂತಿ ಐಶ್ವರ್ಯದ ಸಂಕೇತವಾಗಿದೆ.

10 )ಮಲ್ಲಿಗೆ ಗಿಡ ಅಥವಾ ಜಾಸ್ಮಿನ್ ಪ್ಲ್ಯಾನ್ಟ್ಇದರ ಸುವಾಸನೆ ಮನೆಯ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ದೇಹದ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ ಹಾಗೂ ಮನೆಯಲ್ಲಿ ಸೌಹಾರ್ದಯುತ ವಾತಾವರಣವನ್ನು ಸೃಷ್ಟಿ ಮಾಡಲು ಸಹಾಯ ಮಾಡುತ್ತದೆ. ಇದನ್ನು ಪೂರ್ವ , ಉತ್ತರ ಅಥವಾ ಈಶಾನ್ಯದ ಬಾಗಿಲುಗಳ ಹತ್ರ ಅಥವಾ ದಕ್ಷಿಣಾಭಿಮುಖವಾಗಿ ಇರುವಂತ ಕಿಟಕಿ ಹತ್ತಿರ ಬೆಳೆಸಬೇಕು.ಹೀಗೆ ಇನ್ನು ಅನೇಕ ಗಿಡಗಳನ್ನು ವಾಸ್ತು ಗಿಡಗಳ ಪಟ್ಟಿಗೆ ಸೇರಿಸಿದ್ದಾರೆ.ಸಿಟ್ರಸ್ ಪ್ಲ್ಯಾಂಟ್ ಅಥವಾ ನಿಂಬೆ ಹಣ್ಣಿನ ಗಿಡ , ಸೇವಂತಿಗೆ ಗಿಡ , ತೆಂಗಿನ ಮರ ,ಪೈನ್ ಗಿಡ ಈ ಎಲ್ಲಾ ಗಿಡಗಳು ವಾಸ್ತು ದೋಷವನ್ನು ನಿವಾರಿಸುತ್ತದೆ.ಈಗ ವಾಸ್ತು ಪ್ರಕಾರ ಯಾವ್ಯಾವ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ತಿಳಿಯೋಣ ಬನ್ನಿ..

Kannada vastu tips ಮುಳ್ಳಿನ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಅಕೇಶಿಯಾ ಗಿಡ ,ಹುಣಸೆ ಹಣ್ಣಿನ ಮರ , ಆಲದ ಮರ, ಹತ್ತಿ ಗಿಡ ,ಹಾಗೂ ಹಾಲು ಗಿಡಗಳು ಅಥವಾ ಮರಗಳನ್ನು ಮನೆಯ ಹತ್ತಿರ ಬೆಳೆಸಬಾರದು.ಅದೇ ರೀತಿ ಬೋನ್ಸಾಯಿ ಗಿಡಗಳು ಅಥವಾ ಕುಬ್ಜ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago