Latest

ಯಾವ ರಾಶಿಯವರು ಮುತ್ತು ರತ್ನ ಧರಿಸಬೇಕು?

lucky stones for all rashi .gemstones for zodiac signs kannada ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ತಾನು ಜನಿಸಿದ ಸಮಯದಲ್ಲಿ ಇರುವ ಗ್ರಹಗಳ ಸ್ಥಾನ ಹಾಗೂ ಚಲನೆಗೆ ಅನುಗುಣವಾಗಿ ಭಿನ್ನವಾದ ಜನ್ಮ ನಕ್ಷತ್ರ ಹಾಗೂ ರಾಶಿ ಚಕ್ರವನ್ನು ಹೊಂದಿರುತ್ತಾನೆ. ಅವುಗಳಿಗೆ ಅನುಗುಣವಾಗಿ ಜನ್ಮ ಕುಂಡಲಿಯನ್ನು ರಚಿಸಲಾಗುವುದು. ಕುಂಡಲಿಯಲ್ಲಿ ಇರುವ ಗ್ರಹಗಳ ಸ್ಥಾನ ಹಾಗೂ ನಮ್ಮ ರಾಶಿಯನ್ನು ಆಳುವ ಗ್ರಹಗಳಿಗೆ ಸಂಬಂಧಿಸಿದಂತೆ ನಮ್ಮ ನಿತ್ಯದ ಬದುಕು ನಿರ್ಧಾರವಾಗುತ್ತದೆ. ಅದೃಷ್ಟಗಳು ಹಾಗೂ ದುರಾದೃಷ್ಟಗಳು ಸಹ ಅವುಗಳ ಪ್ರಭಾವದಿಂದಲೇ ಬದಲಾಗುವುದು ಎಂದು ಹೇಳಲಾಗುವುದು. ಹಾಗಾಗಿ ನಮ್ಮ ಮೇಲೆ ಪ್ರಭಾವ ಬೀರುವ ನವಗ್ರಹಗಳಿಗೆ ಸಂಬಂಧಿಸಿದ ಹರಳುಗಳನ್ನು ಧರಿಸಿದರೆ ಉತ್ತಮ ಫಲಗಳು ಹೆಚ್ಚು ಲಭಿಸುವುದು. ಕಷ್ಟಗಳು ಹಾಗೂ ಆಗಾಗ ಕಾಡುವ ಅಡೆ ತಡೆಗಳೆಲ್ಲವೂ ಕಡಿಮೆಯಾಗುವವು ಎಂದು ಹೇಳಲಾಗುತ್ತದೆ. ನಿಮ್ಮ ರಾಶಿಗಳಿಗೆ ಅನುಗುಣವಾಗಿ ಯಾವ ಹರಳನ್ನು ಧರಿಸಬೇಕು? ಅದರಿಂದ ಯಾವ ಉತ್ತಮ ಪ್ರಭಾವ ಬೀರುವುದು ಎನ್ನುವುದನ್ನು ತಿಳಿಯಲು ಮುಂದಿನ ವಿವರಣೆಯನ್ನು ಪರಿಶೀಲಿಸಿ. ಮಕ್ಕಳಿಗೆ ದೃಷ್ಟಿ ಯಾವಾಗ ತೆಗೆಯಬೇಕು?

ರತ್ನಗಳನ್ನು ಧರಿಸುವ ಮುನ್ನ:ಅದೃಷ್ಟದ ಹರಳನ್ನು ಧರಿಸುವ ಮೊದಲು ದೆಸೆಗಳು ಮತ್ತು ತ್ರಿಕೋನ ದೆಸೆಗಳನ್ನು ಪರಿಗಣಿಸಬೇಕಾಗುವುದು. ಮಹಾ ದೆಸೆಗಳು ಮತ್ತು ತ್ರಿಕೋನ ದೆಸೆ ನಡೆಯುವ ಸಂದರ್ಭದಲ್ಲಿ ಸೂಕ್ತ ಹರಳನ್ನು ಧರಿಸುವುದರಿಂದ ಅಧಿಕ ಲಾಭ ಉಂಟಾಗುವುದು ಎಂದು ಹೇಳಲಾಗುವುದು. ಕುಂಡಲಿಯಲ್ಲಿ ಲಗ್ನ ಸ್ಥಾನದಲ್ಲಿ ಇರುವ ಗ್ರಹ, ಪಂಚಮ ಮನೆಯಲ್ಲಿ ಇರುವ ಗ್ರಹ ಮತ್ತು ಒಂಬತ್ತನೇ ಮನೆಯಲ್ಲಿ ಇರುವ ಗ್ರಹಗಳ ರತ್ನವನ್ನು ಧರಿಸಬಹುದು ಎಂದು ಹೇಳಲಾಗುವುದು. ಅನುಕೂಲಕರವಾದ ಗ್ರಹವು ಮೊದಲಿಗಿಂತ ದುರ್ಬಲ ಫಲವನ್ನು ನೀಡುತ್ತಿದ್ದರೆ ಆ ಗ್ರಹಕ್ಕೆ ಸಂಬಂಧಿಸಿದ ಹರಳನ್ನು ಧರಿಸಬೇಕು. ಆಗ ಜೀವನದಲ್ಲಿ ಉಂಟಾಗುವ ಅನೇಕ ಅಡೆತಡೆಗಳನ್ನು ಸುಲಭವಾಗಿ ನಿವಾರಿಸಬಹುದು.

ಮೇಷ ರಾಶಿ:ಮೇಷ ರಾಶಿಯವರ ಅದೃಷ್ಟ ರತ್ನ ಅಥವಾ ಹರಳು ಎಂದರೆ ಹವಳ. ಹವಳವನ್ನು ಚಿನ್ನದ ಉಂಗುರದಲ್ಲಿ ಸೇರಿಸಿ, ಮಂಗಳವಾರದಂದು ಧರಿಸಬೇಕು. ಧರಿಸುವಾಗ ” ಓಂ ಭೌಮ್ ಭೌಮಾಯ” ಎನ್ನುವ ಮಂತ್ರವನ್ನು ಹೇಳುವುದರ ಮೂಲಕ ಧರಿಸಬೇಕು.ಪ್ರಯೋಜನಗಳು: ಈ ಹವಳವನ್ನು ಧರಿಸುವುದರಿಂದ ದೈಹಿಕವಾಗಿ ಉತ್ತಮ ಆರೋಗ್ಯ ಲಭಿಸುವುದು. ರಕ್ತವು ಶುದ್ಧೀಕರಿಸುತ್ತದೆ. ವವ್ಯಕ್ತಿಯಲ್ಲಿ ಧೈರ್ಯ ಮತ್ತು ಶಕ್ತಿಯು ಹೆಚ್ಚುವುದು. ಮಹಿಳೆಯರಿಗೆ ಸೂಕ್ತ ಸಮಯದಲ್ಲಿ ವಿವಾಹವಾಗಲು ಸಹಾಯ ಮಾಡುವುದು. ದುಷ್ಟ ಶಕ್ತಿ ಹಾಗೂ ನಕಾರಾತ್ಮಕ ಸೆಳೆತದಿಂದ ರಕ್ಷಣೆ ನೀಡುವುದು. ವೃಶ್ಚಿಕ ರಾಶಿಯವರು ಸಹ ಹವಳವನ್ನು ಧರಿಸಬಹುದು ಎಂದು ಹೇಳಲಾಗುವುದು.

ವೃಷಭ ರಾಶಿ:ವೃಷಭ ರಾಶಿಯವರಿಗೆ ಹೊಂದುವ ರತ್ನವೆಂದರೆ ವಜ್ರ ಮತ್ತು ನೀಲ ಮಣಿ. ಶುಕ್ಲ ಪಕ್ಷದ ಶುಕ್ರವಾರದಂದು ಈ ರತ್ನಗಳನ್ನು ಧರಿಸಬೇಕು. ಧರಿಸುವಾಗ ” ಓಂ ಶುಮ್ ಶುಕ್ರಾಯ ನಮಃ” ಎನ್ನುವ ಮಂತ್ರವನ್ನು ಜಪಿಸಬೇಕು.ಪ್ರಯೋಜನಗಳು: ವಜ್ರವನ್ನು ಧರಿಸುವುರಿಂದ ವ್ಯಕ್ತಿ ಆರೋಗ್ಯವಂತ, ಧೈರ್ಯಶಾಲಿ ಮತ್ತು ಬುದ್ಧಿವಂತ ವ್ಯಕ್ತಿಯಾಗುತ್ತಾನೆ. ಅಪ್ರಾಪ್ತ ವಯಸ್ಸಿನಲ್ಲಿಯೇ ವಿವಾಹವಾಗುವುದು ಹಾಗೂ ಬೆಂಕಿಯ ಅಪಾಯಗಳಿಂದ ರಕ್ಷಣೆ ನೀಡುವುದು. ಮಹಿಳೆಯರಲ್ಲಿ ಗರ್ಭಾಶಯದ ಸಮಸ್ಯೆ ಇದ್ದರೆ ಸುಧಾರಣೆ ಆಗುವುದು. ಪುರುಷರಲ್ಲಿ ಲೈಂಗಿಕ ಅಸ್ವಸ್ಥತೆಯನ್ನು ಸುಧಾರಿಸುವುದು. ಫಲವತ್ತತೆಯನ್ನು ಹೆಚ್ಚಿಸುವುದು. ಪುತ್ರ ಸಂತಾನ ಬಯಸುವ ಮಹಿಳೆಯರು ವಜ್ರವನ್ನು ಧರಿಸಬಾರದು. ಸಂತಾನ ಅಥವಾ ಸೂಕ್ತ ಸಂತಾನವನ್ನೇ ಬಯಸುವವರು ಆತ್ಮಾವಲೋಕನ ಮಾಡಿಕೊಂಡು ನಂತರ ಹರಳುಗಳನ್ನು ಧರಿಸಬೇಕು. ಲಗ್ನದಲ್ಲಿ ಯಾವ ಗ್ರಹ ಇದೆ ಎನ್ನುವುದನ್ನು ಪರಿಶೀಲಿಸಿ ಧರಿಸುವುದು ಉತ್ತಮ ಎಂದು ಹೇಳಲಾಗುವುದು.

ಮಿಥುನ ರಾಶಿ:ಮಿಥುನ ರಾಶಿಯವರಿಗೆ ಪನ್ನಾ ಅಥವಾ ಪಚ್ಚೆಯ ಹರಳು ಶುಭ ಹಾಗೂ ಅದೃಷ್ಟದ ಹರಳಾಗಿರುತ್ತದೆ. ಇದನ್ನು ಬುಧವಾರ “ಓಂ ಬುಂ ಬುಧಾಯ ನಮಃ” ಎನ್ನುವ ಮಂತ್ರವನ್ನು ಹೇಳಬೇಕು.ಪ್ರಯೋಜನಗಳು: ಪಚ್ಚೆ /ಪನ್ನಾ ಹರಳನ್ನು ಧರಿಸುವುದರಿಂದ ಬಡತನವು ನಿವಾರಣೆಯಾಗುವುದು. ಜೊತೆಗೆ ಮನಃಸ್ಸಿಗೆ ಶಾಂತಿಯನ್ನು ತಂದುಕೊಡುವುದು. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸನ್ನು ತಂದುಕೊಡುವುದು. ಗಂಟಲು, ಶೀತ, ಕೆಮ್ಮು ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಸಹ ನಿವಾರಿಸುವುದು. ಮಾನಸಿಕವಾಗಿ ಏಕಾಗ್ರತೆಯ ಶಕ್ತಿಯನ್ನು ಹೆಚ್ಚಿಸುವುದು. ಕೆಲಸದ ಒತ್ತಡ ಸೇರಿದಂತೆ ಅನೇಕ ಸಮಸ್ಯೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

ಕರ್ಕ ರಾಶಿ:ರ್ಕ ರಾಶಿಯವರಿಗೆ ಅನುಕೂಲವಾಗುವ ರತ್ನ ಎಂದರೆ ಮೋತಿ. ಮುತ್ತು/ಮೋತಿ ಇದನ್ನು ಸೋಮವಾರ ಬೆಳಿಗ್ಗೆ ಚಂದ್ರನ ಮಂತ್ರವಾದ ” ಓಂ ಸೋಂ ಸೋಮಾಯ ನಮಃ” ಎನ್ನುವ ಮಂತ್ರವನ್ನು ಹೇಳುವುದರ ಮೂಲಕ ಧರಿಸಬೇಕು.ಪ್ರಯೋಜನಗಳು: ಮುತ್ತನ್ನು ಧರಿಸುವುದರಿಂದ ಕರ್ಕ ರಾಶಿಯವರು ನೆನೆಪಿನ ಶಕ್ತಿ ಮತ್ತು ಜ್ಞಾನವು ಹೆಚ್ಚುವುದು. ಬುದ್ಧಿ ಶಕ್ತಿಯನ್ನು ಹೆಚ್ಚಿಸುವುದು. ಕೋಪ ಮತ್ತು ಮಾನಸಿಕ ಉದ್ವಿಘ್ನತೆಯನ್ನು ನಿಯಂತ್ರಿಸುತ್ತದೆ. ನಿದ್ರಾ ಹೀನತೆ, ಹಲ್ಲಿನ ತೊಂದರೆ, ಮೂತ್ರದ ಕಾಯಿಲೆ ಇರುವವರಿಗೂ ಉತ್ತಮ ಪರಿಹಾರ ದೊರೆಯುವುದು. ಪುರುಷರಿಗೆ ಸೂಕ್ತ ಸಮಯದಲ್ಲಿ ವಿವಾಹ ಆಗಲು ಸಹಾಯ ಆಗುವುದು. ಈ ರಾಶಿಯವರು ಹವಳವನ್ನು ಧರಿಸಿದರೂ ಸಾಕಷ್ಟು ಉತ್ತಮ ಫಲಗಳು ದೊರೆಯುವುದು. ಕರ್ಕ ರಾಶಿಯ ಆರೋಹಣದಲ್ಲಿ ಜನಿಸಿದವರಿಗೆ ರಾಜಯೋಗ ಸಹ ದೊರೆಯುವುದು. ಮಕ್ಕಳಿಗೆ ದೃಷ್ಟಿ ಯಾವಾಗ ತೆಗೆಯಬೇಕು?

ಸಿಂಹ ರಾಶಿ:ಸಿಂಹ ರಾಶಿಯವರಿಗೆ ಮಾಣಿಕ್ಯ (ರೂಬಿ) ಅನುಕೂಲಕರವಾದ ಹರಳು. ಇದನ್ನು ಬುಧವಾರ ಬೆಳಿಗ್ಗೆ ” ಓಂ ಗೃಣಿ ಸೂರ್ಯಾಯ ನಮಃ” ಎನ್ನುವ ಮಂತ್ರವನ್ನು ಹೇಳುವ ಮೂಲಕ ಧರಿಸಬೇಕು.ಪ್ರಯೋಜನಗಳು: ಮಾಣಿಕ್ಯ ಹರಳನ್ನು ಧರಿಸುವುದರಿಂದ ಧೈರ್ಯ, ಭಯ, ದುಃಖ ಮತ್ತು ಇತರ ಸಮಸ್ಯೆಗಳನ್ನು ನಿವಾಋಇಸಲು ಸಹಾಯ ಮಾಡುವುದು. ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನ ಮಾನ ಕಲ್ಪಿಸಿ ಕೊಡುವುದು. ಮೂಳೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಮತ್ತು ತಲೆ ನೋವಿನ ಸಮಸ್ಯೆಯನ್ನು ನಿವಾರಣೆ ಮಾಡುವುದು. ಸಿಂಹ ರಾಶಿಯ ಆರೋಹಣದಲ್ಲಿ ಜನಿಸಿದವರು ಹವಳವನ್ನು ಧರಿಸುವುದರಿಂದಲೂ ಅಪಾರ ಅದೃಷ್ಟವನ್ನು ಪಡೆಯಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು.

ಕನ್ಯಾ ರಾಶಿ:ಕನ್ಯಾ ರಾಶಿಯವರಿಗೆ ಅನುಕೂಲಕರವಾದ ಹರಳು ಪನ್ನಾ/ ಪಚ್ಚೆ. ಇದನ್ನು ಕನ್ಯಾ ರಾಶಿಯವರು ಬುಧವಾರ “ಓಂ ಬುಂ ಬುಧಾಯ ನಮಃ” ಎನ್ನುವ ಮಂತ್ರ ಹೇಳುವುದರ ಮೂಲಕ ಧರಿಸಬೇಕು.ಪ್ರಯೋಜನಗಳು: ಪಚ್ಚೆ ಹರಳನ್ನು ಧರಿಸುವುದರಿಂದ ಕನ್ಯಾ ರಾಶಿಯವರು ಬಡತನವನ್ನು ನಿವಾರಣೆ ಮಾಡಿಕೊಳ್ಳಬಹುದು. ಶಾಂತಿಯುತವಾದ ಹಾಗೂ ಯಶಸ್ಸಿನ ಜೀವನವನ್ನು ಹೊಂದಬಹುದು. ಕೆಮ್ಮು ಮತ್ತು ಗಂಟಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದರೆ ಬಹುಬೇಗ ನಿವಾರಣೆ ಮಾಡುವುದು. ಕೆಲಸದಲ್ಲಿ ತೊಂದರೆ ಮತ್ತು ಮಾನಸಿಕ ಚಿಂತೆಗಳು ಕಾಡುತ್ತಿದ್ದರೆ ಅದನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಈ ರಾಶಿಯವರು ಲಗ್ನೇಶನ ಸ್ಥಾನವನ್ನು ಪರಿಶೀಲಿಸಿ ವಜ್ರ ಮತ್ತು ನೀಲಿಮಣಿಯನ್ನು ಸಹ ಧರಿಸಬಹುದು.

​ತುಲಾ ರಾಶಿ:ತುಲಾ ರಾಶಿಯವರಿಗೆ ವಜ್ರ ಅದೃಷ್ಟದ ಹರಳು. ನೀಲ ಮಣಿಯು ರಾಜಯೋಗವನ್ನು ತಂದುಕೊಡುವುದು. ಶುಕ್ಲ ಪಕ್ಷದ ಶುಕ್ರವಾರದಂದು ವಜ್ರವನ್ನು ಧರಿಸಬೇಕು. ಧರಿಸುವಾಗ “ಓಂ ಶುಂ ಶುಕ್ರಾಯ ನಮಃ” ಎಂದು ಜಪಿಸಬೇಕು.ಪ್ರಯೋಜನಗಳು: ವಜ್ರ ಧರಿಸುವುದರಿಂದ ತುಲಾರಾಶಿಯವರು ಆರೋಗ್ಯದಲ್ಲಿ ಸುಧಾರಣೆ, ಧೈರ್ಯ ಹಾಗೂ ಬುದ್ಧಿವಂತಿಕೆಯನ್ನು ಪಡೆದುಕೊಳ್ಳುವರು. ಬೆಂಕಿಯಂತಹ ಅಪಾಯಗಳಿಂದ ರಕ್ಷಣೆ ನೀಡುವುದು. ವ್ಯಕ್ತಿಗೆ ಸೂಕ್ತ ವಯಸ್ಸಿನಲ್ಲಿ ವಿವಾಹವಾಗಲು ಸಹಾಯ ಮಾಡುವುದು. ಮಹಿಳೆಯರಲ್ಲಿ ಮತ್ತು ಪುರುಷರಲ್ಲಿ ಲೈಂಗಿಕ ಆರೋಗ್ಯವನ್ನು ಸುಧಾರಣೆ ಮಾಡುವುದು. ಬಯಸಿದ ಮಾನಸಿಕ ಸಂಕಲ್ಪಗಳು ನೆರವೇರುವುದು. ಸಂತಾನ ಹೊಂದಲು ಅಥವಾ ಪುತ್ರ ಸಂತಾನ ಪಡೆಯಲು ಬಯಸುವವರು ವಜ್ರವನ್ನು ಧರಿಸಬಾರದು.

​lucky stones for all rashi ವೃಶ್ಚಿಕ ರಾಶಿ:ವೃಶ್ಚಿಕ ರಾಶಿಯವರ ಅದೃಷ್ಟದ ಹರಳು ಹವಳ. ಶುಕ್ಲ ಪಕ್ಷದ ಮಂಗಳವಾರದಂದು ” ಓಂ ಬೌಂ ಭೌಮಾಯ ನಮಃ ” ಎನ್ನುವ ಮಂತ್ರವನ್ನು ಹೇಳುವ ಮೂಲಕ ಧರಿಸಬೇಕು.ಪ್ರಯೋಜನಗಳು: ಹವಳವನ್ನು ಧರಿಸುವುದರಿಂದ ಕಳೆದುಕೊಂಡ ಆಸೆ ಆಕಾಂಕ್ಷೆಗಳು ಪುನಃ ಜೀವ ಪಡೆದುಕೊಳ್ಳುವುದು. ಧೈರ್ಯ, ಶಕ್ತಿ ಹಾಗೂ ಬುದ್ಧಿಯು ಹೆಚ್ಚುವುದು. ಸೂಕ್ತ ವಯಸ್ಸಿನಲ್ಲಿಯೇ ಮಹಿಳೆಯರಿಗೆ ವಿವಾಹ ಆಗಲು ಸಹಾಯ ಮಾಡುವುದು. ರಕ್ತವನ್ನು ಶುದ್ಧೀಕರಿಸುವುದು ಹಾಗೂ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುವುದು. ಮಕ್ಕಳನ್ನು ದುಷ್ಟ ಶಕ್ತಿ ಮತ್ತು ಕೆಟ್ಟ ಚಟಗಳಿಂದ ರಕ್ಷಣೆ ನೀಡುವುದು.

​ಧನು ರಾಶಿ:ಧನು ರಾಶಿಯವರ ಅದೃಷ್ಟ ಹರಳು ಪುಖರಾಜ್(ಟೋಪಾಜ್). ಇದನ್ನು ಶುಕ್ಲ ಪಕ್ಷದ ಗುರುವಾರ ಬೆಳಿಗ್ಗೆ ” ಓಂ ಬ್ರಂ ಬ್ರಹಸ್ಪತೆಯೇ ನಮಃ” ಎನ್ನುವ ಮಂತ್ರವನ್ನು ಪಠಿಸುವುದರ ಮೂಲಕ ಧರಿಸಬೇಕು.ಪ್ರಯೋಜನಗಳು: ಪುಖರಾಜ ಹರಳನ್ನು ಧರಿಸುವುದರಿಂದ ವ್ಯಕ್ತಿಯಲ್ಲಿ ಬುದ್ಧಿ ಶಕ್ತಿ, ಜ್ಞಾನ, ಸಮೃದ್ಧಿ ಮತ್ತು ಗೌರವ ಲಭಿಸುವುದು. ಈ ಹರಳನ್ನು ಧರಿಸುವುದರಿಂದ ಗಂಡು ಸಂತಾನವನ್ನು ಪಡೆಯಬಹುದು. ಜೊತೆಗೆ ವ್ಯಕ್ತಿ ಯಾವುದೇ ಪಾಪ ಕರ್ಮಗಳನ್ನು ಮಾಡದಂತೆ ತಡೆಯುವುದು.

​ಮಕರ ರಾಶಿ:ಮಕರ ರಾಶಿಯವರ ಅದೃಷ್ಟ ಹರಳು ನೀಲಿ ಹರಳು. ಇದನ್ನು ಶನಿವಾರ ಬೆಳಿಗ್ಗೆ ” ಓಂ ಶಂ ಶನೈಶ್ಚರಾಯ ನಮಃ” ಎನ್ನುವ ಮಂತ್ರವನ್ನು ಪಠಿಸುವುದರ ಮೂಲಕ ಧರಿಸಬೇಕು.ಪ್ರಯೋಜನಗಳು: ನೀಲಿ ಮಣಿ ಧರಿಸುವುದರಿಂದ ಮಕರ ರಾಶಿಯವರಿಗೆ ಸಂಪತ್ತು, ಸಂತೋಷ ಹಾಗೂ ಸಕಾರಾತ್ಮಕ ಭಾವನೆಯು ದೊರೆಯುವುದು. ಗಾಳಿಯಿಂದ ಹರಡುವ ರೋಗ, ಪಾಶ್ರ್ವವಾಯು, ಸಂಧಿವಾತಗಳಂತಹ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಣದಲ್ಲಿ ಇಡುವುದು. ನೀಲಿ ಮಣಿ ಧರಿಸುವ ಮೊದಲು ಸೂಕ್ತ ಜ್ಯೋತಿಷ್ಯಿಯ ಸಲಹೆ ಪಡೆಯಲು ಮರೆಯದಿರಿ.

​ಕುಂಭ ರಾಶಿ:ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಕರ ಮತ್ತು ಕುಂಭ ರಾಶಿಯವರಿಗೆ ನೀಲಿ ಮಣಿಯೇ ಅದೃಷ್ಟದ ಮಣಿಯಾಗಿರುತ್ತದೆ. ಕುಂಭ ರಾಶಿಯವರು ಈ ಹರಳನ್ನು ಶನಿವಾರ ಬೆಳಿಗ್ಗೆ “ಓಂ ಶಂ ಶನೈಶ್ಚರಾಯ ನಮಃ” ಎನ್ನುವ ಮಂತ್ರವನ್ನು ಪಠಿಸುವುದರ ಮೂಲಕ ಧರಿಸಬೇಕು.ಪ್ರಯೋಜನಗಳು: ನೀಲ ಮಣಿ ಧರಿಸುವುದರಿಂದ ಸಂಪತ್ತು, ಸಂತೋಷ ಮತ್ತು ಖ್ಯಾತಿಯನ್ನು ಹೆಚ್ಚಿಸುವುದು. ಇದು ಮನಸ್ಸಿಗೆ ನಿರಾಳತೆಯನ್ನು ಕಲ್ಪಿಸಿಕೊಡುವುದು. ಸಂಧಿವಾತ, ಅಂಡವಾಯು ಮತ್ತು ಗಾಳಿಯಿಂದ ಹರಡುವಂತಹ ರೋಗಗಳಿಂದ ರಕ್ಷಣೆ ನೀಡುವುದು. ಜೀವನದಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳಲು ಸಹಾಯ ಮಾಡುವುದು. ಧರಿಸುವ ಮೊದಲು ತಜ್ಞರ ಸಲಹೆ ಪಡೆಯಿರಿ.

​lucky stones for all rashi ಮೀನ ರಾಶಿ:ಮೀನ ರಾಶಿಯವರ ಅದೃಷ್ಟದ ಹರಳು ಪುಖರಾಜ್. ಇದನ್ನು ಶುಕ್ಲ ಪಕ್ಷದ ಗುರುವಾರದಂದು ಬೆಳಿಗ್ಗೆ ” ಓಂ ಬ್ರಂ ಬ್ರಹಸ್ಪತಯೇ ನಮಃ ” ಎನ್ನುವ ಮಂತ್ರವನ್ನು ಜಪಿಸುವುದರ ಮೂಲಕ ಹರಳನ್ನು ಧರಿಸಬೇಕು.ಪ್ರಯೋಜನಗಳು: ಪುಖರಾಜ್ ಹರಳನ್ನು ಧರಿಸುವುದರಿಂದ ವ್ಯಕ್ತಿ ಶಕ್ತಿ, ಬುದ್ಧಿ, ಜ್ಞಾನ, ಸಮೃದ್ಧಿ ಮತ್ತು ಗೌರವವನ್ನು ಪಡೆದುಕೊಳ್ಳುವನು. ಪುಖರಾಜ್ ಹರಳನ್ನು ಧರಿಸುವುದರಿಂದ ಗಂಡು ಸಂತಾನವನ್ನು ಪಡೆದುಕೊಳ್ಳಬಹುದು. ಜೊತೆಗೆ ಸಾಕಷ್ಟು ಸಕಾರಾತ್ಮಕ ಸಂಗತಿಗಳು ಜೀವನದಲ್ಲಿ ಸಂಭವಿಸುತ್ತವೆ.

ನೆನಪಿನಲ್ಲಿ ಇಡಬೇಕಾದ ಸಂಗತಿಗಳು:ರತ್ನಗಳನ್ನು ಖರೀದಿಸುವಾಗ ಸೂಕ್ತ ತಪಾಸಣೆಯನ್ನು ನಡೆಸಿಯೇ ನೈಜವಾದ ಹರಳುಗಳನ್ನು ಪಡೆದುಕೊಳ್ಳಿ. ನಕಲಿ ಹರಳುಗಳನ್ನು ಧರಿಸುವುದರಿಂದ ಯಾವುದೇ ಪ್ರಯೋಜನ ದೊರೆಯದು. ಹರಳನ್ನು ಧರಿಸುವ ಮುನ್ನ ಖ್ಯಾತ ಜ್ಯೋತಿಷ್ಯರಲ್ಲಿ ಯಾವ ಬೆರಳಿಗೆ, ಯಾವ ದಿನ ಹಾಗೂ ಯಾವ ಸಮಯದಲ್ಲಿ ಧರಿಸುವುದು ಸೂಕ್ತ ಎನ್ನುವುದನ್ನು ಪರಿಶೀಲಿಸಿ ಧರಿಸುವುದನ್ನು ಮರೆಯಬಾರದು. ಮಕ್ಕಳಿಗೆ ದೃಷ್ಟಿ ಯಾವಾಗ ತೆಗೆಯಬೇಕು?

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago