ರಾಮ ತುಳಸಿ ಕೃಷ್ಣ ತುಳಸಿ ಯಾವುದು ಶ್ರೇಷ್ಠ

ತುಳಸಿ ಗಿಡದಿಂದ ಅನೇಕ ಫಲವನ್ನು ಪಡೆದುಕೊಳ್ಳಬಹುದು ಅಷ್ಟೇ ಅಲ್ಲದೆ ಆರೋಗ್ಯವನ್ನು ಸಹ ತುಳಸಿ ಗಿಡದಿಂದ ನಾವು ಪಡೆದುಕೊಳ್ಳಬಹುದು ತುಳಸಿ ಗಿಡಗಳಿಗೆ ಯಾವುದೇ ಕಾರಣಕ್ಕೂ ಬೆಲೆಕಟ್ಟವಳು ಆಗುವುದಿಲ್ಲ ಈ ಕಾರಣದಿಂದ ತುಳಸಿ ಗಿಡಕ್ಕೆ ಮನೆಯ ಅಂಗಳದಲ್ಲಿ ಮತ್ತು ಮನದ ಅಂಗಳದಲ್ಲಿ ವಿಶೇಷವಾದ ಸ್ಥಾನವಿದೆ ತುಳಸಿ ಗಿಡಗಳಲ್ಲಿ ಹಲವಾರು ಜಾತಿಯ ತುಳಸಿ ಗಿಡಗಳು ಇದೆ ಅದರಲ್ಲಿ ನಮಗೆ ಮುಖ್ಯವಾಗಿ ತಿಳಿದಿರುವುದು ಕೃಷ್ಣ ತುಳಸಿ ಮತ್ತು ರಾಮ ತುಳಸಿ.

ಇದು ಅತ್ಯಂತ ಮುಖ್ಯವಾದ ಗಿಡಗಳು ಹಾಗಿದೆ ಕೃಷ್ಣ ತುಳಸಿಯು ನೇರಳೆ ಬಣ್ಣ ಅಂದರೆ ಕಪ್ಪು ಬಣ್ಣದಲ್ಲಿ ಇರುತ್ತದೆ ರಾಮ ತುಳಸಿಯು ಅಚ್ಚ ಹಸಿರಿನಿಂದ ಕೂಡಿರುತ್ತದೆ ಕೃಷ್ಣ ತುಳಸಿ ಗಿಡದ ಎಲೆಗಳ ಪರಿಮಳವು ತುಂಬಾ ಹೆಚ್ಚಾಗಿ ಇರುತ್ತದೆ ರಾಮ ತುಳಸಿ ಈ ಗಿಡದ ಎಲೆಯ ಪರಿಮಳವು ಅಷ್ಟೊಂದು ಪರಿಮಳ ಬೀರುವುದಿಲ್ಲ ಕೃಷ್ಣ ತುಳಸಿ ಎಲೆಗಳನ್ನು ನಾವು ತಿಂದಾಗ ಸ್ವಲ್ಪ ಒಗರು ಮತ್ತು ಕಾರ ಕಾರ ಅನಿಸುತ್ತದೆ ರಾಮ ತುಳಸಿ ಎಲೆಗಳಲ್ಲಿ ಅಷ್ಟೊಂದು ಕಾರದ ಅಂಶ ಇರುವುದಿಲ್ಲ.

ಕೃಷ್ಣ ತುಳಸಿ ಮತ್ತು ಗ್ರಾಮ ತುಳಸಿ ಗಿಡಗಳಲ್ಲಿ ತದ್ವಿರುದ್ಧ ಆದ ಆಯುರ್ವೇದಿಕ್ ಅಂಶಗಳು ಇದೆ ರಾಮ ತುಳಸಿಯು ತಂಪಿನ ಗುಣವನ್ನು ಹೊಂದಿದೆ ಕೃಷ್ಣ ತುಳಸಿಗಿಂತ ರಾಮ ತುಳಸಿಯು ಹೆಚ್ಚಿನ ತಂಪ್ಪನ್ನು ನೀಡುತ್ತದೆ ಬೇಸಿಗೆಕಾಲದಲ್ಲಿ ರಾಮ ತುಳಸಿ ಎಲೆಗಳು ತುಂಬಾ ಒಳ್ಳೆಯದು ಕೃಷ್ಣ ತುಳಸಿಯ ಸ್ವಲ್ಪ ಉಷ್ಣದ ಗುಣಗಳನ್ನು ಹೊಂದಿದೆ.

ಇದನ್ನು ನಾವು ಮಳೆಗಾಲದಲ್ಲಿ ಕಫ ಕೆಮ್ಮು ಜ್ವರ ಮುಂತಾದ ಸಮಸ್ಯೆಗಳಿಗೆ ಔಷಧಿಯಾಗಿ ಬಳಸುತ್ತೇವೆ ಎರಡು ತುಳಸಿ ಗಿಡಗಳಲ್ಲಿಯೂ ಆಂಟಿ ಬ್ಯಾಕ್ಟೀರಿಯಾ ಮತ್ತು ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿ ಇದೆ ಇದು ಕಾಯಿಲೆಗಳಿಗೆ ರಾಮಬಾಣವಾಗಿ ಕಾರ್ಯವನ್ನು ನಿರ್ವಹಿಸುತ್ತದೆ ಸೊಳ್ಳೆಗಳ ಕಾಟವನ್ನು ತುಳಸಿ ಗಿಡ ನೆಡುವುದರಿಂದ ತಪ್ಪಿಸಿಕೊಳ್ಳಬಹುದು ಮತ್ತು ಯಾವುದೇ ಕ್ರಿಮಿಕೀಟಗಳ ಕಾಟವು ಸಹ ಇರುವುದಿಲ್ಲ

Leave a Comment