Categories: Latest

ಮೊಟ್ಟೆ ಸಕ್ಕರೆ ಕಾಯಿಲೆ ಇದ್ದವರು ತಿನ್ನಲ್ವಾ ಮಿಸ್ ಮಾಡದೇ ಈ ಮಾಹಿತಿ ನೋಡಿ!

ಮೊಟ್ಟೆ ಎಂದರೆ ಅತಿ ಅಗ್ಗದ, ಸುಲಭವಾಗಿ ಸಿಗುವ, ಸುಲಭವಾಗಿ ತಯಾರಿಸಲು ಸಾಧ್ಯವಿರುವ ಆಹಾರವಾಗಿದ್ದು ಹಲವಾರು ಖಾದ್ಯಗಳ ರೂಪದಲ್ಲಿ ಇವನ್ನು ಸೇವಿಸಬಹುದು. ಬೇಯಿಸಿ, ಆಮ್ಲೆಟ್ ಮಾಡಿ, ಹಾಫ್ ಫ್ರೈ ಅಥವಾ ಬೇರೆ ಆಹಾರ ಸಾಮಾಗ್ರಿಗಳ ಜೊತೆಗೆ ವಿವಿಧ ಖಾದ್ಯಗಳ ರೂಪದಲ್ಲಿಯೂ ಸೇವಿಸಬಹುದು. ಇವುಗಳಲ್ಲಿ ಅದ್ಭುತ ಪ್ರಮಾಣದ ಪ್ರೊಟೀನ್ ಹಾಗೂ ಇತರ ಪೋಷಕಾಂಶಗಳಿವೆ ಹಾಗೂ ಇದರ ಸೇವನೆ ಹೆಚ್ಚು ಹೊತ್ತಿನವರೆಗೆ ಹೊಟ್ಟೆ ತುಂಬಿರುವ ಅನುಭವ ನೀಡುತ್ತದೆ.

ಮೊಟ್ಟೆ ತಯಾರಿಸಲು ಹೆಚ್ಚಿನ ನೈಪುಣ್ಯವೇನೂ ಅಗತ್ಯವಿಲ್ಲ. ಆದರೆ ಮೊಟ್ಟೆಗಳನ್ನು ಸೇವಿಸಿದಷ್ಟೂ ಮಧುಮೇಹ ಆವರಿಸುವ ಸಾಧ್ಯತೆಯೂ ಹೆಚ್ಚುತ್ತದೆ ಎಂದು ಇದುವರೆಗೂ ನಮಗೆ ಗೊತ್ತಿರಲಿಲ್ಲ. ಆದರೆ ಬ್ರಿಟಿಷ್ ಪೌಷ್ಟಕಾಂಶ ಮಾಧ್ಯಮದಲ್ಲಿ ಪ್ರಕಟವಾದ ಇತ್ತಿಚಿನ ವರದಿ ಮಾತ್ರ ಈ ವಿಷಯವನ್ನು ಸ್ಪಷ್ಟಪಡಿಸುತ್ತದೆ.

ಅಲ್ಲದೇ ಚೀನಾ ವೈದ್ಯಕಿಯ ವಿಶ್ವವಿದ್ಯಾಲಯ ಮತ್ತು ಕತರ್ ವಿಶ್ವವಿದ್ಯಾಲಯಗಳಲ್ಲಿಯೂ ನಡೆಸಲಾದ ಅಧ್ಯಯನಗಳ ಪ್ರಕಾರ ದಿನಕ್ಕೆ ಒಂದು ಅಥವಾ ಇದಕ್ಕೂ ಹೆಚ್ಚಿನ ಪ್ರಮಾಣದ ಮೊಟ್ಟೆಯನ್ನು ಸೇವಿಸಿದವರವಲ್ಲಿ ಮಧುಮೇಹ ಆವರಿಸುವ ಸಾಧ್ಯತೆ 60 ಶೇಖಡಾದಷ್ಟು ಹೆಚ್ಚಿರುತ್ತದೆ.

ದಿನಕ್ಕೆ 38 ಗ್ರಾಂ ನಷ್ಟು ಸರಾಸರಿಯ ಪ್ರಮಾಣದ ಮೊಟ್ಟೆಯ ಸೇವನೆಯು ಮಧುಮೇಹ ಎದುರಾಗುವ ಅಪಾಯದ ಸಾಧ್ಯತೆಯನ್ನು ಸುಮಾರು 25 ಪ್ರತಿಶತದಷ್ಟು ಹೆಚ್ಚಿಸಿದೆ ಮತ್ತು ದಿನಕ್ಕೆ 50 ಗ್ರಾಂ ಸರಾಸರಿಯ ಪ್ರಮಾಣದ ಮೊಟ್ಟೆಯ ಸೇವನೆಯು ಮಧುಮೇಹ ಅದುರಾಗುವ ಅಪಾಯದ ಸಾಧ್ಯತೆಯನ್ನು 60 ಪ್ರತಿಶತದಷ್ಟು ಹೆಚ್ಚಿಸಿದೆ ಎಂದು ಕಂಡುಬಂದಿದೆ. ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಸಾರ್ವಜನಿಕ ಆರೋಗ್ಯ ತಜ್ಞ ಮಿಂಗ್ ಲೀ ರವರು ಈ ಬಗ್ಗೆ ಮಾತನಾಡುತ್ತಾ, ಮಧುಮೇಹದ ಏರಿಕೆ ಹೆಚ್ಚುತ್ತಿರುವ ಆತಂಕವಾಗಿದೆ ಎಂದು ವಿವರಿಸುತ್ತಾರೆ.

“ಟೈಪ್ 2 ಮಧುಮೇಹ ಎದುರಾಗಲು ಕಾರಣವಾಗುವ ಆಹಾರಗಳು ನಮಗೆ ತಿಳಿದಿರುವ ಮತ್ತು ಮಾರ್ಪಡಿಸಬಹುದಾದ ಅಂಶವಾಗಿದೆ, ಆದ್ದರಿಂದ ರೋಗದ ಹೆಚ್ಚುತ್ತಿರುವ ಹರಡುವಿಕೆಯ ಮೇಲೆ ಪರಿಣಾಮ ಬೀರಬಹುದಾದ ಆಹಾರದ ಅಂಶಗಳ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ” ಎಂದು ಅವರು ವಿವರಿಸುತ್ತಾರೆ.

“ಇದೇ ಸಮಯದಲ್ಲಿ, ಮೊಟ್ಟೆಯ ಸೇವನೆಯೂ ಸ್ಥಿರವಾಗಿ ಹೆಚ್ಚುತ್ತಿದೆ; 1991 ರಿಂದ 2009 ರವರೆಗೆ, ಚೀನಾದಲ್ಲಿ ಮೊಟ್ಟೆ ತಿನ್ನುವ ಜನರ ಸಂಖ್ಯೆ ದ್ವಿಗುಣಗೊಂಡಿದೆ ”ಎಂದು ಅವರು ಪ್ರಕಟಗೊಂಡ ವರದಿಯಲ್ಲಿ ತಿಳಿಸಿದ್ದಾರೆ.ಅತಿಯಾದರೆ ಅಮೃತವೂ ವಿಷ ಎಂಬ ಮಾತು ಮೊಟ್ಟೆಗಳ ಮಟ್ಟಿಗೂ ಸಲ್ಲುತ್ತದೆ. ಅಂತಹ ಸಮಸ್ಯೆಗಳನ್ನು ದೂರವಿರಿಸಲು ಆರೋಗ್ಯಕರ ಆಹಾರ ಪದ್ಧತಿ ಮತ್ತು ವ್ಯಾಯಾಮವನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ನೀವು ದಿನಕ್ಕೆ ಒಂದು ಮೊಟ್ಟೆಯನ್ನು ಸೇವಿಸಬಹುದು. ಆದರೆ ನಿಮ್ಮ ಆಹಾರ ತಜ್ಞರನ್ನು ಸಂಪರ್ಕಿಸಿ ಈ ಪ್ರಮಾಣ ನಿಮ್ಮ ಆರೋಗ್ಯಕ್ಕೆ ಸೂಕ್ತ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆದರೆ ನಿತ್ಯವೂ ತಿನ್ನದೇ ನಡು ನಡುವೆ ಅಥವಾ ದಿನ ಬಿಟ್ಟು ದಿನ ಒಂದು ಮೊಟ್ಟೆಯನ್ನು ಉಪಹಾರದ ಸಮಯದಲ್ಲಿ ಸೇವಿಸಿ. ಅದು ನಿಮ್ಮ ದೈನಂದಿನ ಮೊಟ್ಟೆಯ ಸೇವನೆಯ ಮೂಲಕ ಎದುರಾಗುವ ಆರೋಗ್ಯ ಮಾಹಿತಿಗಳ ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ.

ನೀವು ಈಗಾಗಲೇ ಕೊಲೆಸ್ಟ್ರಾಲ್, ರಕ್ತದೊತ್ತಡ, ಮಧುಮೇಹ ಅಥವಾ ಅಂತಹ ಇತರ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರೆ ನಿಮ್ಮ ಪೌಷ್ಟಿಕತಜ್ಞರಿಂದ ತಯಾರಿಸಿದ ಡಯಟ್ ಚಾರ್ಟ್ ಅಥವಾ ಆಹಾರಕ್ರಮದ ಪಟ್ಟಿಯನ್ನು ಅನ್ನು ಯಾವಾಗಲೂ ಪಡೆಯುವುದು ಉತ್ತಮ. ವಿಶೇಷವಾಗಿ ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸುತ್ತಿರಬೇಕು ಹಾಗೂ ವೈದ್ಯರಲ್ಲಿ ತೋರಿಸಿ ಸೂಕ್ತ ಬದಲಾವಣೆಗಳನ್ನು ಅನ್ವಯಿಸಿಕೊಂಡು ಆರೋಗ್ಯಕರ ಜೀವನ ಮುಂದುವರೆಸಬಹುದು.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago