ಮೇ 1 ರಿಂದ 4 ಹೊಸ ರೂಲ್ಸ್ ಗಳು ಸಾರ್ವಜನಿಕರಿಗೆ ಬಂಪರ್ ಬದಲಾವಣೆಗಳು

ಮೇ 1 ರಿಂದ 4 ಹೊಸ ರೂಲ್ಸ್: ಯಾವೆಲ್ಲ ಬದಲಾವಣೆಗಳು ಆಗಿದೆ ತಿಳಿದಿದೆಯೇ

4 new rules from May 1 :ಮೇ 1 ರಿಂದ ದೇಶದಲ್ಲಿ ಅನೇಕ ಬದಲಾವಣೆಗಳು ಆಗಲಿವೆ. ಈ ಬದಲಾವಣೆಗಳು ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಖಾಸಗಿ ಬ್ಯಾಂಕ್ ಗಳ ಕೆಲವು ನಿಯಮಗಳಲ್ಲಿಯೂ ಬದಲಾವಣೆಗಳಾಗಲಿವೆ. ಇದರೊಂದಿಗೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿಯೂ ಬದಲಾವಣೆಯಾಗಲಿದೆ. ಹೀಗಾಗಿ ಸಾರ್ವಜನಿಕರಿಗೆ ಹೆಚ್ಚು ಎಫೆಕ್ಟ್ ಆಗುತ್ತೆ ಎನ್ನಬಹುದು. ಮೇ 1 ರಿಂದ ಯಾವುದೆಲ್ಲಾ ನಿಯಮದಲ್ಲಿ ಬದಲಾವಣೆಯಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

ಮೇ 1 ರಿಂದ 4 ಹೊಸ ರೂಲ್ಸ್

1.ಬ್ಯಾಂಕ್ ನಿಯಮಗಳಲ್ಲಿ ಬದಲಾವಣೆ:ವಿವಿಧ ಬ್ಯಾಂಕುಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಮೇ 1ರಿಂದ ಬದಲಾವಣೆಯಾಗಲಿದೆ. ಯೆಸ್ ಬ್ಯಾಂಕ್ (yes bank) ವೆಬ್ ಸೈಟ್ ಪ್ರಕಾರ ಉಳಿತಾಯ ಖಾತೆಗಳ ವಿವಿಧ ರೂಪಾಂತರಗಳ ಕನಿಷ್ಠ ಸರಾಸರಿ ಬ್ಯಾಲೆನ್ಸ್ ನಲ್ಲಿ ಬದಲಾವಣೆ ಮಾಡಲಾಗಿದೆ. ಅಕೌಂಟ್ ಪ್ರೊ ಮ್ಯಾಕ್ಸ್ ಅಲ್ಲಿ ಕನಿಷ್ಠ ಸರಾಸರಿ ಬ್ಯಾಲೆನ್ಸ್ 50 ಸಾವಿರ ರೂ. ಇನ್ನು ಗರಿಷ್ಠ ಶುಲ್ಕಕ್ಕೆ ಒಂದು ಸಾವಿರ ರೂ. ಮಿತಿ ನಿಗದಿಪಡಿಸಲಾಗಿದೆ. ಪ್ರೊ ಪ್ಲಸ್, ಯೆಸ್ ಎಸೆನ್ಸ್ ಎಸ್ ಎ, ಎಸ್ ರೆಸ್ಪೆಕ್ಟ್ ಎಸ್ ಎ ಖಾತೆಗಳಲ್ಲಿ ಗರಿಷ್ಠ ಶುಲ್ಕವನ್ನು 25 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಇನ್ನು ಪ್ರೊ ಮ್ಯಾಕ್ಸ್ ಖಾತೆಯಲ್ಲಿ ಸರಾಸರಿ ಕನಿಷ್ಠ ಬ್ಯಾಲೆನ್ಸ್ 50 ಸಾವಿರ ರೂ.

ಮೇ 1 ರಿಂದ 4 ಹೊಸ ರೂಲ್ಸ್ ಗಳು
ಮೇ 1 ರಿಂದ 4 ಹೊಸ ರೂಲ್ಸ್ ಗಳು 4 new rules from May 1

2.ವಾರ್ಷಿಕ ಶುಲ್ಕದಲ್ಲಿ ಪರಿಷ್ಕರಣೆ:ಐಸಿಐಸಿಐ ಬ್ಯಾಂಕ್ ಉಳಿತಾಯ ಖಾತೆಗೆ ಸಂಬಂಧಿಸಿದ ಸೇವಾ ಶುಲ್ಕದಲ್ಲಿ ಬದಲಾವಣೆ ಮಾಡಲಾಗಿದೆ. ವಾರ್ಷಿಕ ಡೆಬಿಟ್ ಕಾರ್ಡ್ ಶುಲ್ಕವನ್ನು ನಗರ ಪ್ರದೇಶಗಳಲ್ಲಿ 200ರೂ.ಗೆ ಪರಿಷ್ಕರಿಸಲಾಗಿದೆ. ಹಾಗೆಯೇ ಗ್ರಾಮೀಣ ಭಾಗಗಳಲ್ಲಿ ಈ ಶುಲ್ಕ 99ರೂ. ಇದರ ಹೊರತಾಗಿ ಗ್ರಾಹಕರು 25ಕ್ಕೂ ಹೆಚ್ಚು ಲೀವ್ಸ್ ಹೊಂದಿರುವ ಚೆಕ್ ಬುಕ್ ತೆಗೆದುಕೊಳ್ಳಲು ಕೂಡ ಶುಲ್ಕ ಪಾವತಿಸಬೇಕಾಗುತ್ತದೆ. ಐಎಂಪಿಎಸ್ ವಹಿವಾಟಿನ ಮೊತ್ತವನ್ನು ಪ್ರತಿ ವಹಿವಾಟಿಗೆ 2.50ರೂ.ನಿಂದ 15ರೂ.ಗೆ ನಿಗದಿಪಡಿಸಲಾಗಿದೆ.

3.ಹಿರಿಯ ನಾಗರಿಕರಿಗೆ ವಿಶೇಷ fd ಗಳಲ್ಲಿ ಹೂಡಿಕೆ:hdfc ಬ್ಯಾಂಕ್ ಹಿರಿಯ ನಾಗರಿಕರ ವಿಶೇಷ ಸ್ಥಿರ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಇದು ವಿಶೇಷ ಹಿರಿಯ ನಾಗರಿಕರ fd ಯೋಜನೆಯಾಗಿದ್ದು, ಹೆಚ್ಚಿನ ಬಡ್ಡಿದರ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯನ್ನು 2020ರ ಮೇನಲ್ಲಿ ಪ್ರಾರಂಭಿಸಲಾಯಿತು. ಇನ್ನು ಈ ಯೋಜನೆಯಲ್ಲಿ ಹೂಡಿಕೆಯ ಕೊನೆಯ ದಿನಾಂಕವನ್ನು 2024ರ ಮೇ 10ರ ತನಕ ವಿಸ್ತರಿಸಲಾಗಿದೆ.

4.lpg ಗ್ಯಾಸ್ ಸಿಲಿಂಡರ್ ಬೆಲೆ:(may 01)-lpg ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಪ್ರತಿ ತಿಂಗಳ ಮೊದಲ ದಿನ ಬದಲಾವಣೆ ಮಾಡಲಾಗುತ್ತದೆ. ಗ್ಯಾಸ್ ಸಿಲಿಂಡರ್ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು ನಿಗದಿಪಡಿಸುತ್ತವೆ. 14 ಕೆಜಿ ಗೃಹ ಬಳಕೆ ಹಾಗೂ 19 ಕೆಜಿ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಗಳ ದರವನ್ನು ತೈಲ ಮಾರುಕಟ್ಟೆ ಕಂಪನಿಗಳು ನಿಗದಿಪಡಿಸುತ್ತವೆ. 2024ರ ಮಾರ್ಚ್ ತಿಂಗಳಲ್ಲಿ ಚುನಾವಣಾ ದಿನಾಂಕ ಘೋಷಿಸುವ ಕೆಲವು ದಿನಗಳ ಮುನ್ನ ಕೇಂದ್ರ ಸರ್ಕಾರ lpg ಸಿಲಿಂಡರ್ ಬೆಲೆಯನ್ನು 100ರೂ. ಕಡಿತಗೊಳಿಸಿತ್ತು.

5.ಕ್ರೆಡಿಟ್ ಕಾರ್ಡ್ ಶುಲ್ಕ:idfc ಹಾಗೂ ಯೆಸ್ ಬ್ಯಾಂಕ್ (yes bank) ದಿನಬಳಕೆ ಬಿಲ್ ಪಾವತಿಗಳಿಗೆ ಶೇ.1ರಷ್ಟು ಜಿಎಸ್ ಟಿ (gst) ವಿಧಿಸುತ್ತದೆ. ಅದೇ ಯೆಸ್ ಬ್ಯಾಂಕ್ ಗ್ರಾಹಕರಿಗೆ ಈ ಮಿತಿ 15,000ರೂ. ಒಂದೇ ಬಿಲ್ಲಿಂಗ್ ಸೈಕಲ್ ನಲ್ಲಿ ಐಡಿಎಫ್ ಸಿ ಇದನ್ನು 20,000ರೂ.ಗೆ ಹೆಚ್ಚಿಸಿದೆ. ಹೊಸ ಶುಲ್ಕಗಳು ಮೇ 1ರಿಂದ ಜಾರಿಗೆ ಬರಲಿವೆ. 4 new rules from May 1

Read More

Gruha Lakshmi New Update :ಮೇ 1 ರಿಂದ ಬದಲಾಗಲಿದೆ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ನಿಯಮಗಳು!

Karnataka Weather Alert:ಮುಂದಿನ 48 ಗಂಟೆ ಒಳಗಾಗಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳಲಿದೆ!

Gold Rate today:ದಿಡೀರನೆ ಪಾತಾಳಕ್ಕೆ ಕುಸಿದ ಚಿನ್ನ ದ ಬೆಲೆ ಆಭರಣದ ಪ್ರಿಯರಿಗೆ ಗುಡ್ ನ್ಯೂಸ್

Karnataka Raitha Siri Scheme : 2 ಎಕರೆಗಿಂತ ಕಡಿಮೆ ಜಮೀನು ಇದ್ದವರಿಗೆ ಸಣ್ಣ ರೈತರಿಗೆ ಗುಡ್ ನ್ಯೂಸ್

Leave a Comment