ಇನ್ನು ಹಲ್ಲಿಗಳು ಒಂದು ನಿಮ್ಮ ಮನೆಯಲ್ಲಿ ಇರೋದಿಲ್ಲ! ಹಲ್ಲಿಗಳ ಓಡಾಟ ಇನ್ನು ಬಂದ್!

ಮಕ್ಕಳು ತುಂಬಿರುವ ಮನೆಯಲ್ಲಿ ಎಲ್ಲಿ ಬೇಕಾದರಲ್ಲಿ ಹಲ್ಲಿಗಳು, ಜಿರಳೆಗಳು ಓಡಾಡುತ್ತಿರುತ್ತವೆ. ಅವುಗಳಿಂದ ಆರೋಗ್ಯದ ಮೇಲೆ ಒಂದಲ್ಲ ಒಂದು ರೀತಿಯಾಗಿ ಇದರಿಂದ ಕೆಟ್ಟ ಪರಿಣಾಮಗಳು ಬೀರುತ್ತವೆ. ಈ ಹಲ್ಲಿಗಳು ಮನೆಯಲ್ಲಿ ನಾರ್ಮಲ್ ಆಗಿ ಕೇಳಿಸಿಕೊಳ್ಳುವಂತಹ ಇರುವೆ ಸೊಳ್ಳೆಗಳಂತೆ ಚಿಕ್ಕ ಪ್ರಾಣಿಯಲ್ಲ. ಇದು ಸ್ವಲ್ಪ ದೊಡ್ಡದಾಗಿರುತ್ತದೆ. ಹಾಗಾಗಿ ಇದನ್ನು ಸಾಯಿಸುವುದು ತುಂಬಾ ಕಷ್ಟ. ಮನೆಯಲ್ಲಿ ಒಂದು ಚಿಕ್ಕ ಹಲ್ಲಿ ಕಂಡರೂ ಸಾಕು ಮೈಯೆಲ್ಲಾ ಜುಮ್ ಎನ್ನುತ್ತದೆ. ಈ ಹಲ್ಲಿ ಯಾವಾಗ ಮನೆಯಿಂದ ಹೊರಗಡೆ ಹೋಗುತ್ತ ಅಂತ ಕಾಯುತ್ತಿರುತ್ತೇವೆ.

ಈ ಹಲ್ಲಿಗಳು ಮನೆಯಲ್ಲಿ ಇದ್ದರೆ ಕಿಟಕಿ ಬಾಗಿಲುಗಳನ್ನು ತೆಗೆಯಲು ಕೂಡ ಹೆದರಿಕೆ ಆಗುತ್ತದೆ.ಯಾಕೆಂದರೆ ಕಿಟಕಿ ಬಾಗಿಲು ಹತ್ತಿರ ಹಲ್ಲಿಗಳು ಹೆಚ್ಚಾಗಿರುತ್ತವೆ. ಈ ಹಲ್ಲಿಗಳನ್ನು ನ್ಯಾಚುರಲ್ ಆಗಿ ಮನೆಯಿಂದ ಹೊರಗಡೆ ಓಡಿಸಬಹುದು.

ಮೊದಲು ಒಂದು ಈರುಳ್ಳಿಯನ್ನು ಚಿಕ್ಕದಾಗಿ ಕಟ್ ಮಾಡಿಕೊಳ್ಳಿ,10 ಕಾಳು ಮೆಣಸು,10 ಲವಂಗ. ಈ ಮೂರು ಪದಾರ್ಥಗಳನ್ನು ಬೆರೆಸಿ ಮಾಡುವ ಔಷಧಿ ಹಲ್ಲಿಗಳನ್ನು ಉಸಿರುಗಟ್ಟುವಂತೆ ಮಾಡುತ್ತದೆ.ಈ ಮೂರು ಪದಾರ್ಥವನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ನಂತರ ರುಬ್ಬಿದ ಮಿಶ್ರಣವನ್ನು ಶೋದಿಸಿ ಮತ್ತು 3 ಕ್ಯಾಪ್ ಡೇಟಲ್ ಹಾಕಿ ಸ್ವಲ್ಪ ನೀರು ಹಾಕಿ.ನಂತರ ಸ್ಪ್ರೇ ಬಾಟಲ್ ನಲ್ಲಿ ಈ ಲಿಕ್ವಿಡ್ ಅನ್ನು ಹಾಕಿಕೊಳ್ಳಿ.ನಂತರ ಯಾವ ಜಾಗದಲ್ಲಿ ಹಲ್ಲಿ ಜಾಸ್ತಿ ಇರುತ್ತದೆಯೋ ಅಲ್ಲಿ ಸ್ಪ್ರೇ ಮಾಡಿ. ಈ ರೀತಿ ಮಾಡುವುದರಿಂದ ಹಲ್ಲಿಗಳು ಮನೆ ಹತ್ತಿರ ಕೂಡ ಸುಳಿಯೂದಿಲ್ಲ.

ಇನ್ನು ಮನೆಯಲ್ಲಿ ಜಿರಳೆ ಬರಬಾರದು ನೆಲ ಶುಚಿಯಾಗಿ ಇರಬೇಕು ಎಂದರೆ ನೆಲ ವರೆಸುವಾಗ ತಣ್ಣನೆಯ ನೀರನ್ನು ಬಳಕೆ ಮಾಡಬೇಡಿ. ಬಿಸಿ ನೀರನ್ನು ಬಳಕೆ ಮಾಡಿ ಮತ್ತು ಬಿಸಿ ನೀರಿಗೆ ಎರಡು ಹನಿ ನೀಲಗಿರಿ ಎಣ್ಣೆ ಅಥವಾ ಬೇವಿನ ಎಣ್ಣೆ ಹಾಕಿ ಮಿಶ್ರಣ ಮಾಡಿ ನೆಲವನ್ನು ವರೆಸಿ.ಈ ರೀತಿ ಮಾಡಿದರೆ ಯಾವುದೇ ಕಾರಣಕ್ಕೂ ಸಿಹಿ ಬಿದ್ದರು ಇರುವೆ ಗೊದ್ದ ಬರುವುದಿಲ್ಲ.ಇದರಿಂದ ಯಾವುದೇ ರೀತಿಯ ದುಷ್ಟ ಪರಿಣಾಮ ಇರುವುದಿಲ್ಲ.

Leave a Comment