ಸಂಕಷ್ಟಹರ ಚತುರ್ಥಿ ಸೋಮವಾರ ಇದೆ.ಹಾಗಾಗಿ ಸರಳವಾಗಿ ಪೂಜಾ ವಿಧಾನವನ್ನು ತಿಳಿಸಿಕೊಡುತ್ತೇನೆ.ಸಂಕಷ್ಟಹರ ಪ್ರಾರಂಭವಾಗುವುದು ಪುಷ್ಯಾ ಮಾಸ ಕೃಷ್ಣ ಪಕ್ಷ ಸೋಮವಾರದಂದು ಬೆಳಗ್ಗೆ 6:11 ನಿಮಿಷಕ್ಕೆ ಪ್ರಾರಂಭವಾಗಿ 30ನೆ ತಾರೀಕು ಬೆಳಗ್ಗೆ 8:55 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ಚಂದ್ರೋದಯ ಗಣನೆಗೆ ತೆಗೆದುಕೊಂಡು ಸಂಕಷ್ಟ ಚತುರ್ಥಿ ಪೂಜೆಯನ್ನು ಮಾಡಿಕೊಳ್ಳಬೇಕು.
ಮೊದಲು ಬೆಳಗ್ಗೆ ಸಂಕಲ್ಪ ಮಾಡಿಕೊಂಡು ಸಂಜೆ ಸಮಯದಲ್ಲಿ ಪೂಜೆ ಮಾಡಬೇಕು. ಪೂಜೆ ಮಾಡುವ ಸಂದರ್ಭದಲ್ಲಿ ಮೊದಲು ಒಂದು ಪೀಠವನ್ನು ಸಿದ್ಧತೆ ಮಾಡಿಕೊಳ್ಳಬೇಕು. ಗಣಪತಿ ಫೋಟೋ ಅಥವಾ ಶಿವ ಪಾರ್ವತಿ ಫೋಟೋವನ್ನು ಇಡಬೇಕು. ನಂತರ ಒಂದು ತಟ್ಟೆಯಲ್ಲಿ ಅಕ್ಕಿ ಹಾಗು ಎರಡು ವೀಳ್ಯದೆಲೆ ಇಟ್ಟು ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು. ನಂತರ ಗಣೇಶನ ಪ್ರತಿಷ್ಟಾಪನೆ ಮಾಡಿಕೊಳ್ಳಬೇಕು. ಗಣೇಶನಿಗೆ ಅರಿಶಿನ ಕುಂಕುಮ ಹಚ್ಚಿ 5 ಎಳೆ ಅಂಗನೂಲು ತೆಗೆದುಕೊಂಡು ಎಡಗಡೆಯಿಂದ ಬಲಗಡೆ ಬರುವ ರೀತಿ ಹಾಕಬೇಕು. ನಂತರ ಗೆಜ್ಜೆ ವಸ್ತ್ರ ಹಾಗು ಹೂವಿನಿಂದ ಅಲಂಕಾರ ಮಾಡಬೇಕು.
ಪ್ರಸಾದಕ್ಕೆ ಮೊಧಕ ಕಡಲೆಕಾಳು ಉಸ್ಲಿ, ಸಜ್ಜಿಗೆ ಕೂಡ ಮಾಡಿ ದೇವರಿಗೆ ನೈವೇದ್ಯ ಮಾಡಬಹುದು. ಎರಡು ತುಪ್ಪದ ದೀಪವನ್ನು ಹಚ್ಚಿ ಹಾಗು ತಾಂಬೂಲ ಇಡಬೇಕು. ಸೂರ್ಯಸ್ತಾ 6:11 ನಿಮಿಷದ ನಂತರ ಪೂಜೆಯನ್ನು ಪ್ರಾರಂಭ ಮಾಡಬಹುದು. ಚಂದ್ರೋದಯ ರಾತ್ರಿ 9:13 ನಿಮಿಷಕ್ಕೆ ಅಷ್ಟರ ಒಳಗೆ ಪೂಜೆಯನ್ನು ಮುಗಿಸಬೇಕು. ಪೂಜೆ ಮಾಡುವ ಮೊದಲು ಸಂಕಷ್ಟಹರ ಪುಸ್ತಕವನ್ನು ಸಂಪೂರ್ಣವಾಗಿ ಓದಿ ಪೂಜೆಯನ್ನು ಪ್ರಾರಂಭ ಮಾಡಿ.
- ಸಂಕಷ್ಟಹರಕ್ಕೆ ವಿಶೇಷವಾದ ಮಂತ್ರ
- ಈ ಒಂದು ಮಂತ್ರವನ್ನು ಹೇಳಬಹುದು ಓಂ ಗಂ ಗಣಪತಯೇ ನಮಃ. ಇಲ್ಲವಾದರೆ ಗಾಯತ್ರಿ ಮಂತ್ರವನ್ನು ಸಹ 11 ಬರಿ ಜಪ ಮಾಡಬೇಕು.
- ಓಂ ಏಕದಂತಾಯ ವಿದ್ಮಮಹೇ
- ವಕ್ರತುಂಡಯ ಧಿಮಹಿ
- ತನ್ನೋ ದಂತಿ ಪ್ರಚೋದಯತ್
ದೂಪಾ ದೀಪಗಳನ್ನು ಬೆಳಗಿ ಮತ್ತು ಅಷ್ಟೊತ್ತರ ಹೇಳಿಕೊಂಡು ಕುಂಕುಮ ಅರ್ಚನೆ ಮಾಡಬೇಕು. ನಂತರ ತುಪ್ಪದ ದೀಪವನ್ನು ಹಚ್ಚಬೇಕಾಗುತ್ತದೆ. ಚಂದ್ರೋದಯ ಸಮಯದಲ್ಲಿ ಚಂದ್ರನಿಗೆ ಅಕ್ಷತೆ ಹಾಕು ಪೂಜೆ ಮಾಡಿ. ನಂತರ ಸಂಕಲ್ಪ ಮಾಡಿ ಇಟ್ಟಿರುವ ಕಾಯಿಯನ್ನು ಒಡೆದು ಮಹಾ ಮಂಗಳಾರತಿ ಮಾಡಿ ಪ್ರಸಾದ ರೂಪದಲ್ಲಿ ಆ ಕಾಯಿ ಸೇವನೆ ಮಾಡಬೇಕು. ನಂತರ ನೀವು ಉಪವಾಸವನ್ನು ಬಿಡಬೇಕು.ಇದಿಷ್ಟು ಸಂಕಷ್ಟಹರ ಚತುರ್ಥಿಯಲ್ಲಿ ಮಾಡುವ ವಿಧಿ ವಿಧಾನಗಳು. ಯಾವುದೇ ಕಾರಣಕ್ಕೂ ಮಾಂಸಹರ ಸೇವನೆ ಮಾಡಬಾರದು ಉಪವಾಸ ಇದ್ದು ಈ ವ್ರತವನ್ನು ಮಾಡಬೇಕು.