ಒಂದು ನಾಯಿ ಯಮರಾಜರಿಗೆ ಹೇಳಿತು ಮನುಷ್ಯರ ಜೀವನದ ಕಹಿ ಸತ್ಯ ಭಗವಂತ ವಿಷ್ಣು ಕಾಪಾಡಿದರು!

ಒಂದು ಊರಿನಲ್ಲಿ ಒಬ್ಬ ಶ್ರೀಮಂತ ವಾಸವಿದ್ದ. ಅವನ ಹತ್ತಿರ ಒಂದು ನಾಯಿ ಇತ್ತು.ಆ ನಾಯಿಗೆ ಯಜಮಾನಿ ಎಂದರೆ ಎಷ್ಟೋ ಪ್ರೀತಿ ವಿಶ್ವಾಸ. ಆ ಶ್ರೀಮಂತ ಮಾತ್ರ ತುಂಬಾನೇ ಜಿಪುಣ. ಅದರೆ ಮಹಾ ವಿಷ್ಣುವಿಗೆ ಪರಮಭಕ್ತ. ಒಂದು ದಿನ ಅವನ ಮುಂದೆ ಮಹಾ ವಿಷ್ಣು ಪ್ರೆತ್ಯೆಕ್ಷಗೊಂಡು ಏನು ಬೇಕು ಕೇಳಿಕೊ ಎಂದರು.ಆಗ ಆ ಶ್ರೀಮಂತ ಒಂದು ಹಳೆಯನ್ನು ಕೊಟ್ಟು ಅದರ ಮೇಲೆ ಸಹಿ ಹಾಕುವಂತೆ ಹೇಳಿದ.ಏಕೆ ಎಂದು ಮಹಾವಿಷ್ಣು ಕೇಳಿದಾಗ ಸ್ವಾಮಿ ಇತ್ತೀಚಿನ ದಿನಗಳಲ್ಲಿ ದೇವರಿದ್ದಾರೆ ಎಂದು ಯಾರು ನಂಬಲ್ಲ. ಹಾಗಾಗಿ ಈ ಪೇಪರ್ ಅವರಿಗೆ ತೋರಿಸಿ ದೇವರಿದ್ದಾನೆ ಎಂದು ಹೇಳುತ್ತಾನೆ ಎಂದು ಹೇಳಿದ.

ನಂತರ ದೇವರು ಸರಿ ಎಂದು ಹಳೆಯ ಮೇಲೆ ಸಹಿ ಹಾಕಿ ಮಹಾ ವಿಷ್ಣು ಮಾಯವಾದರೂ.ಆ ಶ್ರೀಮಂತ ಅಂದಿನಿಂದ ಆ ಹಳೆಯನ್ನು ಜೇಬಿನಲ್ಲಿ ಇಟ್ಟುಕೊಂಡು ತಿರುಗಾಡುತ್ತಿದ್ದ. ಕೆಲವು ದಿನಗಳ ನಂತರ ಅವನ ಹತ್ತಿರ ಇದ್ದ ನಾಯಿ ಸತ್ತು ಹೋಯಿತು. ಶ್ರೀಮಂತ ತುಂಬಾನೇ ದುಃಖಿಸಿದ. ಆ ನಾಯಿ ಯಾಮಧರ್ಮರಾಜರ ಹತ್ತಿರ ಹೋಯಿತು. ಯಮರಾಜ ಆ ನಾಯಿಯ ಲೆಕ್ಕಚಾರವೆಲ್ಲ ನೋಡಿದರು.ಆ ನಾಯಿ ಬದುಕಿರುವವರೆಗೂ ಎಲ್ಲಾ ಕೆಲಸಗಳನ್ನು ತುಂಬಾ ಜವಾಬ್ದಾರಿಯಿಂದ ನಿಬಾಯಿಸಿತ್ತು. ಯಾವಾಗಲು ಯಾವುದೇ ಜೀವಿಗೂ ಅದು ನೋವು ಕೊಟ್ಟಿರಲಿಲ್ಲ. ಚಿಕ್ಕ ಜೀವಿಯಿಂದ ದೊಡ್ಡ ಪ್ರಾಣಿಗಳವರೆಗೂ ಯಾವುದನ್ನೂ ಅದು ಕೊಂದಿರಲಿಲ್ಲ.

ಯಜಮಾನನಿಗೆ ತುಂಬಾ ನಿಷ್ಠೆಯಿಂದ ಸೇವೆ ಮಾಡಿತ್ತು. ಅದನ್ನು ನೋಡಿದ ಯಮ ದೇವರು ಶಭಾಷ್ ನಾಯಿ ನೀನು ಜೀವನದಲ್ಲಿ ಯಾವುದೇ ತಪ್ಪನ್ನು ಕೂಡ ಮಾಡಿಲ್ಲ. ನಿನ್ನ ಒಳ್ಳೆತನದಿಂದ ಜನ್ಮ ಜನ್ಮಗಳ ಪಾಪಗಳು ನಾಶವಾಗಿದೆ.ಈಗ ಹೇಳು ನೀನು ಎಲ್ಲಿ ಇರಲು ಆಸೆ ಪಡುತ್ತೀಯಾ.ನಿನ್ನಿಂದ ಈ ಕ್ಷಣ ನಾನು ತುಂಬಾ ಸಂತೋಷವಾಗಿದ್ದೇನೆ. ಹಾಗಾಗಿ ನೀನು ಎಲ್ಲಿಗೆ ಹೋಗಬೇಕು ಅಂದರೆ ಅಲ್ಲಿಗೆ ನಾನು ಕಳಿಸುತ್ತೇನೆ.

ಆಗ ನಾಯಿ ನನನ್ನು ಸ್ವರ್ಗ ಅಥವಾ ನರಕದಲ್ಲಿ ಆದರೂ ತಳ್ಳಿ. ಅದರೆ ಮನುಷ್ಯರ ಬಂಧನದಲ್ಲಿ ಇರದೇ ಇರುವಂತೆ ಮಾಡಿದರೆ ಸಾಕು. ನಾನು ಮನುಷ್ಯರ ಬಂಧನದಲ್ಲಿ ಇರಲು ಆಸೆ ಪಡುತ್ತಿಲ್ಲ. ಹಾಗೆಯೇ ಮನುಷ್ಯನ ಜನ್ಮ ಪಡೆಯುವುದಕ್ಕೂ ನನಗೆ ಇಷ್ಟ ಇಲ್ಲಾ ಎಂದು ಹೇಳಿತು.

ಆಗ ಯಮರಾಜ ನಿನಗೆ ಮನುಷ್ಯರು ಎಂದರೆ ಯಾಕೆ ಅಷ್ಟು ಕೋಪ. ಎಷ್ಟೋ ಪುಣ್ಯ ಮಾಡಿದರೆ ಮಾತ್ರವೇ ಮನುಷ್ಯನ ಜನ್ಮ ಸಿಗುತ್ತದೆ. ಅದರೆ ನೀನು ಮಾತ್ರ ಬೇಡ ಎಂದು ಹೆಳಿತಿರುವೆ. ನೀನು ಮನುಷ್ಯ ಜನ್ಮ ಹುಟ್ಟಿದರೆ ಮಾತ್ರ ನಿನಗೆ ತಿಳಿಯುತ್ತದೆ. ಮನುಷ್ಯನಾ ಜನ್ಮ ಎಷ್ಟು ಶ್ರೇಷ್ಠ ಎಂದು ನಿನಗೆ ಅರ್ಥವಾಗುತ್ತದೆ. ಅದರೆ ನಾಯಿ ಮಾನುಷ್ಯ ಜನ್ಮ ಶ್ರೇಷ್ಠ ಹಾಗು ಬುದ್ದಿವಂತರು ಮತ್ತು ಚಾಣಕ್ಯರು, ಅಂದುಕೊಂಡ ಕೆಲಸ ಮಾಡುವುದಕ್ಕೆ ಯಾವುದೇ ತಪ್ಪು ಮಾಡುವುದಕ್ಕೂ ಅವರು ಸಿದ್ದರಾಗಿರುತ್ತಾರೆ. ಎಂತಹ ಸಂತೋಷ ಬಂದರು ಸಹ ಅವರು ಮಾತ್ರ ತೃಪ್ತಿ ಪಡುವುದಿಲ್ಲ. ಇತರರಿಗೆ ನೋವು ಕೊಡುತ್ತಲೇ ಇರುತ್ತಾರೆ. ನಮ್ಮಂತ ಪ್ರಾಣಿಗಳನ್ನು ಗುಲಾಮರಾಗಿಸಿಕೊಂಡು ಅವರ ಕೆಲಸ ಮಾಡಿಸಿಕೊಳ್ಳುತ್ತರೆ. ದೇವರನ್ನು ಸಹ ಮೋಸ ಮಾಡುತ್ತಾರೆ ಎಂದು ಹೇಳಿತು ನಾಯಿ. ಅವರ ಕೆಲಸ ಆದ ತಕ್ಷಣ ಎಲ್ಲವನ್ನು ಮರೆತು ಬಿಡುತ್ತಾರೆ.

ಪಕ್ಕದವರಿ ಸುಖವಾಗಿ ಇರಲು ಬಿಡುವುದಿಲ್ಲ. ಅವರು ತಿನ್ನುವುದಿಲ್ಲ ಮತ್ತು ಪಕ್ಕದಲ್ಲಿರುವರು ತಿನ್ನುವುದನ್ನು ನಿಲ್ಲಿಸುವುದಿಲ್ಲ. ಬುದ್ದಿವಂತಿಕೆಯಿಂದ ದೇವರಿಗೂ ಮೋಸ ಮಾಡುತ್ತಾರೆ.ಅವರ ಕೆಟ್ಟ ಕೆಲಸಗಳು ಎಂದು ಮುಗಿಯುವುದಿಲ್ಲ ಎಂದು ಹೇಳಿತು ನಾಯಿ.

ಯಮಧರ್ಮರಾಜ ನಿಮ್ಮ ಬಳಿ ಬರುವವರೆಲ್ಲ ಸತ್ತು ಹೋಗಿರುವವರು. ನೀವು ಯಾವ ಒಂದು ದಿನವೂ ಕೂಡ ಬದುಕಿರುವ ಮನುಷ್ಯರೊಂದಿಗೆ ಜೀವಿಸಲಿಲ್ಲ. ನೀವು ಒಂದು ದಿನವಾದರೂ ಬದುಕಿರುವ ಮನುಷ್ಯರೊಂದಿಗೆ ಇದ್ದು ನೋಡಿ ಆಗ ನಿಮಗೆ ಅರ್ಥ ಆಗುತ್ತದೆ.

ಅದನ್ನು ಕೇಳಿಸಿಕೊಂಡು ಯಾಮಧರ್ಮರಾಜ ಈ ರೀತಿ ಯೋಚಿಸಿದರು ಈ ನಾಯಿ ನನ್ನ ಮುಂದೆಯೇ ನಿಂತುಕೊಂಡು ನನ್ನನ್ನೇ ಕಡಿಮೆ ಮಾಡಿ ಮಾತನಾಡುತ್ತಿದೇ. ಈ ನಾಯಿಗೆ ತಪ್ಪದೆ ಮನುಷ್ಯರಿಗಿಂತ ನಾನೆ ಬುದ್ದಿವಂತ ಎಂದು ತೋರಿಸಬೇಕು. ಕೂಡಲೇ ಒಬ್ಬ ದೂತನನ್ನು ಕರೆದು ಈ ನಾಯಿಯ ಯಜಮಾನಿ ಬದುಕಿರುವಂತೆ ನನ್ನ ಹತ್ತಿರ ಕರೆತನ್ನಿ ನಾನು ಅವನೊಂದಿಗೆ ಸಮಯ ಕಳೆದು ತೋರಿಸುತ್ತೆನೆ. ಅವನು ಬುದ್ದಿವಂತನೋ ಅಥವಾ ನಾನು ಬುದ್ದಿವಂತನೋ ಎಂದು ಈ ನಾಯಿಗೆ ತೋರಿಸಬೇಕು.

ಒಂದು ವೇಳೆ ನಾನು ಗೆದ್ದರೆ ಈ ನಾಯಿಯನ್ನು ಶಾಶ್ವತವಾಗಿ ನರಕದೊಳಗೆ ತಳ್ಳಿಬಿಡುತ್ತೇನೆ ಎಂದರು. ಅದರೆ ನಾಯಿ ಮಾತ್ರ ಸ್ವಲ್ಪವು ಎದುರಲಿಲ್ಲ.ಏಕೆಂದರೆ ನಾಯಿಗೆ ಚೆನ್ನಾಗಿ ಗೊತ್ತಿತ್ತು. ಏಕೆಂದರೆ ಮನುಷ್ಯರು ಬದುಕಿರುವಾಗ ಸ್ವರ್ಗವನ್ನು ನರಕವನ್ನಗಿಸುವ ಶಕ್ತಿಯನ್ನು ಹೊಂದಿದ್ದರೆ ಎಂದು. ಯಮದೂತ ಆ ಶ್ರೀಮಂತನನ್ನು ಕರೆತರಲು ಭೂಮಿಗೆ ಹೋರಟ.

ನಿದ್ರೆಸುತ್ತಿದ್ದ ಅವನನ್ನು ಹಾಸಿಗೆ ಸಮೇತ ಎತ್ತುಕೊಂಡು ಬರುತ್ತಿರುವಾಗ ದಾರಿಯಲ್ಲಿ ಆ ಶ್ರೀಮಂತನಿಗೆ ಎಚ್ಚರವಾಯಿತು. ಅದನ್ನು ಯಮದೂತನೊಂದಿಗೆ ಅಯ್ಯೋಯೋ ಯಾರು ನೀನು ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿರುವೆ ಎಂದು ಕೇಳಿದ. ಆಗ ಯಮದೂತ ನಡೆದ ಕಥೆಯಲ್ಲ ಶ್ರೀಮಂತನಿಗೆ ಹೇಳಿದ. ನೀವು ನಮ್ಮ ಪ್ರಭುಗಳನ್ನೇ ಮೋಸ ಮಾಡಬಲ್ಲ ಚಾಣಕ್ಯರು ಎಂದು ನಿಮ್ಮ ನಾಯಿ ಹೇಳಿದೆ. ಇದನ್ನೇ ಪರೀಕ್ಷೆ ಮಾಡಲು ನಿಮ್ಮನ್ನು ಕರೆತರುವಂತೆ ನಮ್ಮ ಪ್ರಭುಗಳು ಆದೇಶ ನೀಡಿದ್ದಾರೆ ಎಂದು ಹೇಳಿದರು.ಆಗ ಅವನು ಯಮದೂತರಿಗೆ ಕಾಣಿಸದಂತೆ ಮಹಾವಿಷ್ಣು ಸಹಿ ಹಾಕಿದ್ದ ಹಳೆಯನ್ನು ತೆಗೆದು ಅದರೊಳಗೆ ಏನೋ ಬರೆದು ಮತ್ತೆ ಜೇಬಿನಲ್ಲಿ ಇಟ್ಟುಕೊಂಡ.

ಇಷ್ಟರಲ್ಲಿ ಯಮಲೋಕ ಬಂದುಬಿಟ್ಟಿತು.ಯಮದೂತ ಆ ಶ್ರೀಮಂತನನ್ನು ನೋಡಿ ನಗುತ್ತಾ ಯೋಚಿಸಿದರು. ಈ ನೀಚ ಮಾನವ ನನ್ನೇನು ಮಾಡುತ್ತಾನೆ ಎಂದು.ಆ ಶ್ರೀಮಂತ ನೇರವಾಗಿ ಯಮಧರ್ಮರಾಯ ಮುಂದೆ ನಿಂತು ಅವನ ಜೇಬಿನಲ್ಲಿ ಇರುವ ಹಳೆಯನ್ನು ಯಮದೇವರ ಕೈಗೆ ಕೊಟ್ಟ. ಯಮದೇವರು ಅದನ್ನು ಓದಿದ ಕೂಡಲೇ ಅವರ ಸಿಂಹಾಸನದಿಂದ ಕೆಳಗೆ ಬಂದು ಆ ಶ್ರೀಮಂತನಾ ಕಾಲಿನ ಹತ್ತಿರ ಕುಳಿತುಕೊಂಡು ಅವನನ್ನು ಸಿಂಹಾಸನದ ಮೇಲೆ ಕೂರಿಸಿದರು. ಅದನ್ನು ನೋಡಿ ಎಲ್ಲಾರು ಒಮ್ಮೆ ಆಶ್ಚರ್ಯ ಪಟ್ಟರು.

ಆ ಶ್ರೀಮಂತ ಆ ಸಿಂಹಾಸನ ಏರಿದ ಕೂಡಲೇ ಅಲ್ಲಿ ಇರುವ ನಿಯಮಗಳನ್ನು ಬದಲಾಯಿಸಿಬಿಟ್ಟ. ಸಾಕ್ಷಾತ್ ಯಮಧರ್ಮರಾಯರನ್ನು ಯಮಪುರಿಗೆ ಕಾವಲುಗಾರನಾಗಿ ನೇಮಿಸಿದ.ಆ ಶ್ರೀಮಂತ ಮನಸ್ಸಿನಲ್ಲಿ ಈ ರೀತಿ ಯೋಚಿಸಿದ. ಒಂದು ವೇಳೆ ನಾನು ಸತ್ತರೆ ಇಲ್ಲಿಗೆ ಬರಬೇಕು ಎಂದುಕೊಂಡು ಅಲ್ಲಿ ಇರುವ ನರಕವಾಸಿಗಳೆನ್ನೆಲ್ಲ ಸ್ವರ್ಗ ಲೋಕಕ್ಕೆ ಕಳುಹಿಸಿಬಿಟ್ಟ. ನರಕದೊಳಗೆ ಪ್ರವೇಶಿಸಲು ಇರುವ ದ್ವಾರಗಳೆನ್ನೆಲ್ಲ ಮುಚ್ಚಿಸಿ ಬಿಟ್ಟ.ಇಂದಿನಿಂದ ಯಾರಾದರೂ ನರಕ ಲೋಕಕ್ಕೆ ಬಂದರೆ ಅವರನ್ನು ಏನನ್ನು ಪ್ರಶ್ನಿಸದೆ ಸ್ವರ್ಗ ಲೋಕಕ್ಕೆ ಕಳುಹಿಸಬೇಕು ಎಂದು ಆದೇಶ ಜಾರಿ ಮಾಡಿದ.

ದಿನೇ ದಿನೇ ಸ್ವರ್ಗ ಲೋಕದಲ್ಲಿ ಜಾಗವಿಲ್ಲದಂತಯಿತು.ಇಷ್ಟು ಜನರಿಗೆ ಹೇಗೆ ಸೇವೆ ಮಾಡುವುದು ಎಂದು ಸ್ವರ್ಗ ಲೋಕದ ಸೇವಕರು ಅಪ್ಸರೆಯರು ತಬ್ಬಿಬ್ಬದರೂ.ನಾಯಿ ಇದನೆಲ್ಲ ನೋಡುತ್ತಲೇ ಇತ್ತು. ಒಂದು ದಿನ ನಾಯಿ ಆ ಶ್ರೀಮಂತನ ಹತ್ತಿರ ಹೋಗೀ ನೀವು ಇದನೆಲ್ಲ ಯಾವ ರೀತಿ ಮಾಡಿದಿರಿ. ಯಮಲೋಕಕ್ಕೆ ರಾಜ ಹೇಗೆ ಅದಿರಿ. ನಾನು ಶಾಶ್ವತವಾಗಿ ನಿಮ್ಮ ಸೇವಕನಾಗಿ ಇದ್ದುಬಿಡುತ್ತೀನಿ. ಅದರೆ ಈ ಒಂದು ವಿಷಯ ಮಾತ್ರ ನನಗೆ ಹೇಳಿ ಎಂದು ಕೇಳಿತು.

ಆಗ ಶ್ರೀಮಂತ ಮೆಲ್ಲಗೆ ನಾಯಿಯ ಕಿವಿ ಒಳಗೆ ಈ ರೀತಿ ಹೇಳಿದ.ಯಾವಾಗಲು ಅವರು ನನ್ನನ್ನು ಬದುಕಿರುವಾಗಲೇ ಯಮಲೋಕಕ್ಕೆ ಕರೆದುಕೊಂಡು ಹೋಗುತ್ತಿದ್ದರೆ ಎಂದು ತಿಳಿಯಿತೋ ಆಗಲೇ ನಾನು ಮಹಾವಿಷ್ಣು ಸಹಿ ಹಾಕಿಕೊಟ್ಟಿದ ಹಳೆಯ ಮೇಲೆ ಈ ರೀತಿಯಾಗಿ ಬರೆದೆ. ನೀನು ಬದುಕಿರುವ ಯಾವ ವ್ಯಕ್ತಿಯನ್ನಾದರೂ ಯಮಲೋಕಕ್ಕೆ ಕರೆತಂದರೆ ಆ ವ್ಯಕ್ತಿಗೆ ನಿನ್ನ ಸಿಂಹಾಸನವನ್ನು ಬಿಟ್ಟುಕೋಡು. ಅವನು ಹೇಳಿದಂತೆ ಇನ್ನು ಮುಂದೆ ಕೇಳಬೇಕು ಇದೆ ನನ್ನ ಆಜ್ಞೆ ಎಂದು ಬರೆದಿತ್ತು.ಹೇಗೋ ಮಹಾವಿಷ್ಣುವಿನ ಸಹಿ ಆ ಹಳೆಯ ಮೇಲೆ ಇತ್ತು. ಹಾಗಾಗಿ ಯಮದೇವರು ಸಾಕ್ಷಾತ್ ಮಹಾವಿಷ್ಣು ಆದೇಶ ಕೊಟ್ಟಿದ್ದಾರೆ ಎಂದು ಹೇಳಿದ ಆ ಶ್ರೀಮಂತ.

ಆ ಮಾತು ಕೇಳಿ ಆ ನಾಯಿ ತುಂಬಾನೇ ಸಂತೋಷಪಟ್ಟಿತು. ಆ ನಾಯಿ ಈ ರೀತಿ ಯೋಚಿಸಿತು.ಈ ಮನುಷ್ಯರ ಮೆದುಳು ಎಲ್ಲಿದ್ದರು ಎಂತಹ ಪರಿಸ್ಥಿತಿಯಲ್ಲಿದ್ದರು ತುಂಬಾ ಹುಷಾರಾಗಿ ಕೆಲಸ ಮಾಡುತ್ತದೆ ಎಂದು. ಇನ್ನು ಸ್ವರ್ಗ ಲೋಕವೆಲ್ಲಾ ನರಕದಂತೆ ಬದಲಾಗಿ ಹೋಯಿತು. ಹಾಗಾಗಿ ಅಲ್ಲಿ ಇರುವ ದೇವತೆಗಳೆಲ್ಲ ಮಹಾವಿಷ್ಣುವನ್ನು ಭೇಟಿಯಾಗಿ ವಿಷಯ ತಿಳಿಸಿದರು.

ಆಗ ಮಹಾವಿಷ್ಣುವೇ ಯಮಲೋಕಕ್ಕೆ ಬಂದರು. ಬಾಗಿಲ ಬಳಿ ಯಮದೇವರು ಕಾವಲು ಕಾಯೂತ್ತಿದ್ದರು. ಸಿಂಹಾಸನದ ಮೇಲೆ ಈ ವ್ಯಕ್ತಿ ಕುಳಿತಿದ್ದ. ಯಮದೇವರು ಮಹಾವಿಷ್ಣುವಿನೊಂದಿಗೆ ಸ್ವಾಮಿ ನಿಮ್ಮ ಲೀಲೆಗಳು ವಿಚಿತ್ರವಾದದ್ದು. ಅತೀ ಕಡಿಮೆ ಸಮಯದಲ್ಲಿ ಭೂಲೋಕದಲ್ಲಿ ಇದ್ದ ಒಬ್ಬ ವ್ಯಕ್ತಿಯನ್ನು ತಂದು ಯಮಪುರಿಗೆ ರಾಜನಾಗಿಸಿದ್ದಿರಿ. ಆಗ ಮಹಾವಿಷ್ಣು ಯಮ ಇದು ಯಾವುದು ನಾನು ಮಾಡಲಿಲ್ಲ. ಇದೆಲ್ಲಾ ಮನುಷ್ಯರ ಬುದ್ಧಿವಂತಿಕೆಯಿಂದ ಆಗಿರೋದು. ನೀನು ಬದುಕಿರುವ ಮನುಷ್ಯರೊಂದಿಗೆ ಸಂಪರ್ಕ ಇಟ್ಟುಕೊಂಡರೆ ಇದೆ ನಡೆಯೋದು. ಅದೇ ಕಾರಣಕ್ಕೆ ನಾನು ಮನುಷ್ಯರು ಮೃತಪಟ್ಟ ನಂತರವೇ ಬೇರೆ ಲೋಕಗಳಿಗೆ ಹೋಗುವ ನಿಯಮವನ್ನು ಇಟ್ಟೆ ಎಂದು ಹೇಳಿ ಆ ಶ್ರೀಮಂತ ಹತ್ತಿರ ಹೋದರು. ಅವರನ್ನು ನೋಡಿದ ಕೂಡಲೇ ಶ್ರೀಮಂತ ಸಿಂಹಾಸನದಿಂದ ಕೆಳಗೆ ಇಳಿದು ಮಹಾವಿಷ್ಣುವಿನ ಪಾದಕ್ಕೆ ಬಿದ್ದು ಪ್ರಭು ನನ್ನನ್ನು ಕ್ಷಮಿಸಿ ನಾನು ಈ ಸಿಂಹಾಸನಕ್ಕೆ ಆಸೆ ಪಟ್ಟು ಈ ರೀತಿಯಾಗಿ ಮಾಡಲಿಲ್ಲ.

ಯಮದೇವರಿಗೆ ಬದುಕಿರುವ ಮನುಷ್ಯರ ಬುದ್ಧಿ ಹೇಗಿರುತ್ತದೆ ಎಂದು ಮಾತ್ರ ತೋರಿಸಿಕೊಡಲು ಪ್ರಯತ್ನಿಸಿದೇ. ನನಗೆ ನಿಮ್ಮ ದರ್ಶನ ಮಾಡಿದಾಗಿನಿಂದಲೂ ಯಾವುದರ ಮೇಲು ಮೋಹ ಇಲ್ಲಾ. ಕೋರಿಕೆ ಆಸೆ ಏನು ಇಲ್ಲಾ ಎಂದು ಹೇಳಿ ಆತ ಭೂಲೋಕಕ್ಕೆ ಹೊರಟುಹೋದ ಹಾಗು ಮಹಾವಿಷ್ಣು ವೈಕುಂಠಕ್ಕೆ ಹೊರಟುಹೋದರು. ಯಮ ದೇವರು ಮತ್ತೆ ಅವರ ಸಿಂಹಾಸನದ ಮೇಲೆ ಕುಳಿತರು ಆಗ ನಾಯಿ ಅವರೊಂದಿಗೆ ಪ್ರಭು ನೀವೇ ನೋಡಿರಿ ತಾನೇ ಬದುಕಿರುವ ಮನುಷ್ಯ ಏನೇನೋ ಮಾಡಬಲ್ಲ ಎಂದು. ಇದೆ ಕಾರಣನಿಂದಲೇ ನಾನು ಮನುಷ್ಯನ ಜನ್ಮ ಬೇಡ ಎಂದೇ. ಮನುಷ್ಯ ಸ್ವಾರ್ಥಿಯಾಗಿ ಬದಲಾದ ಕಾರಣ ಅವರ ತಪ್ಪುಗಳು ಅವರಿಗೆ ತಿಳಿಯುತ್ತಿಲ್ಲ. ಅತೀ ಆಸೆ ಯಿಂದ ಧರ್ಮ ಮರೆತು ಮಾಡಬಾರದ ಕೆಲಸ ಮಾಡುತ್ತಾರೆ. ನಂತರ ಯಮದೇವರು ತಮ್ಮ ಸೋಲನ್ನು ಒಪ್ಪಿಕೊಂಡು ಆ ನಾಯಿಯನ್ನು ಸ್ವರ್ಗಕ್ಕೆ ಕಳುಹಿಸಿದರು.

Leave a Comment