ದಾಳಿಂಬೆ ಸಿಪ್ಪೆ ಯಾವತ್ತು ಎಸೆಲೇಬೇಡಿ ಇಂತವರಿಗೆ ಅತ್ಯುತ್ತಮ ಮನೆಮದ್ದು!

ದಾಳಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ಸಿಪ್ಪೆಯಲ್ಲಿ ಕೂಡ ಪೌಷ್ಟಿಕಾಂಶ ಸಮೃದ್ಧವಾಗಿದೆ. ಇದನ್ನು ಸೇವಿಸಿ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಾಗಿ ದಾಳಿಂಬೆ ಸಿಪ್ಪೆಯನ್ನು ಎಸೆಯುವ ಬದಲು ಅದನ್ನು ಹೀಗೆ ಸೇವಿಸಿ.

ದಾಳಿಂಬೆ ಸಿಪ್ಪೆ ಚರ್ಮದ ಕ್ಯಾನ್ಸರ್ ಅಪಾಯವನ್ನುಕಡಿಮೆಮಾಡುತ್ತದೆ. ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಹಾಗಾಗಿ ನಿಮ್ಮ ಕ್ರೀಂ, ಲೋಷನ್ ಗೆ ದಾಳಿಂಬೆ ಸಿಪ್ಪೆಯ ಪುಡಿಯನ್ನು ಬೆರೆಸಿ ಹಚ್ಚಿ.

ಹಾಗೇ ದಾಳಿಂಬೆ ಸಿಪ್ಪೆಯ ಪುಡಿಯನ್ನು ನೀರಿಗೆ ಬೆರೆಸಿ ಅದರಿಂದ ಬಾಯಿ ಮುಕ್ಕಳಿಸಿದರೆ ಬಾಯಿ ವಾಸನೆ ದೂರವಾಗುತ್ತದೆಯಂತೆ. ಮತ್ತು ಬಾಯಿಯ ಹುಣ್ಣು ನಿವಾರಣೆಯಾಗುತ್ತದೆಯಂತೆ.

ದಾಳಿಂಬೆ ಸಿಪ್ಪೆ ದೇಹದಲ್ಲಿರುವ ಕೊಲೆಸ್ಟ್ರಾಲ್ ಅನ್ನು ಕರಗಿಸುತ್ತದೆ. ಇದರಿಂದ ಹೃದಯ ಆರೋಗ್ಯವಾಗಿರುತ್ತದೆ.
ಹಾಗೇ ಮಹಿಳೆಯರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆ ಕಾಡುತ್ತಿದ್ದರೆ ದಾಳಿಂಬೆ ಸಿಪ್ಪೆಯ ಪುಡಿಯನ್ನು ಸೇವಿಸಿ. ಇದು ಹೊಟ್ಟೆ ನೋವಿನ ಸಮಸ್ಯೆಯನ್ನು ನಿವಾರಿಸುತ್ತದೆ.

Leave a Comment