ಕಬ್ಬಿಣದ ಅಂಶ ಅಥವಾ ಹಿಮೋಗ್ಲೋಬಿನ್ ಕೊರತೆ ಭಾರತೀಯರಿಗೆ ಕಾಡುವಂತಹ ಬಹುದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಲು ಸಾಮಾನ್ಯವಾಗಿ ವೈದ್ಯರು ಹಸಿರು ಸೊಪ್ಪು ತರಕಾರಿಗಳನ್ನು, ಕಾಳುಗಳನ್ನು ಅಡುಗೆಯಲ್ಲಿ ಬಳಸಲು ಸೂಚಿಸುತ್ತಾರೆ. ಮನುಷ್ಯನ ಆರೋಗ್ಯವನ್ನು ಕಾಪಾಡಲು ಯಾವ ಆಹಾರ ಯಾವ ಸಮಯದಲ್ಲಿ ಸಹಾಯ ಮಾಡುತ್ತದೆ ಎಂದು ನಿರ್ದಿಷ್ಟವಾಗಿ ಹೇಳುವುದಕ್ಕೆ ಬರುವುದಿಲ್ಲ.ಹಾಗಾಗಿ ಕಾಲಕಾಲಕ್ಕೆ ಸಿಗುವಂತಹ ಸೊಪ್ಪುಗಳು, ತರಕಾರಿಗಳು, ಕಾಳುಗಳನ್ನು, ಹಣ್ಣು ಹಂಪಲುಗಳನ್ನು ಸೇವಿಸಬೇಕು.
ಅದರಲ್ಲೂ ಬಸಲೆ ಸೊಪ್ಪಿನಲ್ಲಿ ಹಲವಾರು ವಿಧಗಳಿವೆ.ಅದರಲ್ಲೂ ಹಸಿರು ಬಸಲೆ, ಕೆಂಪು ಬಸಲೆ, ನೆಲ ಬಸಲೆ ಇತ್ಯಾದಿ..ಬಸಲೆ ಒಂದು ಬಳ್ಳಿಯ ಜಾತಿಯ ಸಸ್ಯವಾಗಿದೆ. ಇದನ್ನು ಹೆಚ್ಚಾಗಿ ನೀರು ಹರಿಯುವಂತಹ ಜಾಗದಲ್ಲಿ ಬೆಳೆಸಲಾಗುತ್ತದೆ. ಇದರ ಎಲೆಗಳು ದಪ್ಪವಾಗಿರುತ್ತದೆ ಮತ್ತು ಹೂವುಗಳು ಬಿಳಿ ಬಣ್ಣದಲ್ಲಿ ಇರುತ್ತದೆ ಮತ್ತು ಈ ಗಿಡ ತುಂಬಾ ಚಿಕ್ಕದಾಗಿರುತ್ತದೆ. ಇದರ ಬೀಜಗಳಿಂದ ಕಾಂಡಗಳಿಂದ ಬಸಲೆ ಗಿಡವನ್ನು ಕೂಡ ಬೆಳೆಸಬಹುದು.ಇನ್ನು ಈ ಸೊಪ್ಪಿನಿಂದ ಅಡುಗೆ ಸಾಂಬಾರು ಮತ್ತು ಪಲ್ಯೆ, ಬಜೆ ಇನ್ನು ಹಲವಾರು ಆಹಾರವನ್ನು ತಯಾರಿಸಬಹುದು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಬಸಲಿ ಸೊಪ್ಪಿನಲ್ಲಿ ಪ್ರೋಟೀನ್, ವಿಟಮಿನ್ ಬಿ ಹೆಚ್ಚು ಪ್ರಮಾಣದಲ್ಲಿ ಹೊಂದಿದೆ ಹಾಗೂ ವಿಟಮಿನ್ ಬಿ1, ಬಿ12,ಬಿ6, ವಿಟಮಿನ್ ಸಿ ಕ್ಯಾಲ್ಸಿಯಂ, ಐರನ್ ಮೆಗ್ನೀಷಿಯಂ, ಪೊಟ್ಯಾಶಿಯಂ, ಝೀಕ್ ಕೂಡ ಇದರಲ್ಲಿ ಇದೆ. ಇಷ್ಟೆಲ್ಲಾ ಪೋಸ್ಟಿಕ ಅಂಶಗಳನ್ನು ಒಳಗೊಂಡಿರುವಂತಹ ಈ ಸೊಪ್ಪನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಈ ರೀತಿಯ ಲಾಭಗಳು ಸಿಗುತ್ತದೆ.
1, ಬಸಲೆ ಸೊಪ್ಪು ದೇಹಕ್ಕೆ ಬೇಕಾಗಿರುವಂತಹ ಹಲವಾರು ಲಾಭಗಳನ್ನು ಒದಗಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ನೈಸರ್ಗಿಕವಾಗಿ ಇದರಲ್ಲಿ ಹಲವಾರು ವಿಟಮಿನ್ಸ್ ಗಳು ಮತ್ತು ಪೌಷ್ಟಿಕಾಂಶಗಳು ಹೊಂದಿವೆ. ಹಾಗಾಗಿ ದೇಹಕ್ಕೆ ಬೇಕಾಗಿರುವಂತಹ ಎಲ್ಲ ವಿಟಮಿನ್ ಮತ್ತು ಪೌಷ್ಟಿಕಾಂಶ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ.
2, ಬಸಲೆ ಸೊಪ್ಪನ್ನು ಸೇವನೆ ಮಾಡುವುದರಿಂದ ಕಣ್ಣಿಗೆ ಬರುವಂತಹ ಸಮಸ್ಸೆಗಳಿಂದ ದೂರ ಇರಬಹುದು. ಯಾಕೆಂದರೆ ಇದರಲ್ಲಿ ವಿಟಮಿನ್ ಎ ಅಂಶ ಇರುವುದರಿಂದ ಮುಂದೆ ಬರುವಂತಹ ಕಣ್ಣಿನ ಸಮಸ್ಸೆಯನ್ನು ಇದು ತಡೆಗಟ್ಟುವಂತಹ ಸಾಮರ್ಥ್ಯವನ್ನು ಹೊಂದಿದೆ. ಕಣ್ಣಿನ ಆರೋಗ್ಯವನ್ನು ಕಾಪಾಡಲು ನಿಯಮಿತವಾಗಿ ಬಸಲೆ ಸೊಪ್ಪನ್ನು ಸೇವನೆ ಮಾಡಬೇಕು.
3, ಇನ್ನು ಬಾಯಿಯ ಉಣ್ಣಿಗೆ ಈ ಸೊಪ್ಪನ್ನು ಸುಲಭವಾಗಿ ಮನೆ ಮದ್ದಾಗಿ ಬಳಸಬಹುದು. ಈ ಸೊಪ್ಪನ್ನು ಜಗಿಯುವುದರಿಂದ ನಿಮ್ಮ ಬಾಯಿಯ ಉಣ್ಣು ನಿವರಣೆ ಮಾಡುವಂತಹ ಶಕ್ತಿಯನ್ನು ಹೊಂದಿದೆ.
4, ಬಸಲೆ ಸೊಪ್ಪು ನಿಮ್ಮ ಹಸಿವನ್ನು ಹೆಚ್ಚಿಸಲು ವಾರದಲ್ಲಿ ಮೂರು ನಾಲ್ಕು ಸಾರಿ ಈ ಸೊಪ್ಪನ್ನು ನಿಮ್ಮ ಆಹಾರದಲ್ಲಿ ಬಳಸಿ ನೋಡಿ. ಇದನ್ನು ಸೇವನೆ ಮಾಡುವುದರಿಂದ ನಿಮ್ಮ ಜೀರ್ಣಕ್ರಿಯೆ ವೇಗವಾಗಿ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಹಸಿವು ಕೂಡ ಹೆಚ್ಚಾಗುತ್ತದೆ.
5, ಮಲ ಸರಿಯಾಗಿ ಹೋಗದಿದ್ದರೆ ಹೊಟ್ಟೆಯಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಡುತ್ತಿರುತ್ತವೆ. ಮಲಬದ್ಧತೆ ಸಮಸ್ಯೆ ಆಗಬಾರದೆಂದರೆ ಈ ಸೊಪ್ಪನ್ನು ಸೇವಿಸಿ. ಈ ಸೊಪ್ಪನ್ನು ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ.
6, ದೇಹದಲ್ಲಿ ಕಬ್ಬಿಣ ಕೊರತೆಯುಂಟಾದಾಗ ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ದೇಹದಲ್ಲಿ ಆಮ್ಲಜನಕ ಪೂರೈಕೆ ಆಗದಿದ್ದರೆ ಮಾನಸಿಕ ತೊಂದರೆ, ನಿಶಕ್ತಿ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ಹಿರಿಯರು ಹೇಳುವಂತೆ ಈ ಸೊಪ್ಪನ್ನು ಬಳಕೆ ಮಾಡುವುದರಿಂದ ಸುಲಭವಾಗಿ ಪರಿಹಾರ ಸಿಗುತ್ತದೆ.