ಮನೆಯನ್ನು ಅಲಂಕರಿಸಲು ಸಸ್ಯಗಳು ಬಹಳಷ್ಟು ಸಹಾಯ ಮಾಡುತ್ತವೆ. ಇದಲ್ಲದೆ ಸಸ್ಯಗಳು ಶುದ್ಧ ಗಾಳಿಯನ್ನು ಒದಗಿಸುತ್ತವೆ. ಜೊತೆಗೆ ಮನೆಯಲ್ಲಿ ಸಂತೋಷ ಮತ್ತು ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮನೆಯನ್ನು ಅಲಂಕರಿಸುವ ಹಲವಾರು ರೀತಿಯ ಸಸ್ಯಗಳಿವೆ. ಇದಲ್ಲದೆ ಅದೃಷ್ಟಕ್ಕಾಗಿ ಮನೆಯಲ್ಲಿ ಬೆಳೆಸಬಹುದಾದ ಕೆಲವು ಸಸ್ಯಗಳಿವೆ. ಆದರೆ ಆ ಅದೃಷ್ಟದ ಗಿಡಗಳನ್ನು ಮನೆಯಲ್ಲಿ ಸರಿಯಾದ ಸ್ಥಳದಲ್ಲಿ ಮತ್ತು ದಿಕ್ಕಿನಲ್ಲಿ ಇಟ್ಟರೆ ಸಂಪೂರ್ಣ ಲಾಭವನ್ನು ಪಡೆಯಬಹುದು. ಅವುಗಳಲ್ಲಿ ಮನಿ ಪ್ಲಾಂಟ್ ಬಹುತೇಕರಿಗೆ ತಿಳಿದಿರುವ ಸಸ್ಯ. ಇದು ಮನೆಯನ್ನು ಅಲಂಕರಿಸಲು ಮತ್ತು ಅದೃಷ್ಟವನ್ನು ಆಕರ್ಷಿಸಲು ಸಹಾಯ ಮಾಡುತ್ತದೆ.
ಇದರೊಂದಿಗೆ ನಿಮಗೆ ಸ್ನೇಕ್ ಪ್ಲಾಂಟ್ ಎಂದು ಕರೆಯಲ್ಪಡುವ ಹಾವಿನ ಕಳ್ಳಿ ಸಸ್ಯದ ಬಗ್ಗೆ ಗೊತ್ತೇ. ಇದು ಕೂಡ ಮನೆಯಲ್ಲಿ ಅದೃಷ್ಟವನ್ನು ತರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹಾಗಾದರೆ ವಾಸ್ತು ಪ್ರಕಾರ ಮನೆಯಲ್ಲಿ ಹಾವಿನ ಗಿಡವನ್ನು ಯಾವ ಸ್ಥಳದಲ್ಲಿ ಮತ್ತು ದಿಕ್ಕಿನಲ್ಲಿ ಇಡಬೇಕು ಮತ್ತು ಮನೆಯಲ್ಲಿ ಹಾವಿನ ಗಿಡವನ್ನು ಬೆಳೆಸುವುದರಿಂದ ಏನು ಪ್ರಯೋಜನ ಎಂದು ನೋಡೋಣ.
ಹಾವಿನ ಗಿಡಗಳನ್ನು ಎಲ್ಲಿ ಇಡಬಹುದು?
ವಾಸ್ತು ಶಾಸ್ತ್ರದ ಪ್ರಕಾರ ಸ್ನೇಕ್ ಪ್ಲಾಂಟ್ ಅನ್ನು ಮನೆಯ ಹೊರಗೆ ಮತ್ತು ಒಳಗೆ ಬೆಳೆಸಿದರೆ ಅದೃಷ್ಟ ಒಲಿಯುತ್ತದೆ. ಆದರೆ ನೀವು ಸರಿಯಾದ ಸ್ಥಳದಲ್ಲಿ ಹಾವಿನ ಗಿಡವನ್ನು ಬೆಳೆಸಿದರೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ವಾಸ್ತು ಪ್ರಕಾರ ಸ್ನೇಕ್ ಪ್ಲಾಂಟ್ ಅನ್ನು ಬಾತ್ರೂಮ್ ಮತ್ತು ಮಲಗುವ ಕೋಣೆಯಲ್ಲಿ ಬೆಳೆಯಲು ಸೂಕ್ತವಾದ ಸಸ್ಯವೆಂದು ಪರಿಗಣಿಸಲಾಗಿದೆ. ಅಲ್ಲದೆ ಈ ಗಿಡವನ್ನು ಮನೆಯ ಹಾಲ್‌ನ ಮೂಲೆಯಲ್ಲೂ ಬೆಳೆಸಬಹುದು.
ಮನೆಯೊಳಗೆ ಹಾವಿನ ಗಿಡ ಬೆಳೆಸಿದರೆ ಮನೆಗೆ ಬರುವವರಿಗೆ ಕಾಣಿಸಬೇಕು. ಈ ಸಸ್ಯವನ್ನು ಯಾವಾಗಲೂ ಇತರರ ದೃಷ್ಟಿಗೆ ದೂರವಿಡಬೇಡಿ. ನೀವು ಇದನ್ನು ಇತರರಿಗೆ ಕಾಣಿಸುವಂತೆ ಇಟ್ಟಾಗ, ಕಣ್ಣಿನ ಆಯಾಸ ದೂರವಾಗುತ್ತದೆ ಮತ್ತು ಧನಾತ್ಮಕ ಶಕ್ತಿಯು ಮನೆಯಲ್ಲಿ ಹೆಚ್ಚು ಪರಿಚಲನೆಯಾಗುತ್ತದೆ.
ಸ್ನೇಕ್ ಪ್ಲಾಂಟ್ ಅನ್ನು ಬೆಳೆಸಲು ಉತ್ತಮವಾದ ದಿಕ್ಕು ಯಾವುದು?
ನೀವು ಮನೆಯಲ್ಲಿ ಸ್ನೇಕ್ ಪ್ಲಾಂಟ್ ಅವನ್ನು ಬೆಳೆಯಲು ಬಯಸಿದರೆ, ನೀವು ಅದನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು. ಇದನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದಾಗ, ಮನೆಯಲ್ಲಿ ಅನೇಕ ಸಮಸ್ಯೆಗಳು ದೂರವಾಗುತ್ತವೆ ಎಂದು ಶಾಸ್ತ್ರ ಹೇಳುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಸ್ನೇಕ್ ಪ್ಲಾಂಟ್ ಅನ್ನು ಮನೆಯ ಪೂರ್ವ, ದಕ್ಷಿಣ ಮತ್ತು ಆಗ್ನೇಯ ಮೂಲೆಗಳಲ್ಲಿ ಇಡಬಹುದು. ಏಕೆಂದರೆ ಈ ದಿಕ್ಕಿನಲ್ಲಿ ಈ ಸಸ್ಯವನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಸ್ನೇಕ್ ಪ್ಲಾಂಟ್ ಅನ್ನು ಮನೆಯೊಳಗೆ ಇಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳು
- ಮನೆಯಲ್ಲಿ ಸ್ನೇಕ್ ಪ್ಲಾಂಟ್ ಅನ್ನು ಇಡುವುದಾದರೆ ಅವುಗಳನ್ನು ಟೇಬಲ್ ಅಥವಾ ಇನ್ನಾವುದೇ ಮೇಲ್ಮೈ ಭಾಗದಲ್ಲಿ ಇಡಬಾರದು. ಅದನ್ನು ಯಾವಾಗಲೂ ನೆಲದ ಮೇಲೆನೇ ಇರಿಸಬೇಕು.
- ಸ್ನೇಕ್ ಪ್ಲಾಂಟ್ ಅನ್ನು ಮನೆಯಲ್ಲಿಟ್ಟರೆ ಆ ಗಿಡದ ಸುತ್ತ ಬೇರೆ ಗಿಡಗಳನ್ನು ಇಡಬಾರದು. ಹಾಗೆ ಇಟ್ಟರೆ ಮನೆಗೆ ನೆಗೆಟಿವ್ ಎನರ್ಜಿ ಬರುತ್ತದೆ ಎಂಬ ನಂಬಿಕೆ ಇದೆ.
- ಹಾವಿನ ಗಿಡವನ್ನು ಮನೆಯಲ್ಲಿಟ್ಟರೆ ದಾರಿದ್ರ್ಯ ಹೆಚ್ಚಾಗುತ್ತದೆ ಮತ್ತು ಮನೆಯ ನೆಮ್ಮದಿ ಕೆಡುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ವಾಸ್ತು ಪ್ರಕಾರ ಹಾವಿನ ಗಿಡವನ್ನು ಮನೆಯಲ್ಲಿ ಇಟ್ಟರೆ ಸುಖ-ಸಮೃದ್ಧಿ ಸಿಗುತ್ತದೆ.