ಬಹಳ ಹಿಂದಿನ ಕಾಲದಿಂದಲೂ ಸಹ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಡಲಾಗಿದೆ ಹಾಗೂ ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಸ್ತ್ರೀಯರು ಬೆಳಿಗ್ಗೆ ಸ್ನಾನ ಮಾಡಿ ಮನೆಯ ಅಂಗಳದಲ್ಲಿ ರಂಗೋಲಿಯನ್ನು ಹಾಕಿ ತುಳಸಿ ಗಿಡಕ್ಕೆ ಪೂಜೆ ಮಾಡುವ ಸಂಪ್ರದಾಯ ಇಂದಿಗೂ ಸಹ ರೂಢಿಯಲ್ಲಿದೆ ಹಾಗೂ ಇದರಿಂದಾಗಿ ಮನೆಯಲ್ಲಿ ಲಕ್ಷ್ಮಿ ದೇವಿಯ ಅನುಗ್ರಹ ಕಂಡು ಬರುತ್ತದೆ ಹಾಗೂ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಮತ್ತು ಸಂತೋಷ ನೆಮ್ಮದಿ ಸುಖ ಶಾಂತಿ ನೆಲೆಸುತ್ತದೆ.
ತುಳಸಿಯು ಭಗವಾನ್ ವಿಷ್ಣು ದೇವರಿಗೆ ತುಂಬಾ ಪ್ರಿಯವಾದ ಗಿಡ ಹಾಗೂ ತುಳಸಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ ತುಳಸಿ ಗಿಡಕ್ಕೆ ಪ್ರತಿದಿನ ಪೂಜೆಯನ್ನು ಮಾಡಿ ದೀಪವನ್ನು ಹಚ್ಚಬೇಕು ಇದರಿಂದಾಗಿ ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸುತ್ತಾಳೆ ತುಳಸಿಯಲ್ಲಿ ಹೆಚ್ಚಿನ ಮಟ್ಟದ ಔಷಧೀಯ ಅಂಶವನ್ನು ಒಳಗೊಂಡ ಸಸ್ಯ ಇದಾಗಿದೆ ಹಾಗೆಯೇ ಹಿಂದಿನ ಕಾಲದಿಂದಲೂ ಸಹ ಆಯುರ್ವೇದ ಔಷಧ ಪದ್ಧತಿಯಲ್ಲಿ ಅನೇಕ ರೋಗಗಳ ನಿವಾರಣೆ ಮಾಡುವಲ್ಲಿ ಬಳಸಲಾಗುತ್ತದೆ ಹಾಗೂ ಚಿಕ್ಕ ಮಕ್ಕಳಿಗೆ ತುಳಸಿ ರಸವನ್ನು ತಿನ್ನುವುದರಿಂದ ನೆನಪಿನ ಶಕ್ತಿ ವೃದ್ಧಿ ಆಗುತ್ತದೆ ಹೀಗೆ ತುಳಸಿ ಹೆಚ್ಚಿನ ಪ್ರಯೋಜನವನ್ನು ಹೊಂದಿದೆ ನಾವು ಈ ಲೇಖನದ ಮೂಲಕ ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ತುಳಸಿಯು ಭಗವಾನ್ ವಿಷ್ಣುವಿನ ತುಂಬಾ ಪ್ರಿಯ ತುಳಸಿ ಗಿಡವನ್ನು ತಾಯಿ ಲಕ್ಷ್ಮೀ ರೂಪ ಎಂದು ಪರಿಗಣಿಸಲಾಗುತ್ತದೆ ತುಳಸಿ ಗಿಡ ಸದಾ ಹಸಿರಾಗಿದ್ದರೆ ಮನೆಯಲ್ಲಿ ಸಂತೋಷ ಹಾಗೂ ನೆಮ್ಮದಿ ಕಂಡುಬರುತ್ತದೆ ಅಂತಹ ಮನೆಯಲ್ಲಿ ಲಕ್ಷ್ಮಿ ದೇವಿಯು ಸದಾ ನೆಲೆಸುತ್ತಾಳೆ ಲಕ್ಷ್ಮಿ ದೇವಿಯ ಆಶೀರ್ವಾದ ಮನೆಯಲ್ಲಿ ನೆಲೆಸಲು ತುಳಸಿಯನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು ತುಳಸಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ ಹಾಗಾಗಿ ತುಳಸಿ ಗಿಡವನ್ನು ನೆಡುವಾಗ ಹೆಚ್ಚು ಕಾಳಜಿ ವಹಿಸಬೇಕು.
ಹಿಂದಿನ ಕಾಲದಲ್ಲಿ ತುಳಸಿ ಗಿಡವನ್ನು ಮನೆಯ ಅಂಗಳದ ಮಧ್ಯ ಭಾಗದಲ್ಲಿ ಇಡುತ್ತಿದ್ದರು ಇದರಿಂದಾಗಿ ತುಳಸಿ ಗಿಡಕ್ಕೆ ಸಾಕಷ್ಟು ಪ್ರಮಾಣದ ನೀರು ಗಾಳಿ ಬೆಳಕು ಸಿಗುತ್ತಿತ್ತು. ಇಂದಿನ ಕಾಲದಲ್ಲಿ ಮನೆಗಳ ಗಾತ್ರ ಚಿಕ್ಕದಾಗಿ ಇರುವುದರಿಂದ ತುಳಸಿ ಗಿಡವನ್ನು ಎಲ್ಲಿ ನೆಡಬೇಕು ಎನ್ನುವುದು ದೊಡ್ಡ ಸಮಸ್ಯೆಯಾಗಿದೆ ಮುಖ್ಯಬಾಗಿಲಿಗೆ ತುಳಸಿ ಗಿಡವನ್ನು ನೆಡಬಹುದಾಗಿದೆ ಆದರೆ ತುಳಸಿ ಗಿಡಕ್ಕೆ ಬೆಳಕು ಗಾಳಿ ಸೂರ್ಯನ ಕಿರಣ ಬೀಳುವಂತಿರಬೇಕು ಇಲ್ಲವಾದರೆ ತುಳಸಿ ಗಿಡ ಒಣಗಿ ಹೋಗುವ ಸಾಧ್ಯತೆ ಇರುತ್ತದೆ ಉತ್ತರ ಹಾಗೂ ಪೂರ್ವ ದಿಕ್ಕಿನಲ್ಲಿ ಮಾತ್ರ ತುಳಸಿ ಗಿಡವನ್ನು ನೆಡಬೇಕು.
ಧಾರ್ಮಿಕ ನಂಬಿಕೆಗಳ ಪ್ರಕಾರ ದೇವತೆಗಳು ಪೂರ್ವ ಹಾಗೂ ಉತ್ತರ ದಿಕ್ಕಿನಲ್ಲಿ ನೆಲೆಸಿದ್ದಾರೆ ಉತ್ತರ ದಿಕ್ಕನ್ನು ಸಂಪತ್ತಿನ ದೇವರಾದ ಕುಬೇರನ ಸ್ಥಳ ಎಂದು ಕರೆಯಲಾಗುತ್ತದೆ ಈ ದಿಕ್ಕಿನಲ್ಲಿ ತುಳಸಿ ನೆಡುವುದರಿಂದ ಹಣದ ಹರಿವು ಹೆಚ್ಚಾಗುತ್ತದೆ ವಾಸ್ತು ಶಾಸ್ತ್ರದ ಪ್ರಕಾರ ಪಶ್ಚಿಮ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೇಡಬಾರದು ಈ ದಿಕ್ಕನ್ನು ಪೂರ್ವಜರ ಆವಾಸ ಸ್ಥಾನ ಎಂದು ಪರಿಗಣಿಸಲಾಗಿದೆ ಈ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಟ್ಟರೆ ಒಣಗುತ್ತದೆ ದೇವಿ ಲಕ್ಷ್ಮಿ ಅಸಮಾಧಾನಗೊಳ್ಳುತ್ತಾಳೆ ಇದರಿಂದಾಗಿ ಮನೆಯಲ್ಲಿ ಬಡತನ ಕಂಡು ಬರುತ್ತದೆ ಕುಟುಂಬ ಸದಸ್ಯರ ನಡುವೆ ಪರಿಣಾಮ ಬೀರುತ್ತದೆ.
ಪೂರ್ವಜರ ಪೂಜೆಗಾಗಿ ಈ ದಿಕ್ಕನ್ನು ಬಳಸುತ್ತಾರೆ ತಪ್ಪಾಗಿಯು ತುಳಸಿ ಗಿಡವನ್ನು ಪಶ್ಚಿಮ ದಿಕ್ಕಿನಲ್ಲಿ ನೆಡಬಾರದು ಮನೆಯಲ್ಲಿ ಪತಿ ಪತ್ನಿಯರ ನಡುವೆ ಪದೇ ಪದೆ ಜಗಳ ನಡೆಯುತ್ತಿದ್ದರೆ ನಿಯಮಿತವಾಗಿ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಬೇಕು ಹೀಗೆ ಮಾಡುವುದರಿಂದ ಒಳ್ಳೆಯ ಹೊಂದಾಣಿಕೆ ಕಂಡು ಬರುತ್ತದೆ ಪ್ರೀತಿ ಸಹ ಕಂಡು ಬರುತ್ತದೆ .ಮನೆಯಲ್ಲಿ ಹಣದ ಖರ್ಚು ಹೆಚ್ಚಾಗಿ ಕಂಡು ಬರುತ್ತಿದ್ದರೆ ಹಾಗೂ ಹಣಕಾಸಿನ ಉಳಿತಾಯದಲ್ಲಿ ಸಮಸ್ಯೆ ಕಂಡು ಬಂದರೆ ತುಳಸಿ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು ಇದರಿಂದ ಮನೆಯಲ್ಲಿ ಸಂತೋಷ ಹಾಗೂ ಆಶೀರ್ವಾದ ಹೆಚ್ಚಾಗುತ್ತದೆ ಪ್ರತಿದಿನ ತುಳಸಿ ಗಿಡಕ್ಕೆ ನೀರನ್ನು ಹಾಕುವುದರಿಂದ ನವಗ್ರಹ ದೋಷಗಳು ನಿವಾರಣೆ ಆಗುತ್ತದೆ ಲಕ್ಷ್ಮಿ ದೇವಿಯ ಅನುಗ್ರಹದಿಂದ ಮನೆಯಲ್ಲಿನ ಬಡತನ ದೂರ ಆಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ತುಳಸಿ ಕಟ್ಟೆಯನ್ನು ವಿನ್ಯಾಸಗೊಳಿಸುವಾಗ ಕೆಲವು ನಿಯಮವನ್ನು ಅನುಸರಿಸಬೇಕು ತುಳಸಿ ಗಿಡದ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಮತ್ತು ಅಚ್ಚು ಕಟ್ಟಾಗಿ ಇಟ್ಟುಕೊಳ್ಳಬೇಕು ಗಿಡದ ಬಳಿ ಎಣ್ಣೆ ದೀಪವನ್ನು ಹಚ್ಚಬೇಕು ತುಳಸಿ ಗಿಡಕ್ಕೆ ಕಳಸದಿಂದ ನೀರನ್ನು ಅರ್ಪಿಸಬೇಕು ಕಳಸವನ್ನು ಎರಡು ಕೈಯಿಂದ ಹಿಡಿಯಬೇಕು ಕುಂಕುಮ ಅರಿಶಿನ ದುಪ ದ್ರವ್ಯದಂತಹ ಪವಿತ್ರ ವಸ್ತುವನ್ನು ಅರ್ಪಿಸಬೇಕು ತುಳಸಿ ಕಟ್ಟೆಗೆ ಪ್ರದಕ್ಷಿಣೆ ಹಾಕುವಾಗ ಶ್ಲೋಕವನ್ನು ಹೇಳಬೇಕು ತುಳಸಿ ಕಟ್ಟೆಯನ್ನು ವಿನ್ಯಾಸ ಗೊಳಿಸಲು ಇರುವ ದಿಕ್ಕು ಪೂರ್ವ ಹಾಗೂ ಈಶಾನ್ಯ ದಿಕ್ಕಾಗಿದೆ ವಿನ್ಯಾಸ ಗೊಳಿಸಲು ಮರ ಹಾಗೂ ಅಮೃತ ಶಿಲೆಯನ್ನು ಬಳಸಬೇಕು.
ಗಿಡವನ್ನು ನೆಡುವ ಸ್ಥಳ ಸ್ವಚ್ಚವಾಗಿ ಇಡಬೇಕು ಗಿಡದ ಬಳಿ ತುಪ್ಪದ ದೀಪವನ್ನು ಹಚ್ಚಬೇಕು ಒಂದು ಮತ್ತು ಮೂರು ಹಾಗೂ 5 ರಂತೆ ಬೇಸ ಸಂಖ್ಯೆಯಲ್ಲಿ ನೆಡಬೇಕು ಹೂವಿನ ಗಿಡವನ್ನು ತುಳಸಿ ಗಿಡದ ಬಳಿ ಇಡಬೇಕು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಒಣ ಗಿಡವನ್ನು ಇಡಬಾರದು ತುಳಸಿ ಗಿಡ ನೆಡಲು ಉತ್ತಮವಾದ ವಾರ ಎಂದರೆ ಗುರುವಾರ ಹಾಗೆಯೇ ಕಾರ್ತಿಕ ಮಾಸದಲ್ಲಿ ತುಳಸಿ ಗಿಡವನ್ನು ನೆಟ್ಟರೆ ಶುಭದಾಯಕವಾಗಿ ಇರುತ್ತದೆ ತುಳಸಿ ಗಿಡವನ್ನು ಮುಕ್ತವಾದ ಜಾಗದಲ್ಲಿ ಇಡಬೇಕು
ಮನೆಯ ಒಳಗೆ ತುಳಸಿ ಗಿಡವನ್ನು ನೆಡಬಾರದು ಸಾಮಾನ್ಯವಾಗಿ ಬೆಳಗ್ಗಿನ ಜಾವ ಶನಿವಾರ ಬುಧವಾರ ಹಾಗೂ ಗುರುವಾರ ವಿಷ್ಣುವಿಗೆ ಪ್ರಾಥನೆ ಮಾಡಿ ತುಳಸಿ ಗಿಡವನ್ನು ನೆಡಬೇಕು ಕೃಷ್ಣ ತುಳಸಿ ಗಿಡ ತುಂಬಾ ಶ್ರೇಷ್ಠವಾಗಿದೆ ಬಿಳಿ ತುಳಸಿ ಸಹ ಒಳ್ಳೆಯದು ಹೀಗೆ ತುಳಸಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ನೆಡುವ ಮೂಲಕ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೊರಗೆ ಹಾಕಿ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುವಂತೆ ಮಾಡಬಹುದು.