ದೇಹದಲ್ಲಿ ಇಂಮ್ಯೂನಿಟಿ ಪವರ್ ಜಾಸ್ತಿ ಮಾಡುವುದಕ್ಕೆ ಮತ್ತು ಶೀತ ಕೆಮ್ಮು ಗಂಟಲು ನೋವು ಕಡಿಮೆ ಮಾಡುವುದಕ್ಕೆ ಈ ಮನೆಮದ್ದು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಮೊದಲು ಒಂದು ಪಾತ್ರೆಗೆ ಕಾಲು ಲೀಟರ್ ನೀರು ಹಾಕಿ ಬಿಸಿ ಮಾಡಿ. ಇದಕ್ಕೆ ಅರ್ಧ ಇಂಚು ಹಸಿ ಶುಂಠಿ ಜಜ್ಜಿ ಹಾಕಿ ಚೆನ್ನಾಗಿ ಕುದಿಸಬೇಕು. 2 ನಿಮಿಷ ಕುದಿಸಿದ ಬಳಿಕ ಎರಡು ಇಂಚು ಅರಿಶಿನ ಹಾಕಿ ಚೆನ್ನಾಗಿ ಕುದಿಸಬೇಕು.
ಅರಿಶಿನ ಮತ್ತು ಶುಂಠಿ ಗಂಟಲು ನೋವು ಕೆರೆತ ಇದ್ದರೆ ಬೇಗ ನಿವಾರಣೆ ಆಗುವುದಕ್ಕೆ ಸಹಾಯ ಮಾಡುತ್ತದೆ. ಕುದಿಸಿದ ಬಳಿಕ ಶೋದಿಸಿ ಸ್ವಲ್ಪ ನಿಂಬೆ ರಸ ಹಾಕಿ ಮಿಕ್ಸ್ ಮಾಡಿ ಬೆಳಗ್ಗೆ ಕುಡಿದರೆ ನಿಮಗೆ ಇರುವ ಶೀತ ಕೆಮ್ಮು ಕಫ ಎಲ್ಲಾ ರೀತಿಯ ಸಮಸ್ಸೆ ನಿವಾರಣೆ ಆಗುತ್ತದೆ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ.