ಕಣ್ತುಂಬ/ಗಾಡವಾದ ನಿದ್ದೆ ಬರಲು ಇದನ್ನು ಕುಡಿಯಿರಿ!

ಈ ಒಂದು ಔಷಧಿಯನ್ನು ತಿಳಿದುಕೊಂಡರೆ ನೀವು ಚೆನ್ನಾಗಿ ನಿದ್ದೆ ಮಾಡಬಹುದು.ಸೈಕೋ ಬಯೋಟಿಕ್ಸ್ ಎಂದರೆ ಕರುಳು ಮತ್ತು ಮೆದುಳು ಲಿಂಕ್ ಅನ್ನು ಹೊಂದಿದೆ.ಹೊಟ್ಟೆ ಆರೋಗ್ಯವಾಗಿ ಇದ್ದಾರೆ ಮೆದುಳಿನ ಅರೋಗ್ಯ ಕೂಡ ಚೆನ್ನಾಗಿ ಇರುತ್ತದೆ. ಕರುಳಿನಲ್ಲಿರುವ ಸೂಕ್ಷ್ಮಾಣುಜೀವಿಗಳು ಹಾಗೂ ಮೆದುಳಿನ ನಡುವೆ ಒಂದು ಬಂಧನ ಇದೆ. ಕರುಳಿನಲ್ಲಿರುವ ಸೂಕ್ಷ್ಮಾಣುಜೀವಿಗಳು ರಾಸಾಯನಿಕವನ್ನು ಪ್ರೊಡ್ಯೂಸ್ ಮಾಡುತ್ತವೆ. ಇದು ಮೆದುಳಿಗೆ ಪ್ರಯೋಜನಕಾರಿಯಾಗಿದೆ. ಇವುಗಳನ್ನು ಸೈಕೋ ಬಯೋಟಿಕ್ ಎಂದು ಕರೆಯುತ್ತಾರೆ.

ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟರಿಯಗಳು ಪ್ರೊಡ್ಯೂಸ್ ಮಾಡುವಂತಹ ರಾಸಾಯನಿಕಗಳನ್ನು ಅದು ಮೆದುಳಿಗೆ ಸಹಾಯ ಮಾಡುವ ರಾಸಾಯನಿಕಗಳನ್ನು ಸೈಕೋ ಬಯೋಟಿಕ್ಸ್ ಎಂದು ಕರೆಯುತ್ತಾರೆ.ಕರುಳಿನಲ್ಲಿ 49 ಹಾರ್ಮೋನ್ ಗಳು ಪ್ರೊಡ್ಯೂಸ್ ಆಗಿ ನಂತರ ಮೆದುಳಿಗೆ ಹೋಗುತ್ತದೆ. ಇದು ನಿದ್ರೆಗೆ ಅನುಕೂಲಮಾಡಿಕೊಡುತ್ತದೆ. ಇದರಿಂದ ಏಕಾಗ್ರತೆ,ಮನಸ್ಥಿತಿಯನ್ನು ಕೂಡ ಚೆನ್ನಾಗಿ ಇಡುತ್ತದೆ.ಆದಷ್ಟು ಆರೋಗ್ಯಕರವಾದ ಆಹಾರವನ್ನು ಸೇವನೆ ಮಾಡಿ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಿ. ಇದರಿಂದ ನಿಮ್ಮ ಮೆದುಳಿನ ಆರೋಗ್ಯ ಕೂಡ ಚೆನ್ನಾಗಿರುತ್ತದೆ ಮತ್ತು ನಿದ್ದೆ ಕೂಡ ಚೆನ್ನಾಗಿ ಆಗುತ್ತದೆ.ಅದರಲ್ಲೂ ಇನೂಲಿನ್ ಅನ್ನು ಬೆಳಗ್ಗೆ ಮತ್ತು ರಾತ್ರಿ ಒಂದು ಚಮಚ ಒಂದು ಗ್ಲಾಸ್ ನೀರಿಗೆ ಹಾಕಿ ತೆಗೆದುಕೊಳ್ಳುವುದರಿಂದ ಕರುಳಿನಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಯಾಗುತ್ತದೆ ಮತ್ತು ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ.

ಮಲಗುವುದಕ್ಕೆ ಕಡ್ಡಿ ಚಾಪೆ ಉತ್ತಮ

ಮಲಗುವುದಕ್ಕೆ ಚಾಪೆ, ಹುಲ್ಲು, ಹತ್ತಿಯಿಂದ ಮಾಡಿದ ತಡಿ ಅಥವಾ ಹಾಸಿಗೆಯಲ್ಲಿ ಮಲಗುವುದು ಉತ್ತಮ.ಇನ್ನು ಮಲಗುವುದಕ್ಕೆ ದಿಂಬು ಬೇಕು ಅದರೆ ಕಿವಿಯಿಂದ ನಿಮ್ಮ ಭುಜದವರೆ ಅಳತೆ ಇರುವ ದಿಂಬುವನ್ನು ಬಳಸಬೇಕು.ಮಲಗಿದಾಗ ನಿಮ್ಮ ತಲೆ ಸಮಾನವಾಗಿ ಇರಬೇಕು ಮತ್ತು ಯಾವುದೇ ಕಾರಣಕ್ಕೂ ಬೆಂಡ್ ಆಗಬಾರದು.ಈ ಅಳತೆಯ ದಿಂಬನ್ನು ಬಳಸುವುದು ಸೂಕ್ತ.

ಯಾವ ರೀತಿ ಮಲಗಿದರೆ ಉತ್ತಮ..?

ಯಾವಾಗಲು ತುಂಬಾ ಹೆದರುವವರು, ಅಂಜಿಕೆ ಸ್ವಭಾವ ಇರುವವರು ಮಕಾಡೆ ಮಲಗುತ್ತಾರೆ.ಅಂದರೆ ಹೊಟ್ಟೆಯನ್ನು ಕೆಳಗೆ ಹಾಕಿ ಮಲಗುತ್ತಾರೆ.ಇನ್ನು ರೋಗಿಗಳು, ಉಸಿರಾಟದ ಸಮಸ್ಸೆ ಇರುವವರು, ಹೊಟ್ಟೆ ಇರುವವರು ಅಂಗತಾ ಮಲಗುತ್ತಾರೆ. ಸಂಸಾರಿಗಳು ಎಡ ಬದಿಗೆ ಮಲಗಬೇಕು.ಇನ್ನು ಸನ್ಯಾಸಿಗಳು, ವೈರಾಗ್ಯ ಹೊಂದಿದವರು ಬಲ ಭಾಗದಲ್ಲಿ ಮಲಗಬೇಕು.

ಇನ್ನು ದೇಹದಲ್ಲಿ ಉಷ್ಟ ಜಾಸ್ತಿ ಇರುವವರು ಬಲ ಭಾಗಕ್ಕೆ ಮಲಗಬೇಕು.ಈ ರೀತಿ ಮಲಗಿದರೆ ದೇಹಕ್ಕೆ ತಂಪನ್ನು ಕೊಡುತ್ತದೆ.ಇನ್ನು ಕಫ, ಶೀತದ ಸಮಸ್ಸೆ ಇರುವವರು ಎಡ ಭುಜವನ್ನು ನೆಲಕ್ಕೆ ತಾಗುವಂತೆ ಮಲಗಬೇಕು.ಈ ರೀತಿ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಿ.

Leave a Comment