10 ಜನವರಿ 2024 ವರ್ಷದ ಮೊದಲ ಅಮಾವಾಸ್ಯ. ಕೇವಲ ಬಿಲ್ವ ಪತ್ರೆ ಎಲೆಯಿಂದ ಈ ಮಹಾ ಉಪಾಯವನ್ನು ಮಾಡಿರಿ. ನೀವು ಯೋಚನೆ ಮಾಡಿದ ಎಲ್ಲ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಈ ಅಮಾವಾಸ್ಯಯೊಂದು ಪೂರ್ವಜರು ಭೂಮಿ ಮೇಲೆ ಬಂದು ತಮ್ಮ ಕುಟುಂಬದವರಿಗೆ ಆಶೀರ್ವಾದವನ್ನು ನೀಡಿ ಹೋಗುತ್ತಾರೆ.
ಜನವರಿ 10 ರಂದು ರಾತ್ರಿ 8:10 ಕ್ಕೆ ಆರಂಭವಾಗಿ ಜನವರಿ 11 ರಂದು ಸಂಜೆ 5:26 ರವರೆಗೆ ಇರುತ್ತದೆ. ಇನ್ನು ಅಮಾವಾಸ್ಯೆ ದಿನ ಸ್ನಾನದ ಬ್ರಹ್ಮ ಮುಹೂರ್ತದ ಸಮಯ ಮುಂಜಾನೆ 5:57 ನಿಮಿಷದ ಹಿಡಿದುಕೊಂಡು ಮುಂಜಾನೆ 6:21 ನಿಮಿಷದವರೆಗೆ ಇರುತ್ತದೆ.ಈ ಸಮಯದಲ್ಲಿ ಸ್ನಾನ ಮಾಡುವುದು ಉತ್ತಮವಾಗಿರುತ್ತದೆ.
ಇಲ್ಲಿ ಅಭಿಜಿತ್ ಮುಹೂರ್ತವು ಮಧ್ಯಾಹ್ನ 12:08 ನಿಮಿಷದಿಂದ 12:50 ನಿಮಿಷದವರೆಗೆ ಇರುತ್ತದೆ. ಇನ್ನು ಗೊದೂಳಿ ಮುಹೂರ್ತವು ಸಂಜೆ 5:40 ನಿಮಿಷ ಹಿಡಿದುಕೊಂಡು ಸಂಜೆ 6:07 ನಿಮಿಷದವರೆಗೆ ಇರುತ್ತದೆ. ಈ ಸಮಯವು ಕೂಡ ಅತ್ಯಂತ ಉತ್ತಮವಾಗಿರುತ್ತದೆ.
ಅಮಾವಾಸ್ಯೆ ದಿನ ಶಿವಲಿಂಗ ಪೂಜೆ ಮಾಡುವುದು ಅತ್ಯಂತ ಶ್ರೇಷ್ಠ ಎಂದು ಹೇಳಲಾಗಿದೆ.ಮುಂಜಾನೆ ಬೇಗ ಎದ್ದು ತಾಮ್ರದ ಪಾತ್ರೆಯಿಂದ ಶುದ್ಧ ನೀರನ್ನು ಸೂರ್ಯನಿಗೆ ಅರ್ಪಿಸಬೇಕು. ಪಿತ್ರರರಿಗೋಸ್ಕರ ದರ್ಪಣ ಮತ್ತು ಉಪವಾಸವನ್ನು ಮಾಡಿರಿ. ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ನೀಡಿ. ಸಂಜೆ ಅರಳಿ ಮರದ ಕೆಳಗಡೆ ದೀಪವನ್ನು ಕಂಡಿತವಾಗಿ ಹಚ್ಚಬೇಕು. ಈ ಅಮಾವಾಸ್ಯೆ ದಿನ ಬಿಲ್ವ ಪತ್ರೆ ಎಲೆಯನ್ನು ಕಟ್ ಮಾಡಬಾರದು. ಅಮಾವಾಸ್ಯೆ ಶುರು ಆಗುವ ಮುನ್ನವೇ ಬಿಲ್ವ ಪತ್ರೆ ಎಲೆಯನ್ನು ತೆಗೆದುಕೊಂಡು ಬಂದು ಇಟ್ಟುಕೊಳ್ಳಬೇಕು. ಅಮಾವಾಸ್ಯೆ ಮುಂಜಾನೆ ಎದ್ದು ಬಿಲ್ವ ಪತ್ರೆ ಮೇಲೆ ಓಂ ನಮಃ ಶಿವಾಯ ಎಂದು ಬರೆದು ಶಿವ ಲಿಂಗಕ್ಕೆ ಅರ್ಪಿಸಿರಿ. ಈ ಉಪಾಯದಿಂದ ಕಾಲ ಸರ್ಪ ದೋಷ ಕೂಡ ಕಡಿಮೆ ಆಗುತ್ತದೆ.