ನೋಡಲು ದುಂಡಗೆ ಕಾಣುವ ಅಂಜೂರದ ಹಣ್ಣು ಆರೋಗ್ಯಕ್ಕೆ ಹಲವಾರು ಲಾಭಗಳನ್ನು ಕೊಡುತ್ತದೆ. ಆದರೆ ಇದರ ಬಗ್ಗೆ ಅಷ್ಟಾಗಿ ಮಾಹಿತಿ ಜನರಿಗೆ ಇಲ್ಲ. ಹಾಗಾಗಿ ನಾವು ಈ ಲೇಖನದಲ್ಲಿ ಅಂಜೂರದ ಹಣ್ಣಿನ ಪ್ರಯೋಜನಗಳ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.
ಹಾಗೆ ತಿನ್ನುವುದಕ್ಕಿಂತ ರಾತ್ರಿ ಹೊತ್ತು ಒಂದೆರಡು ಅಂಜೂರ ಹಣ್ಣುಗಳನ್ನು ನೀರಿನಲ್ಲಿ ನೆನೆ ಹಾಕಿ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಸೇವನೆ ಮಾಡಿದರೆ ಆರೋಗ್ಯಕ್ಕೆ ಅದ್ಭುತ ಲಾಭಗಳು ಸಿಗುತ್ತವೆ. ಇದರಿಂದ ನಿಮಗೆ ಉತ್ತಮ ಪ್ರಯೋಜನಗಳು ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೆಲವರು ಅಂಜೂರದ ಹಣ್ಣಿನ ಜೊತೆ ಬಾದಾಮಿ ಮತ್ತು ವಾಲ್ನಟ್ ಗಳನ್ನು ಸಹ ನೆನೆ ಹಾಕುತ್ತಾರೆ. ಅಂಜೂರ ನೆನೆಸಿದ ನೀರು ಕುಡಿಯುವುದರ ಲಾಭಗಳು
ಜನನಾಂಗ ವ್ಯವಸ್ಥೆಗೆ ಉತ್ತಮ—ಅಂಜೂರದ ಹಣ್ಣು ತನ್ನಲ್ಲಿ ಅಪಾರವಾದ ಖನಿಜಾಂಶಗಳನ್ನು ಒಳಗೊಂಡಿದ್ದು, ಎಲ್ಲವೂ ನಿಮಗೆ ಸಮತೋಲನವಾಗಿ ಸಿಗುತ್ತದೆ.ಅಂದರೆ ಉದಾಹರಣೆಗೆ ಜಿಂಕ್, ಮ್ಯಾಂಗನೀಸ್, ಮೆಗ್ನೀಷಿಯಂ, ಕಬ್ಬಿಣ ಹೀಗೆ. ಇವೆಲ್ಲವೂ ಸಹ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಹೇಳಿ ಮಾಡಿಸಿದಂತಿವೆ.
ಅಂಜೂರದ ಹಣ್ಣು ತನ್ನಲ್ಲಿ ಹೆಚ್ಚಿನ ಆಂಟಿಆಕ್ಸಿಡೆಂಟ್ ಮತ್ತು ನಾರಿನ ಅಂಶವನ್ನು ಸಹ ಒಳಗೊಂಡಿದ್ದು, ವಿಶೇಷವಾಗಿ ಮಹಿಳೆ ಯರಿಗೆ ಮುಟ್ಟಿನ ನಂತರದ ಹಾಗೂ ಹಾರ್ಮೋನ್ ತೊಂದರೆ ಗಳಿಗೆ ಹೆಚ್ಚು ಸಹಾಯ ಆಗುತ್ತದೆ. ಋತುಬಂಧದ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳಿಗೆ ಇದು ರಾಮಬಾಣ.
ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿರ್ವಹಣೆ—-ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಉತ್ತಮವಾಗಿ ನಿರ್ವಹಣೆ ಮಾಡಬಲ್ಲ ಗುಣಲಕ್ಷಣ ಅಂಜೂರದ ಹಣ್ಣಿನಲ್ಲಿ ಕಂಡು ಬರುತ್ತದೆ. ಏಕೆಂದರೆ ಇದರಲ್ಲಿ ಪೊಟ್ಯಾಶಿಯಂ ಪ್ರಮಾಣ ಜಾಸ್ತಿ ಇದೆ.ಇದು ಬ್ಲಡ್ ಶುಗರ್ ಲೆವೆಲ್ ಕಡಿಮೆ ಆಗುವಂತೆ ಮಾಡುತ್ತದೆ. ಯಾರು ಈಗಾಗಲೇ ಟೈಪ್ 2 ಮಧುಮೇಹದಿಂದ ಬಳಲುತ್ತಿ ರುತ್ತಾರೆ, ಅಂತಹ ವರಿಗೆ ಅಂಜೂರದ ಹಣ್ಣು ನೀರಿನಲ್ಲಿ ನೆನೆ ಹಾಕಿ ಸೇವಿಸುವುದು ತುಂಬಾ ಒಳ್ಳೆಯದು. ನಿಮ್ಮ ಆಹಾರ ಪದ್ಧತಿಯಲ್ಲಿ ಓಟ್ಸ್ ಜೊತೆಗೆ ಅಂಜೂರದ ಹಣ್ಣನ್ನು ಸಹ ಸೇರಿಸಿಕೊಳ್ಳಬಹುದು.
ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡುತ್ತದೆ–ಬಹಳಷ್ಟು ಜನರಿಗೆ ಹೊಟ್ಟೆಗೆ ಹಾಗೂ ಕರುಳಿಗೆ ಸಂಬಂಧ ಪಟ್ಟಂತೆ ಸಮಸ್ಯೆಗಳು ಇದ್ದೇ ಇರುತ್ತದೆ. ಕರುಳಿನ ಚಲನೆ ಸರಿಯಾಗಿ ನಡೆಯದೆ ಇರುವುದರಿಂದ ಜೀರ್ಣಾಂಗ ವ್ಯವಸ್ಥೆ ಕೆಟ್ಟುಹೋಗುತ್ತದೆ ಮತ್ತು ಮಲಬದ್ಧತೆ ಸಮಸ್ಯೆ ಎದುರಾಗುತ್ತದೆ.ಅಂತಹವರಿಗೆ ಅಂಜೂರದ ಹಣ್ಣನ್ನು ರಾತ್ರಿ ನೆನೆ ಹಾಕಿ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಅದರ ನೀರನ್ನು ಕುಡಿಸಿದರೆ ಸರಾಗವಾಗಿ ಮಲವಿಸರ್ಜನೆ ಆಗುತ್ತದೆ ಮತ್ತು ತುಂಬಾ ದಿನ ಗಳಿಂದ ಇರುವ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
ಚರ್ಮದ ಆರೋಗ್ಯಕ್ಕೆ ಒಳ್ಳೆಯದು–ರಾತ್ರಿ ಅಂಜೂರದ ಹಣ್ಣನ್ನು ನೆನೆಸಿದ ನೀರನ್ನು ಬೆಳಗ್ಗೆ ಕುಡಿಯುವುದರಿಂದ ನಮ್ಮ ದೇಹದಿಂದ ವಿಷಕಾರಿ ಅಂಶಗಳು ದೂರವಾಗುತ್ತವೆ.ಇದರಿಂದ ನಮ್ಮ ಚರ್ಮದ ಕಾಂತಿ ಹೆಚ್ಚಾಗುತ್ತದೆ ಮತ್ತು ನಮ್ಮ ಹಲವು ಬಗೆಯ ಚರ್ಮದ ಸಮಸ್ಯೆಗಳು ಇಲ್ಲವಾಗುತ್ತದೆ. ಹೀಗಾಗಿ ನಿಮ್ಮ ಸೌಂದರ್ಯ ಹೆಚ್ಚಾಗುತ್ತದೆ.
ತೂಕ ಕಡಿಮೆ ಆಗುತ್ತದೆ—ಇತ್ತೀಚಿನ ದಿನಗಳಲ್ಲಿ ತಮ್ಮ ದೇಹದ ತೂಕವನ್ನು ಇಳಿಸಿ ಕೊಳ್ಳಲು ಜನರು ಸಾಕಷ್ಟು ಹರಸಾಹಸ ಪಡುತ್ತಾರೆ. ಇದಕ್ಕಾಗಿ ಡಯಟ್ ಪದ್ಧತಿ ಮತ್ತು ವ್ಯಾಯಾಮ ಅನುಸರಿಸುತ್ತಾರೆ.ಆದರೆ ತೂಕವನ್ನು ಕಡಿಮೆ ಮಾಡಲು ನಾರಿನ ಅಂಶದ ಅವಶ್ಯಕತೆ ಹೆಚ್ಚಾಗಿರುತ್ತದೆ. ಅಂಜೂರದ ಹಣ್ಣು ನಮಗೆ ಅಗತ್ಯ ವಾದ ನಾರಿನ ಅಂಶವನ್ನು ಕೊಡುತ್ತದೆ. ಆದರೆ ಇದನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸಬೇಕು. ತೂಕ ಇರುವವರು ಇದನ್ನು ಹೆಚ್ಚಾಗಿ ಸೇವಿಸಿದರೆ ಮತ್ತೆ ತೂಕ ಹೆಚ್ಚು ಮಾಡಿ ಕೊಳ್ಳುವ ಸಾಧ್ಯತೆ ಇರುತ್ತದೆ.
ಹೃದಯಕ್ಕೆ ಒಳ್ಳೆಯದು—ಅಂಜೂರದ ಹಣ್ಣು ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಮಾತ್ರ ತೆಗೆದು ಹಾಕುತ್ತದೆ ಎಂದುಕೊಳ್ಳಬೇಡಿ. ಇದು ನಮ್ಮ ದೇಹದ ಫ್ರೀ ರಾಡಿಕಲ್ ಅಂಶಗಳನ್ನು ಸಹ ಇಲ್ಲವಾಗಿಸುತ್ತದೆ. ಇದರಿಂದ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ ಮತ್ತು ಹೃದಯಕ್ಕೆ ಸಂಬಂಧಪಟ್ಟ ತೊಂದರೆಗಳು ಎದುರಾಗುವುದಿಲ್ಲ.
ರಕ್ತದ ಒತ್ತಡ ಕಡಿಮೆಯಾಗುತ್ತದೆ–ಆಂಟಿ ಆಕ್ಸಿಡೆಂಟ್ ಅಂಶಗಳು ಅಂಜೂರದ ಹಣ್ಣಿನಲ್ಲಿ ಹೇರಳ ವಾಗಿ ಕಂಡುಬರುವುದರಿಂದ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡುತ್ತದೆ ಮತ್ತು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.ಇದರಿಂದ ಹೃದಯದ ರಕ್ತನಾಳಗಳು ಸಹ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ಸಹ ಇದು ಕಡಿಮೆ ಮಾಡಬಲ್ಲದು. ಹೀಗಾಗಿ ಇಂತಹ ಒಂದು ಆರೋಗ್ಯ ಕರವಾದ ಹಣ್ಣನ್ನು ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಳ್ಳಬಹುದು.