ಒಂದು ಅದ್ಭುತ ಚಮತ್ಕಾರಿ ಮನೆಯ ಮದ್ದು.. ಎಲ್ಲರಿಗೂ ತಿಳಿದಿದ್ದರೂ,ಯಾರೂ ಬಳಸುವುದಿಲ್ಲ; ಬಹಳ ಜನರಿಗೆ ಬಹಳಷ್ಟು ಅಮೂಲ್ಯ ವಸ್ತುಗಳು ಕಸವಾಗಿ ಕಾಣಿಸುವುದು ಬೇಸರದ ಸಂಗತಿ. ಸ್ನೇಹಿತರೆ ನೀವೆಲ್ಲಾ ಮನೆಗೆ ಎಳನೀರು ತಂದೇ ತರುತ್ತೀರಿ,ಕುಡಿದೇ ಕುಡಿಯುತ್ತೀರಿ.
ಇದೇ ಎಳನೀರಲ್ಲಿ ನೀಮಗೆ ಎಲ್ಲರಿಗೂ ಅಗತ್ಯವಾಗಿ ಬೇಕಾಗುವ ಒಂದು ಚಮತ್ಕಾರಿ ಮನೆಯ ಮದ್ದು ಕೂಡಾ ಅಡಗಿದೆ. ಬಹಳ ಜನ ಬಲ್ಲವರೂ ಇರಬಹುದು,ಬಲ್ಲವರಾಗಿ ಬಳಸಲು ತಾತ್ಸಾರವಾಗಿ ಕಾಣುತ್ತಿರೋ ಏನೋ?
ಸ್ನೇಹಿತರೆ, ಏಳನೀರು ಸಂಪೂರ್ಣ ಆರೋಗ್ಯಕರ ವಾದ ಪ್ರಕೃತಿ ನೀಡಿದ ಅಮೃತವೇ ಸರಿ.ಈ ತೆಂಗಿನ ಒಂದು ಮರವೆಂದರೇ? ಒಬ್ಬ ಬದುಕಿರುವ ಮನುಷ್ಯ ನಿಗಿಂತಲೂ ಹೆಚ್ಚು ಎನ್ನಬಹುದು.ಎಷ್ಟೊಂದು ಜನರಿಗೆ ಎಷೋ ಕಾಲದ ತನಕ ಆಹಾರವಾಗಿ ಸಿಗುವ ಒಂದಾದರೂ ಕಲ್ಪವೃಕ್ಷ ಮನೆಯಮುಂದೆ ಇದ್ದರೆ? ಚಂದವೂ, ಪೂಜ್ಯವೂ, ಆರೋಗ್ಯವೂ ಹೌದು.
ಸರಿ, ಈ ಒಂದು ಸರಳ ಮನೆಮದ್ದು ನಿಮ್ಮ ಅತಿಯಾದ ಗ್ಯಾಸ್ಟ್ರಿಕ್ ಸಮಸ್ಯೆಗೆ ತಕ್ಷಣದ ಪರಿಹಾರ ನೀಡುವುದು.ಒಂದು ನಿಮಿಷ ಈ ವಿಡಿಯೋ ಮಾಹಿತಿ ನಿಮಗಾಗಿ. ನೋಡಿ, ಮಾಡಿ,ಬಳಸಿ… ವೀಕ್ಷಣೆ ಗೆ ಧನ್ಯವಾದಗಳು.