ಸಹಜವಾಗಿ ವಯೋವೃದ್ಧರ ಸಮಸ್ಯೆ ಮೂತ್ರದ ಬಿಕ್ಕಟ್ಟು, ಕೆಲವೊಮ್ಮೆ ಎಂಥಹ ಸಮಸ್ಯೆಗೆ ತಂದು ಒಡ್ಡುತ್ತದೆ ಎಂದರೆ? ಸಂಪೂರ್ಣ ದಿನ ಮೂತ್ರವಾಗದೆ ಕಾಲಿನ ಊತ ಹಾಗೂ ಕಿಬ್ಬೋಟ್ಟೆ ನೋವು ಯಮ ಯಾತನೆಯನ್ನ ನೀಡುವೂದುಂಟು…
ಕೇವಲ ವಯೋವೃದ್ಧರ ಸಮಸ್ಯೆ ಇದಲ್ಲ ಚಿಕ್ಕ ಮಕ್ಕಳಲ್ಲಿ ಇಂದಿನ ದಿನದಲ್ಲಿ ಎಲ್ಲರಲ್ಲೂ ಕಾಣ ಬಹುದೇನೋ? ಹಾಗಾದರೇ, ಈ ಸಮಸ್ಯೆಗೆ ತಕ್ಷಣ ಪರಿಹಾರ ಸಿಕ್ಕು, ಮೂತ್ರವೂ ಸರಾಗವಾಗಿ , ಕಿಬ್ಬೊಟ್ಟೆ ನೋವು ಕಡಿಮೆಯಾಗಿ,ಕಾಲಿನ ಬಾವೂ ಇಳಿಯಬೇಕಾದರೆ? ಮನೆಯ ಮದ್ದು ಏನು ಮಾಡಬಹುದು ಬಲ್ಲಿರಾ?
ನಿಮಗೆಲ್ಲಾ ಚಿರಪರಿಚಿತ ಇರುವ ಈ ಊಟದ ಎಲೆಯಾಗಿ ಬಳಸುವ, ಪಲಾಶ,ಮುತ್ತುಗದ ಮರದ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ಇದು ಇಂದು ನಿನ್ನೆಯಿಂದ ಬಳಕೆಯಲ್ಲಿ ಇರುವುದಲ್ಲ, ಬಹಳ ಪುರಾತನ ಕಾಲದಿಂದಲೂ ಬಳಕೆಯಲ್ಲಿ ಇರುವಂತಹದ್ದು, ಎಷ್ಟೊಂದು ಔಷಧೀಯ ಗುಣ ಹೊಂದಿದೆ ಎಂದರೆ? ಬಳಸಿದವರಿಗೆ ಗೊತ್ತು ಅಮೃತದ ಮಹತ್ವ ಎಂಬಂತೆ ಅದರಲ್ಲಿ ಊಟ ಮಾಡಿದರೂ ಆರೋಗ್ಯ ಕರ.
ಈಗ ಮೂತ್ರ ಬಿಕ್ಕಟ್ಟಿಗೆ ಇದೇ ಪಲಾಶದ ಬಹಳ ಸರಳ,ಸುಲಭ ಮನೆಮದ್ದು ಬಳಸಿ, ತಕ್ಷಣ ಕಡಿಮೆ ಮಾಡಿಕೊಳ್ಳಲು ಇಲ್ಲಿ ನಿಮಗೆ ಮಾಹಿತಿ ನೀಡಿದ್ದೇನೆ.ಖಂಡಿತಾ ಎಲ್ಲರೂ ಇದರ ಬಗ್ಗೆ ತಿಳಿದುಕೊಳ್ಳಿ, ಹಾಗೇ ಅಗತ್ಯ ಇರುವವರಿಗೆ ತಿಳಿಸಿ ಕೂಡಾ.
ಧನ್ಯವಾದಗಳು