ಹೆಂಡತಿ ನಾಚಿಕೆ ಬಿಟ್ಟು ಈ ಕೆಲಸ ಮಾಡಿದರೆ ಹಣ ಹುಡುಕಿ ಬರುತ್ತೆ!

ಸನಾತನ ಧರ್ಮದಲ್ಲಿ 5 ರೀತಿಯ ದಾನಗಳ ಬಗ್ಗೆ ಕುರಿತು ವಿವರಿಸಲಾಗಿದೆ.ಶಿಕ್ಷಣ ಭೂಮಿ ಕನ್ಯೆ ಹಸು ಮತ್ತು ಆಹಾರ ದಾನವನ್ನು ಯಾವಾಗಲು ಯೋಗ್ಯರಿಗೆ ನೀಡಬೇಕು. ಸಾಮಾನ್ಯವಾಗಿ ವಿದ್ಯಾ ದಾನವನ್ನು ಗುರುಗಳು ಅರ್ಹ ಹಾಗು ನಿರ್ಗತಿಕರಿಗೆ ನೀಡುತ್ತಾರೆ.ಜ್ಞಾನದಿಂದ ಒಳ್ಳೆಯ ಗುಣಗಳು ಹೆಚ್ಚಾಗುತ್ತವೆ. ಇದರಿಂದ ಸಮಾಜ ಮತ್ತು ವಿಶ್ವ ಕಲ್ಯಾಣ ಆಗುತ್ತದೆ.ಚಾಣಕ್ಯ ಪ್ರಕಾರ ದಾನವನ್ನು ಅರ್ಹ ವ್ಯಕ್ತಿಗೆ ಮಾತ್ರ ನೀಡಬೇಕು. ಆಗ ಮಾತ್ರ ಆ ದಾನವು ಉತ್ತಮ ಮತ್ತು ಅರ್ಥಪೂರ್ಣ ಅಂತಾ ಪರಿಗಣಿಸಲಾಗಿದೆ.

ಇನ್ನು ತುಪ್ಪವನ್ನು ದಾನ ಮಾಡುವುದರಿಂದ ಅರೋಗ್ಯ ವೃದ್ಧಿಯಾಗುತ್ತದೆ. ತುಪ್ಪದಿಂದ ಮಾಡಿದ ಪದಾರ್ಥವನ್ನು ಕೂಡ ದಾನ ಮಾಡಬಹುದು.

ಇನ್ನು ಕುಂಬಳಕಾಯಿಯನ್ನು ದಾನವಾಗಿ ಕೊಡುವುದರಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.ಎಳ್ಳನ್ನು ದಾನ ಮಾಡುವುದರಿಂದ ಅನಾರೋಗ್ಯ ಸಮಸ್ಸೆಯಿಂದ ಮುಕ್ತಿ ಪಡೆಯಬಹುದು. ಅರೋಗ್ಯವಂತರಾಗಿ ಶಕ್ತಿವಂತರಾಗಿ ಇರಬಹುದು.

ಭೂಮಿಯನ್ನು ದಾನ ಮಾಡುವುದರಿಂದ ಸಮಾಜದಲ್ಲಿ ಗೌರವ ಸಿಗುವುದರ ಜೊತೆಗೆ ದೇವರ ಕೃಪೆಗು ಆತ ಪಾತ್ರನಾಗುತ್ತಾನೆ.ಯೋಗ್ಯನಿಗೆ ಕನ್ಯಾ ದಾನ ಮಾಡುವುದರಿಂದಲೂ ಕೂಡ ಸುಖ ಸಂತೋಷ ಅಭಿವೃದ್ಧಿ ನೆಮ್ಮದಿ ಹಾಗು ಮನಸ್ಶಾಂತಿ ಪ್ರಾಪ್ತಿಯಾಗುತ್ತದೆ.

ಶಾಸ್ತ್ರಗಳಲ್ಲಿ ಹಣ್ಣುಗಳ ದಾನವನ್ನು ಬಹಳ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಮಾವಿನ ದಾನ ಬಹಳ ಒಳ್ಳೆಯದು.ಏಕೆಂದರೆ ಇದು ಸೂರ್ಯನಿಗೆ ಸಂಬಂಧಿಸಿದೆ.ಹಿತ್ತಾಳೆ ವಸ್ತುಗಳನ್ನು ದಾನ ಮಾಡುವುದಕ್ಕೂ ಕೂಡ ಬಹಳ ಶ್ರೇಷ್ಠ ಅದರಲ್ಲೂ ಹುಣ್ಣಿಮೆ ದಿನ ಹಿತ್ತಾಳೆ ವಸ್ತುಗಳನ್ನು ದಾನ ಮಾಡುವುದು ಸೂಕ್ತ.

ಹುಣ್ಣಿಮೆ ದಿನ ಬೆಳ್ಳಿ ನಾಣ್ಯಗಳನ್ನು ಬಡವರಿಗೆ ಭಿಕ್ಷೆ ಬೇಡುವವರಿಗೆ ನೀಡಬೇಕು. ಇದರಿಂದ ಹಲವಾರು ರೀತಿಯ ಸಮಸ್ಸೆಗಳು ನಿವಾರಣೆ ಆಗುತ್ತವೆ.ಶುಕ್ರವಾರದ ದಿನ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯುವುದಕ್ಕೆ ಲಕ್ಷ್ಮಿ ದೇವಿಯನ್ನು ಪೂಜಿಸುವಾಗ ಸುಮಂಗಲಿಯರು ಬಳಸುವ ವಸ್ತುಗಳನ್ನು ಆಕೆಯ ಮುಂದೆ ಇಡಬೇಕು. ನಂತರ ಮದುವೆಯಾದ ಮಹಿಳೆಯರಿಗೆ ಆ ವಸ್ತುಗಳನ್ನು ದಾನವಾಗಿ ನೀಡಬೇಕು. ಹೀಗೆ ಮಾಡುವುದರಿಂದ ಅದೃಷ್ಟ ಮತ್ತು ಅರೋಗ್ಯ ಸದಾ ನಿಮ್ಮ ಜೊತೆ ಇರುತ್ತದೆ. ಜೊತೆಗೆ ಮನೆಯಲ್ಲಿ ಹಣ ಮತ್ತು ಆಹಾರದ ಕೊರತೆ ಎಂದಿಗೂ ಎದುರು ಆಗುವುದಿಲ್ಲ.

ಬಾಗಿನ ಕೊಡುವಾಗ ಸೀರೆ ಸೆರಗಿನಿಂದ ಮರದ ಬಾಗಿನವನ್ನು ಕೊಡಲಾಗುತ್ತದೆ. ಏಕೆಂದರೆ ಸೀರೆ ಸೆರಗಿನಲ್ಲಿ ಲಕ್ಷ್ಮಿ ದೇವಿ ನೆಲೆಸಿರುತ್ತಾಳೆ.ಅರಿಶಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ. ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ. ಸುಮಂಗಲಿಯರಿಗೆ ಯಾವಾಗಲು ಮುತೈದೆಯಾಗಿರಲಿ ಅನ್ನೋ ಉದ್ದೇಶದಿಂದ ಮೊದಲು ಅರಿಶಿನವನ್ನು ಕೊಡಲಾಗುತ್ತದೆ.

ಸಿಂಧೂರ ದಾನ ಮಾಡುವುದರಿಂದ ಸತಿ ಪತಿ ಕಲಹ ನಿವಾರಣೆ ರೋಗ ನಿವಾರಣೆ, ಋಣ ಬಾದೆ ನಿವಾರಣೆ ಮತ್ತು ಮನೆಯಲ್ಲಿ ಜಗಳ ಒಳ ಜಗಳ ಮಾಂತ್ರಿಕ ದೋಷಗಳು ನಿವಾರಣೆ ಆಗುತ್ತದೆ. ಇದೆ ಕಾರಣಕ್ಕೆ ಶ್ರೀ ಆಂಜನೇಯ ಸ್ವಾಮಿಗೆ ಕೇಸರಿ ಅಲಂಕಾರವನ್ನು ಮಾಡುವುದು.

ಕಾಡಿಗೆ ದಾನ ಮಾಡುವುದರಿಂದ ಕಣ್ಣಿಗೆ ಸಂಬಂಧಿಸಿದ ದೋಷಗಳು ನಿವಾರಣೆ ಆಗುತ್ತದೆ ಮತ್ತು ದೃಷ್ಟಿ ದೋಷಗಳು ನಿವಾರಣೆ ಆಗುತ್ತದೆ.ವಸ್ತ್ರ ದಾನ ಮಾಡುವುದರಿಂದ ಕುಲ ದೇವತೆ ತೃಪ್ತಿಯಾಗುತ್ತರೆ. ಸುಮಂಗಲಿ ದೋಷ ನಿವಾರಣೆ ಆಗುತ್ತದೆ. ದಾನವಾಗಿ ಪಡೆದ ವಸ್ತ್ರವನ್ನು ಎಂದಿಗೂ ಬೇರೆಯವರಿಗೆ ದಾನವಾಗಿ ನೀಡಬಾರದು.

ಫಲ ದಾನ ಮಾಡುವುದರಿಂದ ನಿಮ್ಮ ಕಾರ್ಯಗಳು ಯಶಸ್ವಿಯಾಗುತ್ತದೆ ಹಾಗು ಲಾಭದಾಯಕವಾಗುತ್ತದೆ. ಸ್ತ್ರೀ ಶಾಪ ನಿವಾರಣೆ ಆಗುತ್ತದೆ. ಗುರು ಪೂಜೆ ಮಾಡಿ ಹಣ್ಣು ದಾನ ಮಾಡಿದರೆ ಗುರು ದೋಷಗಳು ಕೂಡ ನಿವಾರಣೆ ಆಗುತ್ತದೆ.ತೊಗರಿ ಬೆಳೆ ದಾನ ಮಾಡುವುದರಿಂದ ಕುಜ ದೋಷ ನಿವಾರಣೆ ಆಗುತ್ತದೆ ಮತ್ತು ಸತಿ ಪತಿ ಕಲಹ ಕೂಡ ನಿವಾರಣೆ ಆಗುತ್ತದೆ. ತೋಗರಿ ಬೆಳೆ ಸೇವನೆ ಮಾಡಿದರೆ ಧೈರ್ಯ ಜಾಸ್ತಿ ಇರುತ್ತದೆ.

ಪತ್ನಿ ಪ್ರತಿ ರಾತ್ರಿ ಮಲಗುವ ಮುನ್ನ ತನ್ನ ಗಂಡನ ಕಾಲನ್ನು ತಪ್ಪದೆ ಒತ್ತಬೇಕು. ಇದರಿಂದ ಶ್ರೀಮನ್ ನಾರಾಯಣ ಮತ್ತು ಲಕ್ಷ್ಮಿ ಮಾತೇ ಅನುಗ್ರಹ ಸಿಗುತ್ತದೆ.

Leave a Comment