ಫ್ಯಾಷನ್ ಫ್ರೂಟ್/ಶರಬತ್ತು ಹಣ್ಣು..

ಎಂಥಹ ಉಪಯುಕ್ತ ಹಣ್ಣು ಎಂದರೇ, ಇತ್ತಿಚೆಗೆ ಇದರ ಮಹತ್ವಗಳು ಎಲ್ಲೆಡೆ ತಿಳಿಸಲಾಗುತ್ತಿದೆ, ಹಾಗೇ ಅದರ ಬೆಲೆ ಕೂಡಾ ಏರುತ್ತಿದೆ.ಇಂಥಹ ಹಣ್ಣನ್ನು ನೀವು ಹೇಗೆಲ್ಲಾ ಉಪಯೋಗಿಸುತ್ತೀರಿ?ಯಾವ ಕಾರಣಕ್ಕೆ ,ಹಾಗೇ ಹೇಗೆಲ್ಲಾ ಬಳಸ ಬಹುದು,ಯಾರಿಗೆ ಹೆಚ್ಚು ಇದು ಉಪಯುಕ್ತ ವಾಗಿದೆ ಎಂಬ ಸಂಪೂರ್ಣ ಮಾಹಿತಿ ನೋಡಿ, ಮಾಡಿ ಬಳಸಿ..

ಹೇರಳವಾದ ಜೀವಸತ್ವ ತುಂಬಿದ ಈ ಹಣ್ಣು ಹೆಚ್ಚು ಪ್ರಚಾರದಲ್ಲಿ ಇಲ್ಲ,ಹೆಚ್ಚು ಇದಕ್ಕೆ ಪ್ರಚಾರ ಸಿಗುವಂತೆ ಆಗಲಿ,ಹಣ್ಣಿನಲ್ಲಿ ಸಿಗುವ ಹೇರಳವಾದ ಬೀಜಗಳು ಎಲ್ಲರ ಮನೆಯ ತೋಟದಲ್ಲಿ ಬಳ್ಳಿ ಹಬ್ಬಿ ಹಣ್ಣುಗಳ ನೀಡಲಿ..

ಯಾವುದೇ ಹಣ್ಣಾಗಲಿ ಸಂಪೂರ್ಣ ಬಲಿತು ಹಣ್ಣಾದಾಗ ಸೇವಿಸಿದರೇ ಸಂಪೂರ್ಣ ಜೀವಸತ್ವ ಸಿಗುವುದು ಹಾಗೂ ಆರೋಗ್ಯಕರ, ರುಚಿಕರವೂ ಆಗಿರುತ್ತದೆ. ಈ ಪೇಟೆಯಲ್ಲಿ ಸಿಗುವ ಹೆಚ್ಚಿನ ಹಣ್ಣುಗಳು ಮುಕ್ಕಾಲು ಭಾಗ ಬಲಿತಾಗ ತೆಗೆದು ಹಣ್ಣಾಗಿಸಿ ಮಾರುಕಟ್ಟೆಗೆ ತರುವುದರಿಂದ,ಹೆಚ್ಚಾಗಿ ಸೇವಿಸಿದ ಕೂಡಲೇ ಗಂಟಲು ಕೆರೆತ,ಶೀತ,ಕೆಮ್ಮು,ಕಫ ಉಂಟಾಗುತ್ತದೆ. ಎಷ್ಟು ಅಪಾಯಕಾರಿ ಎಂದರೇ?ಮಕ್ಕಳಿಗೂ, ವಯೋವೃದ್ಧರಿಗೆ ತಿನ್ನಿಸಿ ಫುಡ್ ಪಾಯಿಸನ್ ಆದರೇ?ಎಷ್ಟು ಕಷ್ಟ ಅಲ್ಲವೇ? ಆದಷ್ಟು ಮನೆಯ ಸುತ್ತ ಸ್ಥಳ ಇರುವವರು ಹೀಗೆ ಗಿಡಗಳನ್ನ ಬೆಳಸಿ ಆಯಾಯಾ ಕಾಲಮಾನಕ್ಕೆ ಸಿಕ್ಕ ಹಣ್ಣುಗಳನ್ನ ಸೇವಿಸಿದರೇ, ಬಹಳ ಉತ್ತಮ.ಪರಿಸರ ಸಂರಕ್ಷಣೆ,ನಮ್ಮ ಆರೋಗ್ಯ ರಕ್ಷಣೆ ಎಲ್ಲವೂ ಆದಂತೆ ಸರಿ.

ಈಗ ಫ್ಯಾಷನ್ ಫ್ರೂಟ್ ನ ಜೀವಸತ್ವಗಳು ಮುಖ್ಯ ವಾಗಿ ಅದರ ರಸ,ತಿರುಳು,ಹಾಗೂ ಅದರ ಸಿಪ್ಪೆ ಕೂಡಾ ಅಮೃತ ವೇ ಆಗಿದೆ .ಇದು ಶುಗರ್,ಬಿಬಿ, ಕೊಲೆಸ್ಟ್ರಾಲ್ ನವರಿಗೆ ಮುಖ್ಯ ವಾಗಿ ಸೇವಿಸಲು ನೀಡಬೇಕು.ಎಲ್ಲರೂ ಸೇವಿಸಲು ಬಹಳ ಉತ್ತಮವಾದ ಹಣ್ಣಾಗಿದೆ.ಹೆಸರೇ ಹೇಳಿದಂತೆ ಶರಬತ್ತು,ಪಾನಕಕ್ಕೆ ತುಂಬಾ ರುಚಿಯಾಗಿದೆ.ರಸವನ್ನ ಶೇಕರಣೆಮಾಡಿಯೂ ಬಳಸ ಬಹುದು. ಎಲ್ಲವೂ ನಮ್ಮ ದೇಹಕ್ಕೆ ಅಮೃತ ವಾಗಬೇಕಾದರೇ?ಸೇವಿಸುವ ಕ್ರಮ ಬಹಳ ಮುಖ್ಯ ಹಿತ ಮಿತ ವಾಗಿ ಸೇವಿಸುವುದು ಜೀವಾಮೃತ ವಾಗಲು ಸಹಕಾರಿ..ನೋಡಿ,ಮಾಡಿ ಬಳಸಿ..ಈ ವಿಶೇಷ ಮಾಹಿತಿ ನಿಮಗೂ ತಿಳಿದಿರಲಿ.

ಧನ್ಯವಾದಗಳು

Leave a Comment