ನಿಮ್ಮ ಮನೆಯಲ್ಲಿ ಯಾರಾದರೂ ಸಕ್ಕರೆ ಕಾಯಿಲೆ ಬರುತ್ತಿರುವವರು ಇದ್ದರೆ ಅಥವಾ ಒಂದು ವೇಳೆ ನಿಮಗೆ ಡಯಾಬಿಟಿಸ್ ಇದ್ದರೆ, ನೀವು ಸೇವಿಸುವ ಆಹಾರ ಪದ್ಧತಿಯ ಬಗ್ಗೆ ಸ್ವಲ್ಪ ಕಾಳಜಿ ಇರಲಿ. ಏಕೆಂದರೆ ತುಂಬಾ ಜನರಿಗೆ ಆಹಾರ ಸೇವನೆ ಮಾಡಿದ ತಕ್ಷಣ ರಕ್ತದಲ್ಲಿ ಸಕ್ಕರೆ ಪ್ರಮಾಣದ ಏರಿಕೆ ಕಾಣುತ್ತದೆ.
ಮೆಂತ್ಯ ಕಾಳುಗಳು ಅಥವಾ ಮೆಂತ್ಯ ಸೊಪ್ಪು
ನೀವು ಸೇವಿಸಿದ ಆಹಾರದಲ್ಲಿ ಕಂಡು ಬರುವ ಸಕ್ಕರೆ ಅಂಶವನ್ನು ಜೀರ್ಣ ಪ್ರಕ್ರಿಯೆ ಸಂದರ್ಭದಲ್ಲಿ ನಿಧಾನವಾಗಿ ಹೀರಿಕೊಳ್ಳುವಂತೆ ಮಾಡುವುದರ ಜೊತೆಗೆ ನಿಮ್ಮ ಪ್ಯಾಂಕ್ರಿಯಾಸ್ ಭಾಗದಿಂದ ಇನ್ಸುಲಿನ್ ಉತ್ಪತ್ತಿಯನ್ನು ಹೆಚ್ಚಾಗುವಂತೆ ಮಾಡುವ ಸಾಮರ್ಥ್ಯ ಇದರಲ್ಲಿದೆ.
ಹೀಗಾಗಿ ಸಕ್ಕರೆ ಕಾಯಿಲೆ ಇರುವವರು ಆಗಾಗ ಮೆಂತ್ಯ ಸೊಪ್ಪು ಬಳಸಿ ಅಡುಗೆ ಮಾಡಿ ಸವಿಯುವುದು ಉತ್ತಮ. ಖಾಲಿ ಹೊಟ್ಟೆಯಲ್ಲಿ ನೆನೆಸಿದ ಮೆಂತ್ಯ ಕಾಳುಗಳನ್ನು ಮತ್ತು ಅದರ ನೀರನ್ನು ಸಹ ಸೇವಿಸುವುದು ಇನ್ನು ಒಳ್ಳೆಯದು.
ನುಗ್ಗೆ ಸೊಪ್ಪು
ನುಗ್ಗೆ ಸೊಪ್ಪು ಸಕ್ಕರೆ ಕಾಯಿಲೆ ಇರುವವರಿಗೆ ಬಹಳ ಒಳ್ಳೆಯದು. ಏಕೆಂದರೆ ಇದರಲ್ಲಿ ನೈಟ್ರಿಕ್ ಆಮ್ಲವನ್ನು ಕಡಿಮೆ ಮಾಡುವ ಗುಣವಿದೆ. ಜೊತೆಗೆ ಗ್ಲುಕೋಸ್ ಅಂಶವನ್ನು ನಿಯಂತ್ರಣ ಕೂಡ ಮಾಡುತ್ತದೆ. ಹೀಗಾಗಿ ವಾರದಲ್ಲಿ ಎರಡು ಬಾರಿ ನುಗ್ಗೆ ಸೊಪ್ಪಿನ ಆಹಾರ ಪದಾರ್ಥ ಗಳನ್ನು ತಯಾರಿಸಿ ಸೇವಿಸುವುದು ಉತ್ತಮ.
ಕರಿಬೇವಿನ ಸೊಪ್ಪು
ಕರಿಬೇವಿನ ಸೊಪ್ಪು ರಕ್ತದಲ್ಲಿನ ಗ್ಲೂಕೋಸ್ ಅಂಶವನ್ನು ಸ್ಥಿರಗೊಳಿಸಿ ಮಧುಮೇಹವನ್ನು ನಿಯಂತ್ರಣದಲ್ಲಿ ಇಡುತ್ತದೆ.ಕರಿ ಬೇವಿನ ಸೊಪ್ಪಿನಲ್ಲಿ ವಿಟಮಿನ್, ಬೀಟಾ – ಕ್ಯಾರೋಟಿನ್ ಮತ್ತು ಕಾರ್ಬಾಝೋಲ್ ಅಲ್ಕಲಾಯ್ಡ್ ಗಳೆಂಬ ಆಂಟಿ – ಆಕ್ಸಿಡೆಂಟ್ ಗಳಿದ್ದು ಮನುಷ್ಯನ ದೇಹದಲ್ಲಿ ಫ್ರೀ ರಾಡಿಕಲ್ ಗಳಿಂದ ಆಕ್ಸಿಡೇಟೀವ್ ಡ್ಯಾಮೇಜ್ ಉಂಟು ಮಾಡುವ ಹಲವಾರು ಕಾಯಿಲೆಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಟೈಪ್ – 2 ಮಧುಮೇಹದ ಪ್ರಭಾವವನ್ನು ತಡೆಯುತ್ತದೆ. ಅಷ್ಟೇ ಅಲ್ಲದೆ ಕರಿ ಬೇವಿನ ಸೊಪ್ಪಿನಲ್ಲಿ ನಾರಿನ ಅಂಶ ಹೇರಳವಾಗಿದೆ. ಸಹಜವಾಗಿಯೇ ನಾರಿನ ಅಂಶ ಮನುಷ್ಯನ ದೇಹದಲ್ಲಿ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಬೇಗನೆ ಮೆಟಬಾಲಿಸಂ ಪ್ರಕ್ರಿಯೆಗೆ ಅವಕಾಶ ಕೊಡದೆ ದೇಹದ ರಕ್ತದಲ್ಲಿನ ಸಕ್ಕರೆ ಅಂಶವನ್ನು ಸುಲಭವಾಗಿ ಜೀರ್ಣವಾಗಲು ಬಿಡುವುದಿಲ್ಲ.
ಸೀಬೆ ಎಲೆ-ಪೇರಳೆ ಎಲೆಗಳು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದ್ದು ರಕತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಎಲೆಗಳ ನೀರನ್ನು ಕುಡಿದರೆ ಇದರ ಪರಿಣಾಮ ದೇಹದಲ್ಲಿ ದೀರ್ಘಕಾಲ ಉಳಿಯುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ.