ಹಾಲು ಪ್ರತಿಯೊಬ್ಬರ ಮನೆಯಲ್ಲಿ ಪ್ರತಿದಿನ ಬಳಸುತ್ತೇವೆ. ಚಿಕ್ಕ ಮಕ್ಕಳಿಂದ ಇಡಿದು ದೊಡ್ಡವವರೆಗು ಹಾಲು ಬೇಕೇ ಬೇಕು. ಅದರಲ್ಲೂ ಬೆಳಗ್ಗೆ ಎದ್ದ ತಕ್ಷಣ ಸ್ಟ್ರಾಂಗ್ ಆದ ಗಟ್ಟಿ ಹಾಲಿನ ಕಾಫಿ ಟೀ ಕುಡಿಯುವುದೇ ಒಂದು ಮಜಾ. ಅದರೆ ಕೆಲವೊಮ್ಮೆ ಮನೆಯಲ್ಲಿ ಹಾಲು ಹಾಳಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ಹಾಲು ಒಡೆದಿದ್ದರೆ ಈ ಒಂದು ಸೂಪರ್ ಟಿಪ್ಸ್ ಅನ್ನು ಅನುಸರಿಸಿ. ಈ ಟಿಪ್ಸ್ ತಿಳಿದರೆ ಇನ್ನು ಯಾವತ್ತು ಒಡೆದ ಹಾಲನ್ನು ನೀವು ಚೆಲ್ಲುವುದಿಲ್ಲ.
ಕೆಲವೊಮ್ಮೆ ರಾತ್ರಿ ಹಾಲು ಬಿಸಿ ಮಾಡುವುದಕ್ಕೆ ಮರೆಯುತ್ತೇವೆ. ಹಾಗಾಗಿ ಒಡೆದ ಹಾಲಿಗೆ ಚಿಟಿಕೆ ಅಡುಗೆ ಸೋಡಾವನ್ನು ಸೇರಿಸಿ ಗ್ಯಾಸ್ ಆನ್ ಮಾಡಬೇಕು. ಈ ರೀತಿ ಮಾಡಿದರೆ ಹಾಲು ಒಡೆಯುವುದಿಲ್ಲ. ಇದನ್ನು ನೀವು ಬಿಸಿ ಮಾಡಿ ಟೀ ಕಾಫಿ ಗೆ ಬಳಸಬಹುದು.
ಈ ಹಾಲನ್ನು ಹಾಗೆ ಬೇಕಾದರೂ ಕುಡಿಯಬಹುದು. ಹಾಲು ಸ್ಮೆಲ್ ಕೂಡ ಬರುವುದಿಲ್ಲ ಮತ್ತು ರುಚಿ ಕೂಡ ಕೆಡುವುದಿಲ್ಲ. ಹಾಲು ಬಿಸಿ ಮಾಡಿದ ತಕ್ಷಣವೇ ಬಳಸಬೇಕಾಗುತ್ತದೆ. ಈ ರೀತಿ ಮಾಡಿದರೆ ಉಳಿತಾಯ ಮತ್ತು ವೇಸ್ಟ್ ಆಗುವುದು ತಪ್ಪುತ್ತದೆ.