ತುಳಸಿಯಲ್ಲಿ ಕೇವಲ ರೋಗನಾಶಕ ಮಾತ್ರವಲ್ಲ. ತೊಂದರೆಗಳಿಂದ ರಕ್ಷಣೆ ಮಾಡುವ ರಕ್ಷಕ ಕೂಡ. ತುಳಸಿ ಎದುರಾಗುವ ದೋಷಗಳ ಬಗ್ಗೆ ಮುನ್ಸೂಚನೆಯನ್ನು ಕೊಡುತ್ತದೆ. ಇಂತಹ ತುಳಸಿಯನ್ನು ಹಿಂದೂ ಧರ್ಮದಲ್ಲಿ ಲಕ್ಷ್ಮಿ ರೂಪ ಎಂದು ಪರಿಗಣಿಸಲಾಗಿದೆ. ತುಳಸಿ ಗಿಡವನ್ನು ನಿಯಮಿತವಾಗಿ ಪೂಜಿಸುವುದರಿಂದ ವ್ಯಕ್ತಿಗೆ ಸಂಪತ್ತು ಮತ್ತು ಅದೃಷ್ಟ ಬರುತ್ತದೆ ಹಾಗೂ ಮರಣ ನಂತರ ಮೋಕ್ಷ ಪ್ರಾಪ್ತಿ ಆಗುತ್ತದೆ.
ಧರ್ಮಗ್ರಂಥಗಳಲ್ಲಿ ತುಳಸಿ ಸಸ್ಯವನ್ನು ರೋಗ ವಿನಾಶಖ ಎಂದು ವಿವರಿಸಲಾಗಿದೆ.ಎಲ್ಲಾ ತೊಂದರೆಗಳಿಂದ ವ್ಯಕ್ತಿಯನ್ನು ರಕ್ಷಣೆ ಮಾಡುವ ರಕ್ಷಕ ಎಂದು ಹೇಳಲಾಗಿದೆ.ವಾಸ್ತುವಿನಲ್ಲಿ ತುಳಸಿ ಗಿಡಕ್ಕೆ ವಿಶೇಷವಾದ ಮಹತ್ವವಿದೆ.ತುಳಸಿ ತಕ್ಷಣ ಒಣಗುವುದು ಮನೆಗೆ ಒಳ್ಳೆಯದಲ್ಲ. ಸಾಮಾನ್ಯವಾಗಿ ಚಳಿಗಾಲದಲ್ಲಿ ತುಳಸಿಗಿಡ ಇದ್ದಕ್ಕಿದ್ದಂತೆ ಒಣಗಿ ಹೋಗುತ್ತದೆ. ಆದರೆ ಹಸಿರಾಗಿ ಇದ್ದ ತುಳಸಿ ಸಸ್ಯ ಇದ್ದಕ್ಕಿದ್ದಂತೆ ಒಣಗಿದರೆ ಅದು ಭವಿಷ್ಯದ ಕೆಲವು ಸಮಸ್ಸೆಗಳನ್ನು ಸೂಚಿಸುತ್ತದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ತುಳಸೀಗಿಡ ಬುಧ ಗ್ರಹಕ್ಕೆ ಸಂಬಂಧಪಟ್ಟಿದೆ. ಬುಧ ಗ್ರಹದ ಪ್ರಭಾವದಿಂದ ತುಳಸಿಗಿಡ ಒಣಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ. ತುಳಸಿ ಗಿಡ ಒಣಗಿದರೆ ಅದನ್ನು ಶುಭದ ಸಂಕೇತ ಎಂದು ಕೂಡ ಪರಿಗಣಿಸಲಾಗುವುದಿಲ್ಲ.
ಕೆಲವೊಮ್ಮೆ ಪಿತೃದೋಷ ಇದ್ದಾಗ ತುಳಸಿ ಗಿಡ ಒಣಗಿ ಹೋಗುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ತುಳಸಿಗಿಡ ಒಣಗಿ ಹೋಗುತ್ತಿದ್ದರೆ ನಿಮ್ಮ ಮನೆಯಲ್ಲಿ ಯಾರಾದರೂ ಪಿತೃದೋಷ ವನ್ನು ಅನುಭವಿಸುತ್ತಿದ್ದಾರೆ ಎಂದು ಅರ್ಥ. ತುಳಸಿ ಗಿಡದ ಸುತ್ತ ಹಕ್ಕಿಗಳು ಗೂಡುಗಳನ್ನು ಕಟ್ಟಿದರೆ ಜಾತಕದಲ್ಲಿ ಕೇತುವಿನ ಸ್ಥಾನ ಅದಗೆಟ್ಟಿದೆ ಎಂದು ಅರ್ಥ. ಇದಕ್ಕೆ ಸಮಯಕ್ಕೆ ಸರಿಯಾಗಿ ಕ್ರಮಗಳನ್ನು ಕೈಗೊಳ್ಳಿ.ಯಾವುದೇ ಕಾರಣಕ್ಕೂ ತುಳಸಿ ಗಿಡವನ್ನು ಮನೆಯ ಟೆರೆಸ್ ಮೇಲೆ ಇಡಬಾರದು. ಇದರಿಂದ ಕುಂಡಲಿಯಲ್ಲಿ ಬುಧನ ಸ್ಥಾನ ದುರ್ಬಲವಾಗುತ್ತದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಕೂಡ ಹದಗೆಡುವ ಸಾಧ್ಯತೆ ಇದೆ.