ಪ್ರತಿದಿನ ಪೂಜೆಗೆ ನೈವೇದ್ಯ ಇಡಬೇಕಾ :ಪ್ರತಿದಿನ ಪೂಜೆಗೆ ನಿಮಗೆ ಅನುಕೂಲ ಇದ್ದರೆ ಸಮಯ ಇರುತ್ತದೆ ಎಂದರೆ ನೈವೇದ್ಯ ಮಾಡಿ ಇಡಬಹುದು ಅಥವಾ ಕಲ್ಲು ಮತ್ತು ಸಕ್ಕರೆ ಹಾಲು ಬೆಲ್ಲ ಡ್ರೈ ಫ್ರೂಟ್ಸ್ ಅಥವಾ ಯಾವುದಾದರು ಒಂದು ಹಣ್ಣನ್ನು ನೈವೇದ್ಯವಾಗಿ ಇಡಬಹುದು. ದೇವರ ಮನೆಯಲ್ಲಿ ಯಾವಾಗಲು ಪಂಚಾಪಾತ್ರೆ ಯಲ್ಲಿ ತೀರ್ಥವನ್ನು ಇಟ್ಟಿರಿ.
ದೇವರ ಮನೆಯಲ್ಲಿ ಎಲ್ಲಾ ದೇವರಿಗೆ ಒಂದೊಂದು ತಟ್ಟೆಯಲ್ಲಿ ನೈವೇದ್ಯ ಇಡುವ ಅವಶ್ಯಕತೆ ಇಲ್ಲಾ. ಎಲ್ಲಾ ದೇವರಿಗೆ ಒಂದೇ ನೈವೇದ್ಯ ಇಟ್ಟರೆ ಸಾಕು. ನೈವೇದ್ಯವನ್ನು ಯಾವುದೇ ಕಾರಣಕು ನೆಲದ ಮೇಲೆ ಇಡಬಾರದು. ಒಂದು ತಟ್ಟೆಯಲ್ಲಿ ಬಾಳೆಎಲೆ ಹಾಕಿ ನೈವೇದ್ಯ ಇಡಬಹುದು ಅಥವಾ ತಟ್ಟೆಯಲ್ಲಿ ಇಟ್ಟು ಇಡಬಹುದು. ಬಾಳೆಹಣ್ಣನ್ನು ಎರಡು ಜೊತೇಲೆ ಇಟ್ಟು ನೈವೇದ್ಯ ಮಾಡಿದರೆ ಒಳ್ಳೆಯದು ಹಾಗು ಸುಮಂಗಲಿಯರಿಗೆ ಇದೆ ರೀತಿ ಎರಡು ಬಾಳೆಹಣ್ಣು ಇಟ್ಟು ಕೊಟ್ಟರೆ ಒಳ್ಳೆಯದು.
ದೇವರಿಗೆ ಒಡೆದ ತೆಂಗಿನಕಾಯಿಯನ್ನು ಸಿಹಿ ಮಾಡಿ ತಿನ್ನಿ ಅಥವಾ ಬೇರೆ ಸಸ್ಯಹಾರಿ ಅಡುಗೆ ಮಾಡಿ ತಿನ್ನಬಹುದು. ಒಂದು ಸರಿ ದೇವರಿಗೆ ಅರ್ಪಿಸಿದ ತೆಂಗಿನಕಾಯಿಯಿಂದ ಮತ್ತೆ ನೈವೇದ್ಯ ಮಾಡಿ ದೇವರಿಗೆ ಅರ್ಪಿಸಬಾರದು