ಸ್ನೇಹಿತರೆ ಕೂದಲಿನ ಹಲವಾರು ಸಮಸ್ಯೆಗೆ ನಿಜವಾಗಿ ನಾವು ಮಾಡಿಕೊಳ್ಳಬೇಕಾದ ಸರಳ ಮನೆಮದ್ದು.ಸರಳ ಉಪಾಯ ಈ ದಿನ ತಿಳಿಸುತ್ತಿದ್ದೇನೆ. ಇದು ನಾನು ಸ್ವತಃ ಕಂಡುಕೊಂಡ ಮಾರ್ಗ. ನನ್ನ ಮಗಳ ಬಾಣಂತನ ದಲ್ಲಿ ತಲೆಯ ಕೂದಲು ಸಂಪೂರ್ಣ ಉದುರಿ ಹೋಗಿತ್ತು.ಮರಳಿ ಬರಬಹುದೆಂಬ ಕಲ್ಪನೆ ಕೂಡಾ ಇರಲಿಲ್ಲ.
ಮರಳಿ ಕೂದಲಿನ ಕಾಳಜಿಗೆ ಮಾಡಿಕೊಳ್ಳ ಬೇಕು ಎಂದು ಅನಿಸಿದ್ದೆ ಯೂಟ್ಯೂಬ್ ಚಾನೆಲ್ ಪ್ರಾರಂಭ ಮಾಡಿದ ಮೇಲೆ. ಬಹಳಷ್ಟು ನನ್ನ ಸ್ವಂತ ಅನುಭವ ಮನೆಮದ್ದು, ಸಲಹೆಗಳನ್ನು ನೀಡಲು ಬಯಸಿದಾಗ ಈ ಒಂದು ಪ್ರಯೋಗ ಮಾಡಲು ಪ್ರಾರಂಭ ಮಾಡಿ ಆರು ತಿಂಗಳ ಕಾಲ ಕೂದಲಿನ ಆರೈಕೆ ಹೀಗೆ ಮಾಡಿಕೊಂಡ ಮೇಲೆ ನೋಡಿ ನನ್ನ ಕೂದಲು ಸೊಂಪಾಗಿ ಬೆಳೆದಿದೆ. ಪ್ರತಿ ತಿಂಗಳ ಪೋಟೋ ಹಾಗೂ ಕೂದಲ ಬೆಳವಣಿಗೆಯ ಮಾಹಿತಿ ಕೂಡಾ ನನ್ನ ಬಳಿ ಇದೆ.
ಇಂದು ನೀಡುತ್ತಿರುವ ಮಾಹಿತಿ ಎಲ್ಲರೂ ಸಂಪೂರ್ಣ ತಿಳಿದುಕೊಂಡು ಕ್ರಮ ತಪ್ಪದೇ ಮಾಡಿಕೊಂಡರೇ ಖಂಡಿತಾ ಫಲ ಉಂಟು. ಉದಾಸೀನ ಮಾಡಿದರೇ ಫಲ ಇಲ್ಲ.ಪ್ರಯತ್ನಕ್ಕೆ ಫಲ ಖಂಡಿತಾ ಉಂಟು.ಉದಾ :-ನಾನೆ ನಿಮ್ಮ ಮುಂದೆ ಇದ್ದೇನೆ.
ಇನ್ನೂ ಹಲವಾರು ಮನೆಮದ್ದು ಗಳಿವೆ ಅವುಗಳನ್ನು ನಾನು ಸೌಂದರ್ಯ ಸಲಹೆಗಳಲ್ಲಿ ಬಳಸಿ ಯಶಸ್ಸು ಕಂಡಿದ್ದೇನೆ.ಅದನ್ನೇ ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತೇನೆ.
ಯಾರಿಗೆಲ್ಲಾ ಆಸಕ್ತಿ ಇದೆ, ವಾಚಶ್ವಿನಿ ಬ್ಯೂಟಿ ಟಿಪ್ಸ್ ಫಾಲೋ ಮಾಡಿ.ಇವು ಸೈಡ್ ಎಫೆಕ್ಟ್ಸ್ ಇರದ ಆರೋಗ್ಯ ಕರ ಮಾದರಿ.ಸಾವಿರಾರು ರೂಪಾಯಿ ಕೊಟ್ಟು ಕೊಂಡು ತರುವ ತೈಲಗಳು ಕೂಡಾ ಸುಮ್ಮನೆ ದಂಡವಾಗಿ ಹೋಗುತ್ತದೆ.ಅವು ನಿಮಗೆ ಸಹಕಾರಿ ಆಗುವುದಿಲ್ಲ.ಆದರೇ, ನಿಜವಾಗಿ ನಮಗೆ ಸರಳ ರೀತಿಯ ಹೆಚ್ಚು ದುಬಾರಿ ಅಲ್ಲದ ಮನೆಯ ಮದ್ದು ಗಳೆ ಸಹಕಾರಿ.ಅದು ಹೇಗೆ ಎಂಬುದನ್ನು ಅರಿತು ಬಳಸಿಕೊಳ್ಳಿ..ಈ ವಿಧಾನ ದಿಂದ ತಲೆಯ ಹೊಟ್ಟು,ಬಿಳಿಕೂದಲು,ಬಾಲನೆರೆ,ಕೂದಲುಉದುರುವುದು,ಕವಲು ಒಡೆಯುವ ಕೂದಲು ಎಲ್ಲಕ್ಕೂ ಸರಳ ಪರಿಹಾರ ಇಷ್ಟೇ ಮಾಡಿ ಸಾಕು.. ನನ್ನ ಹಾಗೇ ನೀವು ಕೂಡಾ ಕೂದಲು ಪಡೆಯಲು ಇದು ಸಹಕಾರಿ…