ನೆಲ ಬಸಳೆ ಸೊಪ್ಪಿನ ದುಷ್ಪರಿಣಾಮ!

ಸ್ನೇಹಿತರೆ, ಬಸಳೆ ಸೊಪ್ಪಿನ ಬಳಕೆ ನಿಮಗೆಲ್ಲಾ ತಿಳಿದಿರುವುದೇ ಆಗಿದೆ.. ಅದರೊಂದಿಗೆ “ನೆಲ ಬಸಳೆ” ಸೊಪ್ಪಿನ ಬಗ್ಗೆ ಒಂದು ಉತ್ತಮ ಮಾಹಿತಿ ನಿಮಗೆ ನೀಡುತ್ತಿದ್ದೇನೆ.ಬಸಳೆ ಸೊಪ್ಪು ಬಹಳಷ್ಟು ಖನಿಜಾಂಶ ಹೊಂದಿದ್ದು ಸಿವಿಟಮಿನ್ ಹೆಚ್ಚು ಸಿಗುವ ಸೊಪ್ಪು. ಮಾರುಕಟ್ಟೆ ಯಲ್ಲಿ ಬಹಳವಾಗಿ ಸಿಗುವ,ದಿನದಿಂದ ದಿನಕ್ಕೆ ಅದರ ಬೆಲೆ ಕೂಡಾ ಏರುತ್ತಿದೆ.. ಅದಕ್ಕಿಂತ ಹೆಚ್ಚು ಜೀವಸತ್ವ ತುಂಬಿರುವ ನೆಲಬಸಲೆ ಗಿಡದ ಮಾಹಿತಿ ಹಾಗೂ ಅದರ ಉಪಯೋಗ ಅದರ ಬಳಕೆಯ ದುಷ್ಪರಿಣಾಮ ಗಳು ಯಾರ ಮೇಲೆ ಹೇಗೆ ಆಗುತ್ತದೆ ಎಂಬ ಬಗ್ಗೆ ಕೂಡಾ ತಿಳಿಸುತ್ತಿದ್ದೇನೆ.

ನೆಲಬಸಳೆಯಲ್ಲಿ ಬಸಳೆ ಸೊಪ್ಪಿನಗಿಂತಲೂ ಅತಿಯಾದ ಜೀವಸತ್ವ, ಖನಿಜಾಂಶಗಳು ಇದರಲ್ಲಿ ಹೇರಳವಾಗಿ ಇದೆ.ಇದನ್ನು ಬೆಳೆಸುವುದು ಬಹಳ ಸುಲಭ ,ಸಣ್ಣ ಗಿಡ ನೆಟ್ಟರು ಹೊಲದಂತೆ ಬಿಡುವ ಈ ನೆಲಬಸಳೆಗಿಡ ನಿಮ್ಮ ಮನೆಯ ಅಂಗಳದಲ್ಲಿ ಇರಲಿ.. ಹಾಗೇ ಇದು ಎಷ್ಟು ಉಪಕಾರಿ? ಹಾಗೇ ಎಷ್ಟು ಅಪಾಯಕಾರಿ ಎಂಬುದನ್ನು ನೀವು ಈ ದಿನ ತಿಳಿಯಲಿದ್ದೀರಿ…ಕೆಲವೊಮ್ಮೆ ಅಮೃತ ಕೂಡಾ ವಿಷ ಎಂಬಂತೆ.. ನೆಲಬಸಳೆಯು ಕೆಲವರಿಗೆ ಬಹಳ ಸಮಸ್ಯೆ ಉಂಟು ಮಾಡಬಲ್ಲದು..ಅದೇನು ಎಂಬುದನ್ನು ಈ ವಿಡಿಯೋ ತುಣುಕಿನಲ್ಲಿ ನೀವು ತಿಳಿಯ ಬಹುದು..

ಈ ನೆಲ ಬಸಳೆ ನೀವು ಬಳಸುವ ನಿತ್ಯ ದ ಬಸಳೆಸೋಪ್ಪಿಗಿಂತಲೂ ಆರೋಗ್ಯ ದಾಯಕವಾಗಿದ್ದಾಗಲೂ ಅದು ಹೇಗೆ ಸಮಸ್ಯೆ ಉಂಟು ಮಾಡಬಲ್ಲದೆಂಬ ಮಾಹಿತಿ ಇಲ್ಲಿ ನೀಡಲಾಗಾದೆ. ಹಳ್ಳಿಗಳಲ್ಲಿ ಅಷ್ಟೇ ಅಲ್ಲದೇ ಪೇಟೆಯ ಸೊಪ್ಪಿನ ಅಂಗಡಿಗಳಲ್ಲೂ ಇದು ಮಾರಲ್ಪಡುತ್ತದೆ. ಇದರ ಬಳಕೆ ಹೇಗೆ ಮಾಡಿದರೇ ಉತ್ತಮ ಎಂಬುದನ್ನು ನೀವು ತಿಳಿದು ಬಳಸಿ..

ನೆಲಬಸಳೆ ಸೊಪ್ಪನ್ನು ದಿನ ನಿತ್ಯ ಹೆಚ್ಚು ಸೇವಿಸಿದರೇ ಖಂಡಿತಾ ಆರೋಗ್ಯ ಕ್ಕೆ ಹಾನಿ ಆಗುವ ಸಾಧ್ಯತೆ ಉಂಟು..ಗರ್ಭಿಣಿ ಸ್ತ್ರೀ ಬಳಸುವಾಗ ಬಹಳ ಎಚ್ಚರ ವಹಿಸಲೇ ಬೇಕು..ಹಾಗೇ ಕಿಡ್ನಿ ಯ ಸಮಸ್ಯೆ ಇರುವವರು ಕೂಡಾ ಆಲೋಚನೆ ಮಾಡಿ ಬಳಸಬೇಕಾದಂತಹ ಸೊಪ್ಪು ಇದು..ಆದರೇ ಹೇಗೆ ಬಳಸಿದರೆ ಆರೋಗ್ಯ ದಾಯಕ ಫಲ ನೀಡುತ್ತದೆ? ಇದನ್ನೆ ನಿಮಗೆ ಈ ವಿಡಿಯೋ ಮೂಲಕ ತಿಳಿಸುತ್ತಿದ್ದೇನೆ.ಸರಳ ಸುಲಭ ಲಾಭದಾಯಕ ಮಾಹಿತಿ ನೋಡಿ..ಬಳಸಿ.. ನಿಮ್ಮ ಮನೆಯ ಅಂಗಳದಲ್ಲಿ ಬೆಳೆಸಿ…

ಧನ್ಯವಾದಗಳು

Leave a Comment