ಹಿಂದೂ ಧರ್ಮದಲ್ಲಿ ತುಳಸಿ ಪೂಜೆಯ ಬಗ್ಗೆ ವಿಶೇಷವಾದ ಮಹತ್ವವಿದೆ. ತುಳಸಿ ಸಸ್ಯವನ್ನು ತಾಯಿ ಲಕ್ಷ್ಮಿ ದೇವಿಯ ಸ್ವರೂಪ ಅಂತಾನೆ ತಿಳಿಯಲಾಗಿದೆ. ಯಾರ ಮನೆಯಲ್ಲಿ ಪ್ರತಿದಿನ ತುಳಸಿ ಪೂಜೆಯನ್ನು ಮಾಡಲಾಗುತ್ತದೆಯೋ ಅಂತಹ ಮನೆಯಲ್ಲಿ ಎಂದಿಗೂ ದುರ್ಭಾಗ್ಯ ಮತ್ತು ದರಿದ್ರ ಬಡತನದ ವಾಸ ಆಗುವುದಿಲ್ಲ. ಅಂತಹ ಮನೆಯಲ್ಲಿ ಯಾವತ್ತಿಗೂ ತಾಯಿ ಲಕ್ಷ್ಮೀದೇವಿಯಾ ವಾಸ ಇರುತ್ತದೆ. ತುಳಸಿ ಪೂಜೆಯನ್ನು ಮಾಡುವುದರಿಂದ ಮೋಕ್ಷದ ಪ್ರಾಪ್ತಿ ಕೂಡ ಆಗುತ್ತದೆ.ಜೊತೆಗೆ ಪಾಪಗಳ ನಾಶ ಕೂಡ ಆಗುತ್ತದೆ. ತುಳಸಿಯು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ನಾಶಮಾಡುತ್ತದೆ ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಸಂಚಾರ ಆಗುವ ರೀತಿ ಮಾಡುತ್ತಾದೆ.
ಪೌರಾಣಿಕ ಮಾಹಿತಿ ಅನುಸಾರವಾಗಿ ದಿನವೂ ತುಳಸೀ ಪೂಜೆಯನ್ನು ಮಾಡುವುದರಿಂದ ಧನ ಸಂಪತ್ತು ವೈಭವ ಸುಖ ಶಾಂತಿಯು ದೊರೆಯುತ್ತದೆ ಮತ್ತು ತಾಯಿ ಲಕ್ಷ್ಮಿ ದೇವಿ ಎಂದಿಗೂ ಅವರ ಕೃಪೆಯನ್ನು ನಿಮ್ಮ ಮೇಲೆ ಇರಿಸುತ್ತಾರೆ.ತುಳಸಿ ಸಸ್ಯ ಇರುವಕಡೆ ಬ್ರಹ್ಮ ವಿಷ್ಣು ಮಹೇಶ್ವರ ವಾಸ ಇರುತ್ತದೆ. ಜೊತೆಗೆ ತುಳಸಿ ಪೂಜೆ ಮಾಡುವುದರಿಂದ ಮಹಾ ಪಾಪಗಳು ನಷ್ಟ ಆಗುತ್ತವೆ. ಈ ಒಂದು ಮಂತ್ರವನ್ನು ತುಳಸಿ ಪೂಜೆ ಮಾಡುವ ಸಮಯದಲ್ಲಿ ಜಪ ಮಾಡಿದರೆ ಕೆಲವೇ ದಿನಗಳ ಒಳಗೆ ನಿಮ್ಮ ಎಲ್ಲ ರೀತಿಯ ತೊಂದರೆಗಳು ದೂರವಾಗುತ್ತವೆ. ನಂತರ ತಾಯಿ ಲಕ್ಷ್ಮೀದೇವಿಯ ವಾಸ ಇರುತ್ತದೆ. ಜೊತೆಗೆ ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ.
ಪ್ರತಿದಿನ ನಿಮ್ಮ ಮನೆಯ ಪೂಜೆಯನ್ನು ಮುಗಿಸಿ. ತುಳಸಿ ಗಿಡದ ಹತ್ತಿರ ಹೋಗಿ ನಮಸ್ಕರಿಸಿ.ನಂತರ ತುಳಸಿ ಸಸ್ಯಕ್ಕೆ ಶುದ್ಧವಾದ ನೀರನ್ನು ಅರ್ಪಿಸಬೇಕು.ನಂತರ ಅರಿಶಿಣ ಕುಂಕುಮವನ್ನು ಹಚ್ಚಬೇಕು.ಇದು ತುಳಸಿಯ ಶೃಂಗಾರ ಆಗುತ್ತದೆ.ನಂತರ ತುಳಸಿ ಗಿಡದ ಹತ್ತಿರ ತುಪ್ಪದ ದೀಪವನ್ನು ಉರಿಸಬೇಕು.ಜೊತೆಗೆ ದೂಪಾ ಆಗರಾಬತ್ತಿಯನ್ನು ಹಚ್ಚಬೇಕು.ನಂತರ ತುಳಸಿ ಕಟ್ಟೆಯನ್ನು 7 ಸುತ್ತು ಸುತ್ತಬೇಕು. ತುಳಸಿ ಹತ್ತಿರ ಕುಳಿತುಕೊಂಡು 11 ಬಾರಿ ಈ ಮಂತ್ರವನ್ನು ಜಪಿಸಬೇಕು.ಮಂತ್ರ ಜಪ ಮಾಡಿದ ನಂತರ ನಿಮ್ಮ ಮನಸ್ಸಿನ ಇಚ್ಛೆಗಳನ್ನು ತುಳಸಿ ಹತ್ತಿರ ಹೇಳಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರುತ್ತದೆ.
ಮಹಾಪ್ರಸಾದ ಜನನಿ ಸರ್ವ ಸೌಭಾಗ್ಯ ವರ್ಧಿನಿ
ಅಧಿ ವ್ಯಾಧಿಹರ ನಿತ್ಯಂ ತುಳಸಿ ತ್ವಂ ನಮೋಸ್ತುತೆ||