ಮನುಷ್ಯರ ಪೂಜೆಯಿಂದ ತಾಯಿ ಎಷ್ಟು ಬೇಗಾ ಒಲಿಯುತ್ತಾಳೋ ಅದು ಅಷ್ಟು ಬೇಗಾನೇ ಸಿಟ್ಟು ಕೂಡ ಮಾಡಿಕೊಳ್ಳುತ್ತಾಳೆ.ಯಾವಾಗ ನವರಾತ್ರಿಯಲ್ಲಿ ಮನುಷ್ಯರು ಇಂತಹ ಅನಿಷ್ಟ ಕಾರ್ಯಗಳನ್ನು ಮಾಡುತ್ತಾರೋ ಆಗ ತಾಯಿಯ ಕೋಪಕ್ಕೆ ಕಾರಣ ಕೂಡ ಆಗುವರು. ನವರಾತ್ರಿಯ 9 ದಿನಗಳಲ್ಲಿ ಯಾರು ಸಹ ಈ ತಪ್ಪುಗಳನ್ನು ಮಾಡಬಾರದು.
1, ಸ್ತ್ರೀಯರ ಅವಮಾನ–ನವರಾತ್ರಿ ಸಮಯದಲ್ಲಿ ಯಾವುದೇ ಕಾರಣಕ್ಕೂ ಯಾವುದೇ ಸ್ತ್ರೀಗೆ ಅವಮಾನ ಮಾಡಬೇಡಿ.ಹಿಂದಿನ ಕಾಲದಲ್ಲಿ ತಾಯಿ ಸ್ತ್ರೀಯಾರನ್ನು ತಾಯಿ ದುರ್ಗಾ ಮಾತೇ ಎಂದು ಅಂದುಕೊಳ್ಳುತ್ತಿದ್ದರು. ಸ್ತ್ರೀಯರು ತಾಯಿ ದುರ್ಗಾ ಮಾತೆಯ ಅಂಶ ಆಗಿರುತ್ತದೆ. ಯಾರು ಯಾವತ್ತಿಗೆ ಸ್ತ್ರೀಯರಿಗೆ ಗೌರವ ಕೊಡುತ್ತಾರೋ ಅವರ ಮೇಲೆ ಯಾವತ್ತಿಗೂ ತಾಯಿ ದುರ್ಗಾ ಮಾತೆಯ ಕೃಪೆ ಇದ್ದೆ ಇರುತ್ತದೆ. ಸ್ತ್ರೀಯರು ತಮ್ಮ ಸ್ವಂತ ಸಂತೋಷಗಳನ್ನು ತ್ಯಾಗ ಮಾಡಿ ನಿಮ್ಮ ಮನೆಯನ್ನು ಸ್ವರ್ಗವನ್ನಾಗಿಸುತ್ತಾರೆ. ಸ್ತ್ರೀಯರು ಉಪವಾಸ ಇದ್ದು ತನ್ನ ಗಂಡನ ಆಯಸ್ಸು ಹೆಚ್ಚಾಗಲಿ ಎಂದು ಬೇಡಿಕೊಳ್ಳುತ್ತಾರೆ. ಜೀವನವಿಡಿ ತಮ್ಮ ಕುಟುಂಬಕ್ಕಾಗಿ ಜೀವನವಿಡಿ ದುಡಿಯುತ್ತಾರೆ. ಇಂತಹ ಪತಿವ್ರತೆ ಸ್ತ್ರೀಯರಿಗೆ ಅವಮಾನ ಮಾಡುವುದು ಎಂದರೆ ಮಹಾಪಾಪಕ್ಕೆ ಸಮಾನವಾಗಿದೆ.
2,ದ್ವಾರದ ಬಳಿ ಬಂದವರಿಗೆ ನೀವು ಅವಮನವನ್ನು ಯಾವುದೇ ಕಾರಣಕ್ಕೂ ಮಾಡಬಾರದು.ಒಂದು ಯಾರಾದರೂ ಭಿಕ್ಷುಕರು ಬಂದರು ಸಹ ಹಾಗೆ ಅವರನ್ನು ಕಳುಹಿಸಬೇಡಿ. ಏನಾದರು ಕೊಟ್ಟು ಕಳುಹಿಸಿ. ಇದರಿಂದ ದುರ್ಗಾ ಮಾತೇ ನಿಮಗೆ ಒಲಿಯುತ್ತಾಳೆ.
3, ನವರಾತ್ರಿ ಸಮಯದಲ್ಲಿ ಯಾವುದೇ ಪ್ರಕಾರದ ಅನಿಷ್ಟವಾದ ಕಾರ್ಯವನ್ನು ಮಾಡಬಾರದು.ಅಂದರೆ ಮೋಸ ಮಾಡುವುದು, ಕಳ್ಳತನ ಮಾಡುವುದು, ಸುಳ್ಳು ಹೇಳುವುದನ್ನು ಮಾಡಬಾರದು.
4, ತಮಾಸಿಕ ಭೋಜನವನ್ನು ಯಾವುದೇ ಕಾರಣಕ್ಕೂ ನವರಾತ್ರಿ ಸಮಯದಲ್ಲಿ ಸೇವನೆ ಮಾಡಬಾರದು. ಮಾಂಸಹಾರ ಮತ್ತು ಮಧ್ಯಾಪನ ಸೇವನೆ ಮಾಡಬಾರದು. ಇದರಲ್ಲಿ ಈರುಳ್ಳಿ ಬೆಳ್ಳುಳ್ಳಿ ಕೂಡ ಸೇವನೆ ಮಾಡಬಾರದು. ಆದಷ್ಟು ನವರಾತ್ರಿ ಸಮಯದಲ್ಲಿ ಸಾತ್ವಿಕ ಭೋಜನವನ್ನು ಮಾಡಿರಿ.
5,ಇನ್ನು ನವರಾತ್ರಿ ಸಮಯದಲ್ಲಿ ಶರೀರಿಕ ಸಂಬಂಧವನ್ನು ಇಟ್ಟುಕೊಳ್ಳಬಾರದು. ನವರಾತ್ರಿ ಸಮಯದಲ್ಲಿ ಬ್ರಹ್ಮಚಾರ್ಯವನ್ನು ವ್ರತದ ಪಾಲನೆ ಮಾಡಿದರೆ ತಾಯಿ ಎಲ್ಲಾವನ್ನು ಈಡೇರಿಸುತ್ತಳೆ.
6, ಯಾವುದೇ ಕಾರಣಕ್ಕೂ ಮನೆಯನ್ನು ಖಾಲಿ ಬಿಡಬಾರದು. ಒಂದು ವೇಳೆ ಮನೆಯಲ್ಲಿ ನವರಾತ್ರಿಯಾ ಕಳಸ ಸ್ಥಾಪನೆ ಮಾಡಿದರೆ ಇಂತಹ ಸ್ಥಿತಿಯಲ್ಲಿ ಮನೆಯನ್ನು ಖಾಲಿ ಬಿಡಬಾರದು. ಮನೆಯಲ್ಲಿ ಯಾರಾದರೂ ಒಬ್ಬರು ಇರಬೇಕು. ನವರಾತ್ರಿ ಸಮಯದಲ್ಲಿ ದೇವಿ ಯಾವಾಗ ಬೇಕಾದರೂ ನಿಮ್ಮ ಮನೆಗೆ ಬರಬಹುದು.ನವರಾತ್ರಿ ಮುಂಜಾನೆ ಸಮಯದಲ್ಲಿ ಯಾವುದೇ ಕಾರಣಕ್ಕೂ ಮಲಗಬಾರದು.
7, ಇನ್ನು ನವರಾತ್ರಿ ಸಮಯದಲ್ಲಿ ತಲೆ ಕೂದಲು ಕಟ್ ಮಾಡುವುದು ಅಥವಾ ಉಗುರು ಕಟ್ ಮಾಡುವುದನ್ನು ಮಾಡಬಾರದು. ಇನ್ನು ಚರ್ಮದಿಂದ ತಯಾರಿಸಿದ ವಸ್ತುವನ್ನು ಬಳಸಬಾರದು. ನವರಾತ್ರಿ ವ್ರತ ಮಾಡುವ ವ್ಯಕ್ತಿಗಳು ಕಠಿಣವಾಗಿ ಈ ನಿಯಮವನ್ನು ಪಾಲನೆ ಮಾಡಬೇಕು.