ಪೂಜೆಗೆ ಬಳಸುವಂತಹ ಹೂವಿನ ಗಿಡವನ್ನು ನೀವೇ ಬೆಳಸಬೇಕು.ನೀವೇ ಬೆಳೆಸಿರುವ ಗಿಡದಲ್ಲಿ ಹೂವನ್ನು ಒಂದೇ ಇಟ್ಟರು ಸಹ ಪೂಜೆ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ.ಒಂದು ವೇಳೆ ಸಾಧ್ಯವಾಗದೆ ಇದ್ದಾರೆ ಕೊಂಡುಕೊಂಡು ಬಳಸಬಹುದು. ಹೂವಿನ ತೊಟ್ಟನ್ನು ತೆಗೆದು ನಂತರ ಅರ್ಚನೆಗೆ ಹೂವನ್ನು ಬಳಸಬೇಕು. ಇನ್ನು ಯಾವುದೇ ಕಾರಣಕ್ಕೂ ಸುವಾಸನೆ ಇಲ್ಲದ ಪುಷ್ಪಗಳನ್ನು ದೇವರ ಪೂಜೆಗೆ ಬಳಸಬಾರದು ಎಂದು ಹೇಳುತ್ತಾರೆ.ಯಾವುದೇ ಕಾರಣಕ್ಕೂ ಬಾಡಿ ಹೋದ ಹೂವನ್ನು ದೇವರಿಗೆ ಮೂಡಿಸಬಾರದು.
ಇನ್ನು ಗಣಪತಿ ದೇವರಿಗೆ ಯಾವುದೇ ಕಾರಣಕ್ಕೂ ತುಳಸಿ ಹಾರವನ್ನು ಅರ್ಪಿಸಬಾರದು.ಅದರ ಬದಲು ಗಣೇಶನಿಗೆ ಗರಿಕೆ ಹೂವನ್ನು ಅರ್ಪಿಸಿ.ಆದಷ್ಟು ಎಕ್ಕೆ ಹೂವು ಕೆಂಪು ದಾಸವಾಳವನ್ನು ದೇವರಿಗೆ ಅರ್ಪಿಸಬೇಕು.
ಇನ್ನು ಭಗವಂತ ಶಿವನಿಗೂ ಕೂಡ ಯಾವುದೇ ಕಾರಣಕ್ಕೂ ತುಳಸಿ ಹಾಗೂ ಸಂಪಿಗೆಯಿಂದ ಪೂಜೆಯನ್ನು ಮಾಡಬಾರದು. ಶಿವನಿಗೆ ಅತ್ಯಂತ ಪ್ರಿಯ ಆಗಿರುವುದು ಬಿಲ್ವಪತ್ರೆ. ಹಾಗಾಗಿ ಶಿವನ ಪೂಜೆ ಮಾಡುವಾಗ ಆದಷ್ಟು ಬಿಲ್ವಪತ್ರೆಯನ್ನು ಅರ್ಪಿಸಿದರೆ ತುಂಬಾನೆ ಒಳ್ಳೆಯದು.
ಇನ್ನು ಪರಮಾತ್ಮನಾದ ವಿಷ್ಣುವಿಗೆ ತುಳಸಿ ಅತ್ಯಂತ ಪ್ರಿಯವಾದದ್ದು. ಹಾಗಾಗಿ ತುಳಸಿ ದಳವನ್ನು ವಿಷ್ಣುದೇವ ರಿಗೆ ಅರ್ಪಿಸಬೇಕು.ಇನ್ನು ಕಣಗಲೇ ಹೂವನ್ನು ವಿಷ್ಣು ದೇವರಿಗೆ ಅರ್ಪಿಸಬಾರದು.
ಇನ್ನು ಹೆಣ್ಣು ದೇವರಿಗೆ ಚೆಂಡುಹೂವನ್ನು ಬಳಸಿ ಪೂಜೆಯನ್ನು ಮಾಡಬಾರದು. ಕಾಳಿಮಾತೆ ಮತ್ತು ಮಾರಮ್ಮ ದೇವರಿಗೆ ಚೆಂಡುಹೂವನ್ನು ಬಳಸಲಾಗುತ್ತದೆ. ಆದರೆ ಲಕ್ಷ್ಮಿ ಸರಸ್ವತಿ ಅಮ್ಮನವರಿಗೆ ಚೆಂಡುಹೂವನ್ನು ಬಳಸಬಾರದು. ಆದಷ್ಟು ಸುಗಂಧಭರಿತ ಹೂಗಳನ್ನು ಅಮ್ಮನವರಿಗೆ ಅರ್ಪಿಸಬೇಕು.
ಇನ್ನೂ ಕಾಲಬೈರೇಶ್ವರ ದೇವರಿಗೆ ಮಲ್ಲಿಗೆ ಹೂವನ್ನು ಅರ್ಪಿಸಬಾರದು.ಇನ್ನು ಸುವಾಸನೆ ಇಲ್ಲದಂತಹ ಹೂಗಳನ್ನು ಕೂಡ ದೇವರಿಗೆ ಅರ್ಪಿಸಬಾರದು.