ಸೊಪ್ಪುಗಳಲ್ಲಿ ವಿಭಿನ್ನವಾಗಿರುವ ಸೊಪ್ಪು ಸಬಸ್ಕೆ ಸೊಪ್ಪು ಈ ಸೊಪ್ಪಿನ ಪ್ರತಿ ಭಾಗವು ಸುವಾಸನೆಯಿಂದ ಕೂಡಿರುತ್ತದೆ. ಇದಕ್ಕಿರುವ ಪರಿಮಳದಿಂದ ಇದು ತುಂಬಾ ವಿಶೇಷತೆಯನ್ನು ಪಡೆದಿದೆ. ಸಪಸ್ಗೆ ಸೊಪ್ಪಿನ ಆರೋಗ್ಯ ಕಾರ್ಯ ಪರಿಣಾಮಗಳಂತು ಹತ್ತು ಹಲವು ಸಬ್ಬಕ್ಕಿ ಸೊಪ್ಪು ಪಚನ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ. ಸಬ್ಬಕ್ಕಿ ಸೊಪ್ಪಿನ ಕಾಳುಗಳನ್ನು ನೀರಿನಲ್ಲಿ ನೆನೆಸಿ ತಿಳಿಯನ್ನು ಗ್ರೇಟ್ ವಾಟರ್ ನಲ್ಲಿ ಬಳಸಲಾಗುತ್ತದೆ. ವಾತ ಶೂಲೆ ವಾಕರಿಕೆ ಮತ್ತು ಬಿಕ್ಕಳಿಕೆ ಅಂತ ರೋಗಗಳಿಗೆ ಇದು ಬಹು ಉಪಯುಕ್ತ.
ಈ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಕಬ್ಬಿಣ ಅಂಶ ಇರುವುದರಿಂದ. ಮಕ್ಕಳು ಮತ್ತು ಬಾಣತಿಯರಿಗೆ ಉತ್ತಮ ಆಹಾರ ಬಾಣತಿಯರಿಗೆ ಎದೆ ಹಾಲು ಹೆಚ್ಚಿಸಲು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಈ ಸೊಪ್ಪನ್ನು ಬಳಸಲಾಗುತ್ತದೆ. ಎದೆ ಹಾಲು ಕಡಿಮೆ ಇದ್ದರೆ . ಸಬ್ಬಸ್ಕೆ ಸೊಪ್ಪಿನ ಸಾರು ಅಥವಾ ಸೂಪ್ ಕುಡಿದರೆ ಹೆಚ್ಚಾಗುತ್ತದೆ .
ಸಬ್ಬಕ್ಕಿ ಸೊಪ್ಪಿನ ರಸಕ್ಕೆ ಜೇನು ತುಪ್ಪ ಬೆರೆಸಿ ಕುಡಿದರೆ ಅಜೀರ್ಣ ಕಡಿಮೆ ಆಗುತ್ತದೆ. ಹೊಟ್ಟೆ ನೋವು ಕಡಿಮೆಯಾಗುತ್ತದೆ. ಸಬ್ಬಸ್ಕೆ ಸೊಪ್ಪು ನರಗಳಿಗೆ ಶಕ್ತಿಯನ್ನು ನೀಡುತ್ತದೆ. ನಿತ್ಯ ಆಹಾರದಲ್ಲಿ ಸಬ್ಬಸ್ಕೆ ಸೊಪ್ಪು ಬಳಸಿದರೆ. ನಿದ್ರೆ ಸಮಸ್ಯೆ ಕಾಡುವುದಿಲ್ಲ. ಅರಿಶಿಣದ ಜೊತೆಗೆ ಸಬ್ಬಸ್ಕೆ ಸೊಪ್ಪನ್ನು ಅರೆದು ಗಾಯದ ಮೇಲೆ ಹಚ್ಚುವುದರಿಂದ ಗಾಯದ ಊತ ನೋವು ಕಡಿಮೆ ಆಗುತ್ತದೆ.
ಈ ಸೊಪ್ಪನ್ನು ನುಣ್ಣಗೆ ಅರೆದು ಚರ್ಮದ ಅಲರ್ಜಿ ಇದ್ದ ಜಾಗಕ್ಕೆ ಲೇಪಿಸಿದರೆ ಅಲರ್ಜಿ ನಿವಾರಣೆ ಆಗುತ್ತದೆ. ನಿದ್ರಾ ಹೀನತೆಯನ್ನು ಈ ಸೊಪ್ಪು ನಿವಾರಿಸುತ್ತದೆ. ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗಿದೆ. ಮಧುಮೇಹ ನಿಯಂತ್ರಣಕ್ಕೂ ಸಬ್ಬಸ್ಕೆ ಸೊಪ್ಪು ಅತ್ಯುತ್ತಮವಾಗಿದೆ. ಸಬ್ಬಸ್ಕೆ ಸೊಪ್ಪು ಬಿಕ್ಕಳಿಕೆಯನ್ನು ತಡೆಯುತ್ತದೆ.ಮೂಳೆಗಳ ಆರೋಗ್ಯವನ್ನು ಇದು ಕಾಪಾಡುತ್ತದೆ.
ಮಾನಸಿಕ ಒತ್ತಡ ನಿಯಂತ್ರಣಕ್ಕೆ ಸಬ್ಬಸ್ಕೆ ಸೊಪ್ಪು ಸಹಕಾರಿಯಾಗಿದೆ.. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅರ್ಥರೈಟಿಸ್ ಸಮಸ್ಯೆ ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಗಳನ್ನು. ಹತೋಟಿಗೂ ತರುತ್ತದೆ. ಉರಿ ಊತವನ್ನು ಕಡಿಮೆ ಮಾಡುತ್ತದೆ. ಹಾರ್ಮೋನ್ ಗಳ ಅಸಮತೋಲನವನ್ನು . ಈ ಸೊಪ್ಪು ಸರಿಪಡಿಸುತ್ತದೆ. ಬಹುಪಾಲು ದೇಶಗಳ ಖಾದ್ಯಗಳಲ್ಲಿ . ಸಬ್ಬಕ್ಕಿಯ ಬೀಜಗಳು ನಾವು ಜೀರಿಗೆಯನ್ನು ಬಳಸುವಂತೆ ಬಳಸುತ್ತಾರೆ.
ಅನೇಕ ದೇಶಗಳಲ್ಲಿ ಸಬ್ಬಸ್ಕೆಯ ಸೊಪ್ಪು ಬೀಜಗಳೆರಡನ್ನು ಟೀ ಮಾದರಿಯ ಪೇ ಯನ್ನು ತಯಾರಿಸುತ್ತಾರೆ. ಒಟ್ಟಿನಲ್ಲಿ ಸಬಸ್ಕೆ ಸೊಪ್ಪು ಹಲವು ರೋಗಗಳಿಗೆ ರಾಮಬಾಣ ವಾಗಿದೆ