ಹೊಟ್ಟೆ ತುಂಬಾ ಬೊಜ್ಜು ತುಂಬಿಕೊಂಡಿದ್ದರೆ ಅದನ್ನು ಕರಗಿಸುವುದು ಹೇಗೆ ಎನ್ನುವ ಚಿಂತೆ ಕಾಡುವುದು ಸಹಜ. ಇಂದಿನ ಜೀವನ ಶೈಲಿ ಮತ್ತು ಆಹಾರ ಕ್ರಮದಿಂದಾಗಿ ಹೆಚ್ಚಿನವರಲ್ಲಿ ಬೊಜ್ಜು ಕಾಣಿಸಿ ಕೊಳ್ಳುವುದು. ಹೊಟ್ಟೆಯಲ್ಲಿ ತುಂಬಿರುವ ಬೊಜ್ಜು ಕಡಿಮೆ ಮಾಡುವುದು ಕಠಿಣ ಕೆಲಸ. ಹೊಟ್ಟೆಯ ಕೊಬ್ಬು ಆರೋಗ್ಯಕ್ಕೆ ತುಂಬಾ ಹಾನಿಕರ. ಇದರಿಂದಾಗಿ ಮಧುಮೇಹದಿಂದ ಹಿಡಿದು ಹೃದಯದ ಸಮಸ್ಯೆ, ನಿದ್ರಾಹೀನತೆ ಮತ್ತು ಕ್ಯಾನ್ಸರ್ ನಂತಹ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿ ಕೊಳ್ಳಬಹುದು. ಹೊಟ್ಟೆಯ ಬೊಜ್ಜು ವ್ಯಕ್ತಿಯೊಬ್ಬನ ಆತ್ಮವಿಶ್ವಾಸ ಕುಗ್ಗಿಸುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಮಧ್ಯಭಾಗದಲ್ಲಿರುವ ಒಳಾಂಗಗಳ ಕೊಬ್ಬು ಹೊಟ್ಟೆಯ ಕೊಬ್ಬಿಗೆ ಪ್ರಮುಖ ಕಾರಣವಾಗಿದೆ ಮತ್ತು ಇದು ತುಂಬಾ ಅಪಾಯಕಾರಿ ಕೂಡ. ಒಳಾಂಗಗಳ ಕೊಬ್ಬು ಹೊಟ್ಟೆಯಲ್ಲಿ ತುಂಬಾ ಆಳವಾಗಿ ಇರುವ ಕೊಬ್ಬು ಮತ್ತು ಚರ್ಮದ ಅಡಿಭಾಗದಲ್ಲಿ, ಕಿಡ್ನಿ ಮತ್ತು ಯಕೃತ್ ನಂತಹ ಕೆಲವೊಂದು ಮಹತ್ವದ ಅಂಗಾಂಗಗಳ ಸುತ್ತಲು ಆವರಿಸಿಕೊಂಡಿರುವುದು. ಹೊಟ್ಟೆ ಕೊಬ್ಬನ್ನ ಇಳಿಸು ವುದರಿಂದ ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ, ಸೌಂದರ್ಯಕ್ಕೂ ತುಂಬಾ ಒಳ್ಳೆಯದು. ಹೊಟ್ಟೆಯು ಸಮತಟ್ಟಾಗಿದ್ದರೆ ಆಗ ಇದು ಚರ್ಮದ ಸೌಂದರ್ಯ ವೃದ್ಧಿಸುವುದು. ಅದೇ ರೀತಿಯಾಗಿ ನಿಮಗೆ ಯಾವುದೇ ರೀತಿಯ ಬಟ್ಟೆ ಧರಿಸಬಹುದು ಮತ್ತು ಆತ್ಮವಿಶ್ವಾಸವನ್ನು ಕೂಡ ಇದು ಹೆಚ್ಚಿಸುವುದು. ಹೊಟ್ಟೆಯ ಕೊಬ್ಬು ಇಳಿಸುವ ಏಳು ವಿಧಾನಗಳ ಬಗ್ಗೆ ನೀವು ತಿಳಿಯಿರಿ.
ಪ್ರತಿದಿನ ಬೆಳಗ್ಗೆ ಬೆಳ್ಳುಳ್ಳಿ ಎಸಳುಗಳನ್ನು ತಿಂದ ಬಳಿಕ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದಲೂ ಹೊಟ್ಟೆಯ ಕೊಬ್ಬನ್ನು ಆರಾಮಾಗಿ ಕರಗಿಸಬಹುದು. ನಿಂಬೆ ರಸವನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಮಿಶ್ರಣ ಮಾಡಿ, ಆದರೆ ಅದಕ್ಕೆ ಉಪ್ಪು/ ಸಕ್ಕರೆ ಸೇರಿಸಬೇಡಿ. ಸಕ್ಕರೆಯ ಬದಲು ಜೇನುತುಪ್ಪವನ್ನು ಮಿಕ್ಸ್ ಮಾಡಿ ಕುಡಿಯಿರಿ. ಇದನ್ನು ಪ್ರತೀದಿನ ಬೆಳಗ್ಗೆ ನಿಯಮಿತವಾಗಿ ಕುಡಿಯುತ್ತಾ ಹೋದರೆ ನಮ್ಮ ಚಯಾಪಚಯ(ಮೆಟಬಾಲಿಕ್) ಕ್ರಿಯೆ ಸುಧಾರಿಸುತ್ತದೆ. ಜೊತೆಗೆ ಹೊಟ್ಟೆಯ ಬೊಜ್ಜು ಕರಗುತ್ತದೆ.
ತೂಕ ಕಡಿಮೆಯಾಗಲು ಊಟದಲ್ಲಿ ಅನ್ನ ಆಹಾರ ಸೇವನೆ ಕಡಿಮೆ ಮಾಡಿ. ಅನ್ನದ ಬದಲಿಗೆ ಕೆಂಪು ಅನ್ನ, ಗೋಧಿ ಬ್ರೆಡ್ ಹಾಗೂ ಓಟ್ಮೀಲ್ ಬಳಸಿ. ಈ ರೀತಿ ಮಾಡುವುದರಿಂದ ಕ್ರಮೇಣವಾಗಿ ತೂಕ ಇಳಿಯಲು ಸಾಧ್ಯವಾಗುತ್ತದೆ.
ನಿಮ್ಮ ಅಡುಗೆ ಪದಾರ್ಥಗಳಲ್ಲಿ ದಾಲ್ಚಿನ್ನಿ, ಶುಂಠಿ, ಕರಿಮೆಣಸು ಮತ್ತು ಹಸಿರು ಮೆಣಸನ್ನು ಹೆಚ್ಚಾಗಿ ಬಳಸಿ, ಈ ಎಲ್ಲಾ ಮಸಾಲೆ ಪದಾರ್ಥಗಳು ಬಹಳ ಆರೋಗ್ಯಕರ. ಇವು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತವೆ. ಆ ಮೂಲಕ ದೇಹದ ತೂಕವನ್ನು ಸರಾಗವಾಗಿ ಇಳಿಸಿಕೊಳ್ಳಬಹುದು.
7 ದಿನಗಳವರೆಗೆ ಸಿಹಿ ತಿಂಡಿಗಳು, ಬೇಕರಿ ಪದಾರ್ಥಗಳು ಹಾಗೂ ಸಕ್ಕರೆ ತಿನ್ನುವುದನ್ನು ಆದಷ್ಟು ಕಡಿ ಮಾಡಿ. ಐಸ್ಕ್ರೀಂಗಳು, ಚಾಕೋಲೇಟ್ಗಳ ಸೇರಿದಂತೆ ಸ್ವೀಟ್ಸ್ಗಳನ್ನು ತಿನ್ನುವುದನ್ನು ಬಿಟ್ಟರೆ, ಸಣ್ಣಗಾಗಲು ಸಾಧ್ಯವಾಗುತ್ತದೆ.
ಹೆಚ್ಚಾಗಿ ಮಾಂಸ ತಿನ್ನುವುದರಿಂದಲು ತೂಕ ಹೆಚ್ಚಾಗುತ್ತದೆ. ಹೀಗಾಗಿ ಮಾಂಸ ಸೇವನೆ ಕಡಿಮೆ ಮಾಡಿದರೆ ಹೊಟ್ಟೆಯ ಬೊಜ್ಜು ತಾನಾಗಿಯೇ ಇಳಿಯತ್ತದೆ. ಚಿಕನ್, ಮಟನ್, ಮೊಟ್ಟೆ, ಮೀನು- ಈ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಡಿ. ಕೆಲವೊಂದು ಮೀನುಗಳನ್ನು ತಿನ್ನಬಹುದು.
ಹೊಟ್ಟೆ ಬೊಜ್ಜು ಕರಗಿಸಲು ಇರುವ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದರೆ ಅದು ಹೆಚ್ಚಾಗಿ ನೀರು ಕುಡಿಯುವುದು. ಪ್ರತಿದಿನ 3-4 ಲೀಟರ್ ಶುದ್ಧ ನೀರು ಕುಡಿಯುವುದು ಬಹಳ ಮುಖ್ಯ. ಇದು ನಮ್ಮ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಕಲ್ಮಶಗಳು ದೇಹದಿಂದ ಹೊರಹಾಕಲ್ಪಡುತ್ತವೆ. ನೀವು ಈ ಡಯೆಟ್ನ್ನು ಅನುಸರಿಸಿದರೆ ಖಂಡಿತವಾಗಿಯೂ ತೂಕವನ್ನು ಕಳೆದುಕೊಳ್ಳುತ್ತೀರಿ.