ನರಿ ಅನ್ನು ಜಂಬುಕ ಎಂದು ಕೂಡ ಕರೆಯುತ್ತಾರೆ.ಈ ನರಿಯು ಕೆಲವು ಕಡೆ ಮಾತ್ರ ಕಾಣುತ್ತದೆ. ಈ ನರಿಯ ಶುಭ ಹಾಗು ಅಶುಭ ಶಕುನಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಮೊದಲು ನರಿಯು ಇಂದ್ರ ದಿಕ್ಕಿನಲ್ಲಿ ನಿಂತು ಕೂಗಿದರೆ ಶತ್ರುವಿಗೆ ಪರಜಯವಾಗುವುದು.
ಅಗ್ನೇಯ ದಿಕ್ಕಿನಲ್ಲಿ ನರಿ ನಿಂತುಕೊಂಡು ಕೂಗಿದರೆ ಬಂಧುಗಳ ಆಗಮನ ಆಗುವುದು. ಹಾಗೆಯೇ ದಕ್ಷಿಣ ದಿಕ್ಕಿನಲ್ಲಿ ನರಿ ಏನಾದರು ನಿಂತು ಕೂಗಿದರೆ ಉಡುಗೊರೆ ದೊರೆಯುವುದು.
ಒಂದು ವೇಳೆ ನರಿಯು ನೈರುತ್ಯ ದಿಕ್ಕಿನಲ್ಲಿ ನಿಂತು ಕೂಗಿದರೆ ದ್ರವ್ಯ ನಾಶವಾಗುವುದು. ಇನ್ನು ವರುಣ ದಿಕ್ಕಿನಿಂದ ನರಿಯು ಒಂದೇ ಸಮನೆ ಕೂಗುತ್ತಿದ್ದಾರೆ ಮಳೆ ಸುರಿಯುವುದು.
ಇನ್ನು ವಾಯುವ್ಯಾ ದಿಕ್ಕಿನಲ್ಲಿ ನರಿ ಏನಾದರು ನಿಂತು ಕೂಗಿದರೆ ಆ ಊರಿನ ಜನತೆಗೆ ಅಥವ ಗ್ರಾಮಕ್ಕೆ ತೊಂದರೆ ಆಗುವುದು. ಕುಬೇರ ದಿಕ್ಕಿನಲ್ಲಿ ನರಿಯು ನಿಂತು ಕೂಗಿದರೆ ದೊರೆಯ ಆಗಮನ ಆಗುವುದು ಹಾಗು ಈಶನ್ಯ ದಿಕ್ಕಿನಲ್ಲಿ ನಿಂತು ನರಿ ಕೂಗಿದರೆ ಜಯ ಲಕ್ಷ್ಮಿ ಒಲೆಯುವಳು.