ಪಟಪಟೆ ಎಲೆ ಅಥವಾ ಕಾಡು ಬಸಳೆಯನ್ನು ಪುಸ್ತಕದಲ್ಲಿ ಇಟ್ಟರೆ ಬೇರು ಬರುತ್ತದೆ ಎಂದು ಚಿಕ್ಕ ವಯಸ್ಸಿನಲ್ಲಿ ಮಾತನಾಡಿಕೊಳ್ಳುವುದಿತ್ತು. ಆದರೆ ಈ ಕಾಡು ಬಸಳೆ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಸಾಮಾನ್ಯವಾಗಿ ಈ ಕಾಡು ಬಸಳೆಯನ್ನು ಆಫೀಸ್ ಅಥವಾ ಮನೆಗಳಲ್ಲಿ ಅಲಂಕಾರಿಕ ಗಿಡವಾಗಿ ನೆಡುತ್ತಾರೆ. ಆಯುರ್ವೇದದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಕಾಡು ಬಸಳೆ ಸಸ್ಯವು 150 ಕ್ಕೂ ಹೆಚ್ಚು ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಇದು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್, ಆಂಟಿಮೈಕ್ರೊಬಿಯಲ್, ಆಂಟಿಫಂಗಲ್, ಹಿಸ್ಟಮಿನ್ ವಿರೋಧಿ ಮತ್ತು ಅನಾಫಿಲ್ಯಾಕ್ಟಿಕ್ ಗುಣಗಳನ್ನು ಹೊಂದಿದೆ. ಈ ಸಸ್ಯದ ಎಲೆಗಳು ಸ್ವಲ್ಪ ದಪ್ಪ ಮತ್ತು ಹುಳಿಯಾಗಿರುತ್ತವೆ. ಹಾಗಿದ್ದರೆ ಕಾಡು ಬಸಳೆ ಎಲೆಯ ಪ್ರಯೋಜನಗಳ ಬಗ್ಗೆ ತಿಳಿಯುವುದು ಸೂಕ್ತ.
ಮೂತ್ರಪಿಂಡದ ಸಮಸ್ಯೆಗಳನ್ನು ತಡೆಗಟ್ಟುತ್ತದೆ—ಮೂತ್ರಪಿಂಡದ ಸಮಸ್ಯೆ ಮತ್ತು ಮೂತ್ರಪಿಂಡದ ಕಲ್ಲು ಇರುವವರಿಗೆ ಕಾಡು ಬಸಳೆ ಎಲೆಗಳು ತುಂಬಾ ಒಳ್ಳೆಯದು. ಈ ಎಲೆಗಳನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಿನ್ನಬೇಕು ಅಥವಾ ನೀವು ಬೆಳಿಗ್ಗೆ 30 ಮಿಲೀ ನೀರಿಗೆ ಎಲೆ ಹಾಕಿದ ಕಷಾಯವನ್ನು ಕುಡಿಯಬಹುದು. ಇದು ಮೂತ್ರಪಿಂಡ ಮತ್ತು ಮೂತ್ರಕೋಶದಲ್ಲಿನ ಕಲ್ಲುಗಳನ್ನು ಕರಗಿಸುತ್ತದೆ. ಆ ಮೂಲಕ ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ.
ಮಧುಮೇಹ ನಿವಾರಕ–ಕಾಡು ಬಸಳೆ ಎಲೆ ರಕ್ತದಲ್ಲಿನ ಕ್ರಿಯೇಟಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರ 2 ಎಲೆಗಳನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಿನ್ನುವುದರಿಂದ ಮಧುಮೇಹ ಕಡಿಮೆಯಾಗುತ್ತದೆ. ದೇಹದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.
ಜೀರ್ಣಾಂಗವ್ಯೂಹದ ಸಮಸ್ಯೆಗಳಿಗೆ ರಾಮಬಾಣ–ಕಾಡು ಬಸಳೆ ತಿನ್ನುವುದರಿಂದ ಗ್ಯಾಸ್ಟ್ರಿಕ್ ಅಲ್ಸರ್ ಕಡಿಮೆಯಾಗುತ್ತದೆ. ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆಗಳನ್ನು ಇದು ತಡೆಯುತ್ತದೆ.
ಸೋಂಕು ನಿವಾರಕ–ಶೀತ, ಕೆಮ್ಮು ಮತ್ತು ಅತಿಸಾರದಿಂದ ಬಳಲುತ್ತಿರುವವರಿಗೆ ಕಾಡು ಬಸಳೆ ಎಲೆ ಉತ್ತಮ ಔಷಧಿಯಾಗಿದೆ. ಈ ಎಲೆಗಳು ಮಲೇರಿಯಾ ಮತ್ತು ಟೈಫಾಯಿಡ್ ಜ್ವರಕ್ಕೆ ಉತ್ತಮ. ಪೈರೆಟಿಕ್ ಗುಣಗಳನ್ನು ಈ ಎಲೆ ಹೊಂದಿದೆ.
ರಕ್ತದೊತ್ತಡ ಸಮಸ್ಯೆ ಕಡಿಮೆ ಮಾಡುತ್ತದೆ—ಕಾಡು ಬಸಳೆ ಗಿಡದ ರಸವನ್ನು ಐದರಿಂದ ಹತ್ತು ಹನಿ ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಿಸಬಹುದು.
ಕೂದಲಿನ ಸಮಸ್ಯೆಗಳಿಗೆ ರಾಮಬಾಣ–ಈ ಎಲೆಗಳನ್ನು ತಿನ್ನುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಬಿಳಿ ಕೂದಲಿನ ಸಮಸ್ಯೆಯನ್ನು ಕಾಡು ಬಸಳೆ ಕಡಿಮೆ ಮಾಡುತ್ತದೆ.
ಕಾಮಾಲೆ ನಿವಾರಕ–ಕಾಮಾಲೆ ಇರುವವರು ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಈ ಎಲೆಯ ರಸವನ್ನು 30 ಮೀಲಿ ತೆಗೆದುಕೊಳ್ಳಬೇಕು. ಇದು ರೋಗವನ್ನು ಗುಣಪಡಿಸುತ್ತದೆ. ಅಲ್ಲದೆ ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಯೋನಿ ಸಮಸ್ಯೆ ಕಡಿಮೆ ಮಾಡುತ್ತದೆ–ಮಹಿಳೆಯರಲ್ಲಿ ಯೋನಿ ಸೋಂಕು ಹೆಚ್ಚಾಗಿ ಕಂಡುಬರುತ್ತದೆ. ಅಂತಹ ಜನರು ಜೇನುತುಪ್ಪದೊಂದಿಗೆ ಕಾಡು ಬಸಳೆ ಎಲೆ ಬೆರಿಸಿ ಸೇವಿಸುವುದು ಉತ್ತಮ. ಹೀಗೆ ಮಾಡುವುದರಿಂದ ತ್ವರಿತ ಪರಿಹಾರ ಸಿಗುತ್ತದೆ.
ತಲೆನೋವು–ಕಾಡು ಬಸಳೆ ಎಲೆಯನ್ನು ಹಣೆಗೆ ಹಚ್ಚುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಇದಲ್ಲದೆ ಹೃದಯವು ಆರೋಗ್ಯಕರವಾಗಿರುತ್ತದೆ. ಮೂತ್ರದಲ್ಲಿನ ರಕ್ತ ಮತ್ತು ಕೀವು ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತವೆ. ಅಲ್ಲದೆ ಕಿವುಡುತನವೂ ದೂರವಾಗುತ್ತದೆ.