ಒಂದೊಂದು ದಿನ ಹುಟ್ಟಿದವರಿಗೆ ಒಂದೊಂದು ಗುಣಗಳಿರುತ್ತದೆ. ಅದೇ ರೀತಿ ನಾವಿಂದು 7ನೇ ತಾರೀಖಿನಂದು ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ.
7 ವಿಶೇಷವಾದ ಸಂಖ್ಯೆಯಾಗಿದೆ. ಪ್ರಮುಖ ಋಷಿಗಳು 7 ಜನರಿದ್ದಾರೆ. ಅವರನ್ನ ಸಪ್ತರ್ಷಿಗಳು ಎನ್ನುತ್ತಾರೆ. ಕಾಮನಬಿಲ್ಲಿನಲ್ಲಿ 7 ಸಂಖ್ಯೆಗಳಿದೆ. ವಾರದಲ್ಲಿ 7 ದಿನಗಳಿದೆ. ಸಪ್ತಸಾಗರವಿದೆ. ಸಪ್ತಸ್ವರಗಳಿದೆ. ಹೀಗೆ 7 ವಿಶೇಷ ಸಂಖ್ಯೆ ಎನ್ನಿಸಿಕೊಂಡಿದೆ. ಈ ದಿನ ಹುಟ್ಟಿದವರು ಕೂಡ ವಿಶೇಷವಾದವರೇ ಅಂತಾ ಹೇಳಬಹುದು. ಇನ್ನು ಏಳು ಸರ್ಪಕ್ಕೆ ಸಂಬಂಧಿಸಿದ ಸಂಖ್ಯೆಯಾಗಿದೆ. ಹಾಗಾಗಿ ಏಳನೇ ತಾರೀಖಿನಂದು ಜನಿಸಿದವರಿಗೆ ಸರ್ಪದ ಗುಣವಿರುತ್ತದೆ ಅಂತಾ ಹೇಳಲಾಗುತ್ತದೆ.
ಕದ್ರುವಿಗೆ ಜನಿಸಿದ ಸರ್ಪಗಳಲ್ಲಿ ಶೇಷನಾಗನೂ ಕೂಡ 7ನೇಯವನಾಗಿದ್ದಾನೆ. ಸೂಕ್ಷ್ಮ ಸ್ವಭಾವದ ಇವರು, ಅಷ್ಟು ಸುಲಭವಾಗಿ ಮಾತಿಗೆ ಸಿಲುಕುವವರಲ್ಲ. ಇವರು ಒಂದಕ್ಕಿಂತ ಹೆಚ್ಚು ಭಾಷೆಯನ್ನ ಕಲಿಯುತ್ತಾರೆ. ಯಾಕಂದ್ರ ಇವರು ಜನಿಸಿದ ಮನೆಯಲ್ಲಿ ಎರಡು ಜಾತಿಗಳು ಇರುತ್ತದೆ. ಹಾಗಾಗಿ ಎರಡೂ ಕಡೆಯ ಭಾಷೆಯನ್ನ ಇವರು ಕಲಿಯುತ್ತಾರೆ. ಇವರು ಇನ್ನೊಂದು ಜಾತಿಯವರೊಂದಿಗೆ ವಿವಾಹವೂ ಆಗುವ ಸಾಧ್ಯತೆ ಇದೆ. ಯಾಕಂದ್ರೆ ಇವರು ಇರುವ ಮನೆಯಲ್ಲಿ ಎರಡು ಬೇರೆ ಬೇರೆ ಜಾತಿಗಳ ಜನರಿರುತ್ತಾರೆ.
ಮನೆಯಲ್ಲಿ ಕೂರಲು ಬಯಸದಿದ್ದರೂ, ಇವರು ಏಕಾಂಗಿಯಾಗಿರುವುದು, ಅಥವಾ ಹೊರಗೆ ಹೋಗದೇ ಇರುವುದೇ ಹೆಚ್ಚು. ಆದ್ರೆ ಇವರು ಅಲೆದಾಟ ಪ್ರಿಯರಾಗಿದ್ದು, ತಿರುಗಾಡುವ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಹೊರಗೆ ತಿರುಗಾಡುವುದು, ರುಚಿ ರುಚಿ ತಿಂಡಿ ಸವಿಯುವುದು, ಹರಟೆ ಹೊಡಿಯುವ ಬಯಕೆ ಇವರದ್ದಾಗಿರುತ್ತದೆ.